ಮಂಗಳವಾರ, 8 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ತಗ್ಗಿದ ಭೂಮಿ ಪರಿಭ್ರಮಣೆಯ ವೇಗ

Published : 28 ಮಾರ್ಚ್ 2024, 15:48 IST
Last Updated : 28 ಮಾರ್ಚ್ 2024, 15:48 IST
ಫಾಲೋ ಮಾಡಿ
Comments

ನವದೆಹಲಿ : ‘ಜಾಗತಿಕ ತಾಪಮಾನದ ಏರಿಕೆಯಿಂದಾಗಿ ಗ್ರೀನ್‌ಲ್ಯಾಂಡ್‌ ಮತ್ತು ಅಂಟಾರ್ಟಿಕದಲ್ಲಿನ ಹಿಮವು ಕರಗುತ್ತಿ‌‌ದೆ. ಇದು ಭೂಮಿಯ ಪರಿಭ್ರಮಣೆಯ ವೇಗವನ್ನು ನಿಧಾನಗೊಳಿಸುವುದರ ಮೂಲಕ ವಿಶ್ವದಾದ್ಯಂತ ಸಮಯದ ಪಾಲನೆಯ ಮೇ‌‌ಲೂ ಪರಿಣಾಮ ಬೀರಲಿದೆ’ ಎಂದು ಹೊಸ ಸಂಶೋಧನೆಯೊಂದು ತಿಳಿಸಿದೆ.

‘ಮೂರು ವರ್ಷದ ನಂತರ ಸಂಯೋಜಿತ ಸಾರ್ವತ್ರಿಕ ಸಮಯದಿಂದ (ಯುಟಿಸಿ) ಒಂದು ಸೆಕೆಂಡ್‌ ಕಡಿತಗೊಳಿಸಬೇಕಾಗಬಹುದು’ ಎಂಬುದು ಸಂಶೋಧನೆಯಿಂದ ಗೊತ್ತಾಗಿದೆ. 

‘ಭೂಮಿಯು ಎಲ್ಲ ಸಮಯದಲ್ಲೂ ಒಂದೇ ವೇಗದಲ್ಲಿ ತಿರುಗುವುದಿಲ್ಲವಾದ್ದರಿಂದ, ಯುಟಿಸಿ ಆಗೀಗ ನಿರಂತರೆಯನ್ನು ಕಳೆದುಕೊಳ್ಳುತ್ತದೆ’ ಎಂದು ಅಧ್ಯಯನದ ಲೇಖಕ ಡಂಕನ್ ಆಗ್ನ್ಯೂ ವಿವರಿಸಿದ್ದಾರೆ.

‘1972ರಿಂದ, ನಿರಂತರೆಯನ್ನು ಯುಟಿಸಿ ಕಳೆದುಕೊಳ್ಳುವ ಸಂದರ್ಭಕ್ಕೆ ‘ಲೀಪ್ ಸೆಕೆಂಡ್’ ಒಂದನ್ನು ಸೇರಿಸಬೇಕಾಗಿದೆ. ಏಕೆಂದರೆ ಕಂಪ್ಯೂಟಿಂಗ್‌ ಮತ್ತು ಹಣಕಾಸು ಮಾರುಕಟ್ಟೆಗಳಂತಹ ಅನೇಕ ನೆಟ್‌ವರ್ಕ್‌ ಚಟುವಟಿಕೆಗೆ ಯುಟಿಸಿ ಒದಗಿಸಿದ ಸ್ಥಿರ, ಪ್ರಮಾಣೀಕೃತ ಮತ್ತು ನಿಖರವಾದ ಸಮಯದ ಅಗತ್ಯವಿದೆ’ ಎಂದು ಅವರು ಹೇಳಿದ್ದಾರೆ.

‌ಅಮೆರಿಕದ ಕ್ಯಾಲಿಫೋರ್ನಿಯಾದ ಸ್ಯಾನ್‌ ಡಿಯಾಗೋ ವಿಶ್ವವಿದ್ಯಾಲಯದಲ್ಲಿ ಆಗ್ನ್ಯೂ ‌ಭೂ ಭೌತವಿಜ್ಞಾನಿಯಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT