2025ರಲ್ಲಿ ಜಾಗತಿಕ ರಾಜಕಾರಣವು ಹಲವು ಬೆಳವಣಿಗೆಗಳಿಗೆ ಸಾಕ್ಷಿಯಾಯಿತು. ಅಭಿವೃದ್ಧಿ ಹೊಂದಿದ ಕೆಲವು ರಾಷ್ಟ್ರಗಳಲ್ಲಿ ಹೊಸ ನಾಯಕರು ಅಧಿಕಾರ ಹಿಡಿದರು. ಇನ್ನೂ ಕೆಲವು ರಾಷ್ಟ್ರಗಳಲ್ಲಿ ರಾಜಕೀಯ ಅಸ್ಥಿರತೆ ಕಂಡು ಬಂತು. ನೇಪಾಳದಲ್ಲಿ ಸರ್ಕಾರದ ಪತನಕ್ಕೆ ಜೆನ್ ಝೀ ಕಾರಣವಾದರೆ, ಮತ್ತೂ ಕೆಲವೆಡೆ ಅಧಿಕಾರಸ್ಥರಿಗೆ ಬಿಸಿ ಮುಟ್ಟಿಸಿತು

ಅಮೆರಿಕ ನಾಯಕತ್ವ ಬದಲು

ಅಮೆರಿಕದ ಅಧ್ಯಕ್ಷರಾಗಿ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಅವರು ಎರಡನೇ ಬಾರಿಗೆ ಅಧಿಕಾರ ಸ್ವೀಕರಿಸಿದರು. ಅಮೆರಿಕ ಮೊದಲು ನೀತಿಯನ್ನು ಪ್ರತಿಪಾದಿಸುತ್ತಾ ‘ಮಗಾ’ (MAGA-Make America Great Again) ಎಂಬ ಘೋಷಣೆ ಮಾಡುತ್ತಾ ಅಧಿಕಾರ ಹಿಡಿದ ಅವರು ಹೊರದೇಶಗಳಿಂದ ಆಮದು ಮಾಡುವ ವಸ್ತುಗಳಿಗೆ ಪ್ರತಿ ಸುಂಕ ಹೇರುವ, ವಲಸಿಗರು ಅದರಲ್ಲೂ ಅಕ್ರಮ ವಲಸಿಗರ ವಿರುದ್ಧ ಕಠಿಣ ಕ್ರಮ, ಎಚ್1ಬಿ ವೀಸಾ ನಿರ್ಬಂಧ, ವಿದೇಶಿ ಉದ್ಯೋಗಿಗಳಿಗೆ ಕಡಿವಾಣ, ಹೊರದೇಶಗಳಲ್ಲಿ ಬಂಡವಾಳ ಹೂಡಲು ನಿರ್ಧರಿಸಿರುವ ಕಂಪನಿಗಳನ್ನು ಕಠಿಣ ಪದಗಳಿಂದ ಟೀಕಿಸಿ ಜಗತ್ತಿನಾದ್ಯಂತ ದೊಡ್ಡ ಸುದ್ದಿಯಾದರು. ಅವರ ಸುಂಕ ಹೇರಿಕೆಯು ಕೆನಡಾ, ಮೆಕ್ಸಿಕೊ, ಭಾರತ, ಬ್ರೆಜಿಲ್ ಸೇರಿದಂತೆ ಹಲವು ದೇಶಗಳೊಂದಿಗೆ ರಾಜತಾಂತ್ರಿಕ ಬಿಕ್ಕಟ್ಟಿಗೂ ಕಾರಣವಾಯಿತು. ಚೀನಾದೊಂದಿಗೆ ನೇರ ಸುಂಕ ಸಮರಕ್ಕೂ ಕಾರಣವಾಯಿತು. ಸುಂಕ ಹೇರಿಕೆಯನ್ನು ಮುಂದಿಟ್ಟುಕೊಂಡು ಭಾರತ ಸೇರಿದಂತೆ ಹಲವು ದೇಶಗಳನ್ನು ಬೆದರಿಸುವ ತಂತ್ರವನ್ನೂ ಅಮೆರಿಕ ಸರ್ಕಾರ ಅನುಸರಿಸಿತು.

ಕೆನಡಾಕ್ಕೆ ಹೊಸ ಪ್ರಧಾನಿ

ಲಿಬರಲ್ ಪಕ್ಷದ ನಾಯಕ ಮಾರ್ಕ್ ಕ್ಯಾರ್ನಿ ಅವರು ಕೆನಡಾದ 24ನೇ ಪ್ರಧಾನಿಯಾಗಿ ಮಾರ್ಚ್ನಲ್ಲಿ ಅಧಿಕಾರ ವಹಿಸಿಕೊಂಡರು. 10 ವರ್ಷ ಪಕ್ಷ ಹಾಗೂ ದೇಶದ ನಾಯಕತ್ವ ವಹಿಸಿದ್ದ ಜಸ್ಟಿನ್ ಟ್ರೂಡೊ ಅವರು ಪ್ರಧಾನಿ ಸ್ಥಾನಕ್ಕೆ ರಾಜಕೀಯ ಬಿಕ್ಕಟ್ಟಿನ ಕಾರಣಕ್ಕೆ ರಾಜಿನಾಮೆ ನೀಡಿದ ನಂತರ ಕ್ಯಾರ್ನಿ ಪ್ರಧಾನಿ ಹುದ್ದೆಗೆ ಏರಿದರು. ನಂತರ ನಡೆದ ಸಂಸತ್ ಚುನಾವಣೆಯಲ್ಲಿ ಮತ್ತೆ ಪಕ್ಷವನ್ನು ಅಧಿಕಾರಕ್ಕೆ ತಂದರು. ಟ್ರೂಡೊ ಅವಧಿಯಲ್ಲಿ ಭಾರತದೊಂದಿಗೆ ಹಳಸಿದ್ದ ರಾಜತಾಂತ್ರಿಕ ಸಂಬಂಧವನ್ನು ಮತ್ತೆ ಹಳಿಗೆ ಮರಳಿಸಲು ಮಾರ್ಕ್ ಯತ್ನಿಸುತ್ತಿದ್ದಾರೆ.

ಜಪಾನ್ಗೆ ಮೊದಲ ಮಹಿಳಾ ಪ್ರಧಾನಿ

ಜಗತ್ತಿನ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಒಂದಾದ ಜಪಾನ್ನಲ್ಲಿ ಈ ವರ್ಷ ರಾಜಕೀಯ ಅಸ್ಥಿರತೆ ಕಂಡು ಬಂತು. ಆಡಳಿತಾರೂಢ ಲಿಬರಲ್ ಡೆಮಾಕ್ರಟಿಕ್ ಪಕ್ಷದ ನಾಯಕಿಯಾಗಿ ಆಯ್ಕೆಯಾದ ಸನೇ ತಕೈಚಿ ಅವರು ಅಕ್ಟೋಬರ್ ತಿಂಗಳಲ್ಲಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದರು. ತಕೈಚಿ ಅವರು ಜಪಾನಿನ ಮೊದಲ ಮಹಿಳಾ ಪ್ರಧಾನಿ. ಅದಕ್ಕೂ ಮೊದಲು ಒಂದು ವರ್ಷ ಪ್ರಧಾನಿಯಾಗಿದ್ದ ಶಿಗೇರು ಇಶಿಬಾ ನೇತೃತ್ವದಲ್ಲಿ ನಡೆದ ಹಲವು ಚುನಾವಣೆಗಳಲ್ಲಿ ಪಕ್ಷವು ಸೋಲು ಕಂಡಿದ್ದರಿಂದ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು

ಥಾಯ್ಲೆಂಡ್ ಪ್ರಧಾನಿ ವಜಾ

ಥಾಯ್ಲೆಂಡ್ ಮತ್ತು ಕಾಂಬೋಡಿಯಾ ನಡುವೆ ಸೇನಾ ಸಂಘರ್ಷ ನಡೆಯುತ್ತಿದ್ದ ಸಂದರ್ಭದಲ್ಲೇ ಥಾಯ್ಲೆಂಡ್ ಪ್ರಧಾನಿಯಾಗಿದ್ದ ಪ್ಯಾಂಟೋಗ್ಟರ್ನ್ ಶಿನವಾತ್ರ ಅವರು ಕಾಂಬೋಡಿಯಾದ ಮಾಜಿ ನಾಯಕ ಹುನ್ ಸೆನ್ ಅವರ ಜೊತೆ ದೂರವಾಣಿಯಲ್ಲಿ ಮಾತನಾಡಿದ್ದ ವಿವರ ಸೋರಿಕೆಯಾದ ಕಾರಣ ಪ್ರಕರಣದಲ್ಲಿ ಶಿನವಾತ್ರ ಅವರನ್ನು ಹುದ್ದೆಯಿಂದ ವಜಾಗೊಳಿಸುವಂತೆ ಅಲ್ಲಿನ ಸಾಂವಿಧಾನಿಕ ನ್ಯಾಯಾಲಯವು ತೀರ್ಪು ನೀಡಿತು.

