ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷ ತಕ್ಷಣಕ್ಕೆ ನಿಂತಿದೆ. ಸಂಘರ್ಷದ ಬಗ್ಗೆ ಅಮೆರಿಕದ ‘ದಿ ನ್ಯೂಯಾರ್ಕ್ ಟೈಮ್ಸ್’ (ಎನ್‌ವೈಟಿ) ಪತ್ರಿಕೆಯು ವಿಶೇಷ ವರದಿ ಪ್ರಕಟಿಸಿದೆ. ದಾಳಿ, ಪ್ರತಿದಾಳಿಯಲ್ಲಿ ಯಾವ ದೇಶಕ್ಕೆ ಎಷ್ಟು ಹಾನಿಯಾಗಿದೆ ಎನ್ನುವುದನ್ನು ಉಪಗ್ರಹದಿಂದ ತೆಗೆಯಲಾದ ಚಿತ್ರಗಳೊಂದಿಗೆ ದಾಖಲಿಸಿದೆ. ಪತ್ರಿಕೆಯು ಎರಡೂ ದೇಶಗಳ ಪ್ರತಿಪಾದನೆಗಳನ್ನು ವಿಶ್ಲೇಷಿಸಿದ್ದು, ವಾಯುನೆಲೆಗಳ ಮೇಲಿನ ದಾಳಿಯ ವಿಚಾರದಲ್ಲಿ ಯಾವ ದೇಶ ಎಷ್ಟರ ಮಟ್ಟಿಗೆ ತನ್ನ ಗುರಿ ಮುಟ್ಟಿದೆ ಎನ್ನುವುದನ್ನೂ ವಿವರಿಸಿದೆ. ನಾಲ್ಕು ದಿನ ನಡೆದ ಸಂಘರ್ಷದಲ್ಲಿ ಭಾರತವು ಮೇಲುಗೈ ಸಾಧಿಸಿತ್ತು ಎಂದು ಅದು ಹೇಳಿದೆ
ಪಾಕಿಸ್ತಾನದ ನೂರ್‌ಖಾನ್ ವಾಯುನೆಲೆಯ ಕಟ್ಟಡಕ್ಕೆ ಹಾನಿಯಾಗಿದೆ
ಭಾರತ ನಡೆಸಿರುವ ದಾಳಿಯಲ್ಲಿ ಪಾಕಿಸ್ತಾನದ ಸರ್ಗೋಧಾ ವಾಯುನೆಲೆಯಲ್ಲಿರುವ ರನ್‌ವೇಯ ಎರಡು ಕಡೆಗಳಲ್ಲಿ ಕುಳಿ ಬಿದ್ದಿದೆ
ಪಾಕಿಸ್ತಾನದ ಭೋಲಾರಿ ವಾಯುನೆಲೆಯ ಮೇಲೆ ಭಾರತ ನಡೆಸಿದ ದಾಳಿಯಲ್ಲಿ ವಾಯುಪಡೆಗೆ ಸೇರಿದ ಕಟ್ಟಡ ಹಾನಿಗೀಡಾಗಿರುವುದು
ಮೇ 12ರಂದು ತೆಗೆದಿರುವ ಭಾರತದ ಉಧಂಪುರ ವಾಯುನೆಲೆಯ ಉಪಗ್ರಹ ಚಿತ್ರ. ವಾಯುನೆಲೆಗೆ ಹಾನಿಯಾಗಿರುವುದು ಚಿತ್ರದಲ್ಲಿ ಕಂಡು ಬಂದಿಲ್ಲ
ರಹೀಂ ಯಾರ್ ಖಾನ್ ಏರ್‌ಫೀಲ್ಡ್‌ನ ರನ್‌ವೇಗೆ ಹಾನಿಯಾಗಿರುವುದು