ಬಾಂಗ್ಲಾದೇಶ ಮತ್ತೊಮ್ಮೆ ಪ್ರಕ್ಷುಬ್ಧಗೊಂಡಿದೆ .ಇಂಕ್ವಿಲಾಬ್ ಮಂಚ್ ವಕ್ತಾರ ಶರೀಫ್ ಉಸ್ಮಾನ್ ಹಾದಿ ಹತ್ಯೆಯಿಂದ ಪರಿಸ್ಥಿತಿ ಉದ್ವಿಗ್ನಗೊಂಡಿದ್ದು, ಹಲವೆಡೆ ಹಿಂಸಾಚಾರ ನಡೆದಿವೆ. ಹಿಂದೂವೊಬ್ಬರ ಮೇಲೆ ಗುಂಪು ಹಲ್ಲೆ ನಡೆಸಿ ಹತ್ಯೆ ಮಾಡಲಾಗಿದೆ. ಈ ಬೆಳವಣಿಗೆಗಳು ಭಾರತದ ಮೇಲೆ ಎಂಥ ಪರಿಣಾಮ ಬೀರಲಿವೆ ಎನ್ನುವುದರ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಬಾಂಗ್ಲಾದಲ್ಲಿ ಇಸ್ಲಾಂ ಮೂಲಭೂತವಾದಿಗಳ ಕೈ ಮೇಲಾಗುತ್ತಿದ್ದು, ಭಾರತ ವಿರೋಧಿ ಭಾವನೆ ತೀವ್ರಗೊಳ್ಳುತ್ತಿದೆ. ಇದರಿಂದಾಗಿ ಉಭಯ ರಾಷ್ಟ್ರಗಳ ನಡುವೆ ರಾಜತಾಂತ್ರಿಕ ಬಿಕ್ಕಟ್ಟು ಸೃಷ್ಟಿಯಾಗಿದೆ
ಉದ್ರಿಕ್ತ ಪ್ರತಿಭಟನಕಾರರು ಢಾಕಾದಲ್ಲಿರುವ ಪ್ರೊಥೊಮ್ ಅಲೊ ಪತ್ರಿಕಾ ಕಚೇರಿಯಲ್ಲಿ ಬೆಂಕಿ ಹಾಕಿದ್ದರು ಎಎಫ್‌ಪಿ ಚಿತ್ರ