ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ–ಅಗಲ: ಕರ್ನಾಟಕದಲ್ಲಿ ಕೆಟ್ಟುನಿಂತ ‘ಡಬಲ್ ಎಂಜಿನ್’

Published 18 ಮೇ 2023, 19:48 IST
Last Updated 18 ಮೇ 2023, 19:48 IST
ಅಕ್ಷರ ಗಾತ್ರ

–ದೇವೇಶ್ ಕುಮಾರ್ ಮತ್ತು ಪ್ರಿಯಾಂಕಾ ಮಿತ್ತಲ್

ಬಿಜೆಪಿ ಹುಟ್ಟುಹಾಕಿದ ‘ಡಬಲ್ ಎಂಜಿನ್’ ಪರಿಕಲ್ಪನೆಯು ಕರ್ನಾಟಕದ ಮತದಾರರ ಮನವೊಲಿಸುವಲ್ಲಿ ವಿಫಲವಾಗಿದೆ. ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದು, ರಾಜ್ಯದಲ್ಲಿಯೂ ಅದೇ ಸರ್ಕಾರವನ್ನು ಆಯ್ಕೆ ಮಾಡಿದರೆ, ಅಭಿವೃದ್ಧಿಗೆ ವೇಗ ಸಿಗುತ್ತದೆ ಹಾಗೂ ಕೇಂದ್ರ–ರಾಜ್ಯಗಳ ನಡುವಣ ಸಂವಹನಕ್ಕೆ ಅಡೆತಡೆ ಇರುವುದಿಲ್ಲ ಎಂದು ಬಿಜೆಪಿ ಮನವರಿಕೆ ಮಾಡಿಕೊಡಲು ಯತ್ನಿಸಿತ್ತು. ‘ಡಬಲ್‌ ಎಂಜಿನ್’ ಮಾಡೆಲ್‌ಗೆ ಹೆಚ್ಚು ಪ್ರಾಶಸ್ತ್ಯ ನೀಡಿ ಚುನಾವಣಾ ಪ್ರಚಾರದಲ್ಲಿ ಬಿಜೆಪಿ ತೊಡಗಿತ್ತು. ಆದರೆ ಮತದಾರ ಮಾತ್ರ ಇದಕ್ಕೆ ಮಣೆ ಹಾಕಿಲ್ಲ. ಈ ಮಾದರಿಯು ಚೆನ್ನಾಗಿದೆ ಎಂಬ ಭಾವನೆಯು ಬಿಜೆಪಿ ಬೆಂಬಲಿಗರಿಗೆ ಮಾತ್ರ ಸೀಮಿತವಾಗಿತ್ತು ಎಂದು ಲೋಕನೀತಿ–ಸಿಎಸ್‌ಡಿಎಸ್ ಸಮೀಕ್ಷೆ ಅಭಿಪ್ರಾಯಪಟ್ಟಿದೆ. 

ಶೇ 50ಕ್ಕಿಂತ ಹೆಚ್ಚು ಜನರು ಡಬಲ್ ಎಂಜಿನ್‌ ಮಾದರಿಯನ್ನು ಬೆಂಬಲಿಸುವುದಾಗಿ ಹೇಳಿದ್ದರೂ ಅದು ಫಲಿತಾಂಶದಲ್ಲಿ ಪ್ರತಿಫಲನವಾಗಿಲ್ಲ. ಐದನೇ ಎರಡರಷ್ಟು ಜನರು ಈ ಮಾದರಿಯನ್ನು ಒಪ್ಪಿಲ್ಲ. ಐದನೇ ಒಂದರಷ್ಟು ಜನರು ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ ಎಂದು ತಿಳಿಸಿದ್ದಾರೆ. ಬಿಜೆಪಿಯನ್ನು ಬೆಂಬಲಿಸುವವರ ಪೈಕಿ, ಐದನೇ ನಾಲ್ಕರಷ್ಟು ಜನರು ಮಾತ್ರ ಈ ಮಾದರಿಯ ಪರವಾಗಿದ್ದಾರೆ. ಬಿಜೆಪಿಯೇತರ ಮತದಾರರನ್ನು ಒಪ್ಪಿಸುವಲ್ಲಿ ಇದು ವಿಫಲವಾಗಿದೆ. ಕಾಂಗ್ರೆಸ್‌ನ ಶೇ 57ರಷ್ಟು ಹಾಗೂ ಜೆಡಿಎಸ್‌ನ ಶೇ 47ರಷ್ಟು ಮತದಾರರು ಡಬಲ್‌ ಎಂಜಿನ್‌ಗೆ ವಿರೋಧ ವ್ಯಕ್ತಪಡಿಸಿದ್ದಾರೆ. 

ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷದ ಸರ್ಕಾರವಿರಬೇಕೇ?

ಇರಬೇಕು ಎಂಬುದನ್ನು ಸಂಪೂರ್ಣವಾಗಿ ಒಪ್ಪುತ್ತೇವೆ;26%

ಸ್ವಲ್ಪಮಟ್ಟಿಗೆ ಒಪ್ಪುತ್ತೇವೆ;31%

ಒಪ್ಪುವುದಿಲ್ಲ;21%

ಸಂಪೂರ್ಣವಾಗಿ ಒಪ್ಪುವುದೇ ಇಲ್ಲ;20%

ಪ್ರತಿಕ್ರಿಯೆ ನೀಡದವರು;2%

ಡಬಲ್ ಎಂಜಿನ್ ಸರ್ಕಾರಕ್ಕೆ ವಿವಿಧ ಪಕ್ಷಗಳ ಮತದಾರರ ಬೆಂಬಲ

ಸಂಪೂರ್ಣ ಒಪ್ಪಿಗೆ;ಒಪ್ಪಿಗೆ;ಒಪ್ಪುವುದಿಲ್ಲ;ಸಂಪೂರ್ಣವಾಗಿ ಒಪ್ಪುವುದೇ ಇಲ್ಲ;ಪ್ರತಿಕ್ರಿಯೆ ನೀಡದವರು

ಕಾಂಗ್ರೆಸ್;11%;30%;28%;29%;2%

ಬಿಜೆಪಿ;48%;33%;13%;5%1%

ಜೆಡಿಎಸ್;13%;40%;12%;27%;–

ಇತರೆ ಪಕ್ಷಗಳು;29%;20%;14%;31%;6

ಲೇಖಕರು: ಲೋಕನೀತಿ–ಸಿಎಸ್‌ಡಿಎಸ್‌ನಲ್ಲಿ ಸಂಶೋಧಕರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT