24 ಸೆಕೆಂಡ್ಗಳ ವಿಡಿಯೊ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ವಿಮಾನದಲ್ಲಿ ವ್ಯಕ್ತಿಯೊಬ್ಬ ‘ಅಲ್ಲಾ ಹೋ ಅಕ್ಬರ್’, ‘ಅಮೆರಿಕದ ಸಾವು’, ‘ಟ್ರಂಪ್ ಸಾವು’ ಎಂದು ಕೂಗುವುದು ವಿಡಿಯೊದಲ್ಲಿ ದಾಖಲಾಗಿದೆ. ಹೀಗೆ ಕೂಗಿದ ವ್ಯಕ್ತಿ ಮುಸ್ಲಿಂ ಎಂದೂ, ಪಾಕಿಸ್ತಾನಿ ಎಂದೂ ಪೋಸ್ಟ್ ಹಂಚಿಕೊಳ್ಳುತ್ತಿರುವವರು ಪ್ರತಿಪಾದಿಸುತ್ತಿದ್ದಾರೆ. ಆದರೆ, ಅದು ಸುಳ್ಳು ಸುದ್ದಿ.

ಪ್ರಕರಣದ ಬಗ್ಗೆ ಅಧಿಕೃತ ಮಾಹಿತಿ ತಿಳಿಯಲು ನಿರ್ದಿಷ್ಟ ಪದದ ಮೂಲಕ ಗೂಗಲ್ನಲ್ಲಿ ಹುಡುಕಾಟ ನಡೆಸಿದಾಗ ಬಿಬಿಸಿಯಲ್ಲಿ ಪ್ರಕಟವಾಗಿದ್ದ ವರದಿ ಕಂಡಿತು. ಅದರಲ್ಲಿ ಜುಲೈ 27ರಂದು ಲೂಟನ್ನಿಂದ ಗ್ಲಾಸ್ಗೊಗೆ ಸಂಚರಿಸುತ್ತಿದ್ದ ವಿಮಾನದಲ್ಲಿ ಘೋಷಣೆಗಳನ್ನು ಕೂಗಿದ ವ್ಯಕ್ತಿಯ ಹೆಸರು ಅಭಯ್ ನಾಯಕ್ ಎಂದು ಉಲ್ಲೇಖಿಸಲಾಗಿತ್ತು. ‘ಡೆಕ್ಕನ್ ಹೆರಾಲ್ಡ್’ ಸೇರಿದಂತೆ ಪ್ರಮುಖ ಪತ್ರಿಕೆಗಳಲ್ಲಿಯೂ ಈ ಬಗ್ಗೆ ವರದಿಗಳು ಪ್ರಕಟವಾಗಿವೆ. ಎಲ್ಲ ಪತ್ರಿಕೆಗಳಲ್ಲಿಯೂ ಆ ವ್ಯಕ್ತಿಯ ಹೆಸರು ಅಭಯ್ ದೇವದಾಸ್ ನಾಯಕ್ ಎಂದೇ ಉಲ್ಲೇಖವಾಗಿದ್ದು, ಆತ ಭಾರತ ಸಂಜಾತನಾಗಿದ್ದು, ಇಂಗ್ಲೆಂಡ್ನ ಲೂಟನ್ ವಾಸಿ ಎಂದು ವರದಿಯಾಗಿದೆ. ಕೆಲವರು ಸುಳ್ಳು ಪ್ರತಿಪಾದನೆಗಳೊಂದಿಗೆ ವಿಡಿಯೊ ಹಂಚಿಕೊಳ್ಳುತ್ತಿದ್ದಾರೆ ಎಂದು ಆಲ್ಟ್ ನ್ಯೂಸ್ ಫ್ಯಾಕ್ಟ್ ಚೆಕ್ ವರದಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.