ಫ್ರಾನ್ಸ್: ರಾಜಕೀಯ ಅಸ್ಥಿರತೆ

ಅಭಿವೃದ್ಧಿ ಹೊಂದಿರುವ ದೇಶಗಳಲ್ಲಿ ಒಂದಾದ ಫ್ರಾನ್ಸ್ ಈ ವರ್ಷ ರಾಜಕೀಯ ಅಸ್ಥಿರತೆಗೆ ಸಾಕ್ಷಿಯಾಯಿತು. ಹದಗೆಟ್ಟ ಆರ್ಥಿಕತೆ, ನಿರುದ್ಯೋಗ, ಸಾಲವು ದೇಶವನ್ನು ಬಾಧಿಸುತ್ತಿದ್ದು, ಆಡಳಿತ ನಡೆಸುವವರಿಗೆ ಅದನ್ನು ನಿಯಂತ್ರಿಸಲು ಸಾಧ್ಯವಾಗದೆ ಕೈಚೆಲ್ಲಿದರು. ಎರಡನೇ ಬಾರಿಗೆ ಅಧ್ಯಕ್ಷರಾಗಿರುವ ಇಮ್ಯಾನ್ಯುವೆಲ್ ಮ್ಯಾಕ್ರನ್ ಅವರಿಗೆ ದೇಶದಲ್ಲಿ ರಾಜಕೀಯ ಸ್ಥಿರತೆ ತರುವುದೇ ದೊಡ್ಡ ಸವಾಲಾಗಿದೆ. ಈ ವರ್ಷ ಫ್ರಾನ್ಸ್ ಮೂವರು ಪ್ರಧಾನಿಗಳನ್ನು ಕಂಡಿದೆ.

ನೇಪಾಳದಲ್ಲಿ ‘ಯುವ ಕ್ರಾಂತಿ’

ಈ ವರ್ಷದ ಸೆಪ್ಟೆಂಬರ್ ಮೊದಲ ವಾರದಲ್ಲಿ ನೆರೆಯ ನೇಪಾಳದಲ್ಲಿ ನಡೆದಿದ್ದ ಯುವ ಕ್ರಾಂತಿ ಈ ವರ್ಷ ಜಾಗತಿಕವಾಗಿ ಗಮನ ಸೆಳೆದ ಪ್ರಮುಖ ರಾಜಕೀಯ ಬೆಳವಣಿಗೆಗಳಲ್ಲೊಂದು. ಹಿಂದೆ ಶ್ರೀಲಂಕಾ, ಬಾಂಗ್ಲಾದೇಶದಲ್ಲಿ ನಡೆದಿದ್ದ ಮಾದರಿಯಲ್ಲೇ ಇಲ್ಲೂ ಯುವ ಜನರು ದಂಗೆ ಎದ್ದು ಪ್ರಧಾನಿ ಕೆ.ಪಿ.ಶರ್ಮಾ ಓಲಿ ಅವರ ಸರ್ಕಾರ ಪತನವಾಗುವಂತೆ ಮಾಡಿದರು.

ದೇಶದಲ್ಲಿ ಸಾಮಾಜಿಕ ಜಾಲತಾಣಗಳ ಮೇಲೆ ನಿರ್ಬಂಧ ವಿಧಿಸಿದ ಕಾರಣಕ್ಕೆ ‘ಜೆನ್ ಝೀ’ ಯುವ ಸಮುದಾಯ (1997ರಿಂದ 2012ರ ನಡುವೆ ಹುಟ್ಟಿದ ತಲೆಮಾರು) ನಡೆಸಿದ ಹೋರಾಟ ಇದು ಹೋರಾಟ ಹೇಳಲಾಗಿತ್ತಾದರೂ, ಈ ಆಕ್ರೋಶದ ಹಿಂದೆ ಸರ್ಕಾರದ ದುರಾಡಳಿತ, ಭ್ರಷ್ಟಾಚಾರ, ಆರ್ಥಿಕ ಕುಸಿತ, ಸ್ವಜನಪಕ್ಷಪಾತದಂತಹ ಗಂಭೀರ ಸಮಸ್ಯೆಗಳಿದ್ದವು.

ಓಲಿ ಪದಚ್ಯುತಿಯ ನಂತರ ರಾಜಕಾರಣಿ, ನಿವೃತ್ತ ನ್ಯಾಯಮೂರ್ತಿ ಸುಶೀಲಾ ಕರ್ಕಿ ನೇತೃತ್ವದ ಮಧ್ಯಂತರ ಸರ್ಕಾರ ಅಲ್ಲಿ ಅಸ್ತಿತ್ವಕ್ಕೆ ಬಂದಿದೆ.

ಬೀದಿಗೆ ಬಂದ ‘ಜೆನ್ ಝೀ’

ನೇಪಾಳದಲ್ಲಷ್ಟೇ ಅಲ್ಲ ಹಲವು ರಾಷ್ಟ್ರಗಳಲ್ಲಿ ಈ ವರ್ಷ ‘ಜೆನ್ ಝೀ’ ಎಂದು ಕರೆಯುವ ಯುವ ಸಮುದಾಯ ಸಾಮಾಜಿಕ ಜಾಲತಾಣಗಳ ಮೂಲಕ ಒಗ್ಗೂಡಿ ನಿರುದ್ಯೋಗ ಸಮಸ್ಯೆ, ಕುಸಿದ ಅರ್ಥ ವ್ಯವಸ್ಥೆ, ಆಡಳಿತ ನಡೆಸುವವರ ಭಷ್ಟಾಚಾರ, ಸ್ವಜನಪಕ್ಷಪಾತ ಇನ್ನಿತರ ಗಂಭೀರ ಸಮಸ್ಯೆಗಳ ವಿರುದ್ಧ ಬೀದಿಗಿಳಿದು ಸರ್ಕಾರಗಳಿಗೆ ಬಿಸಿ ಮುಟ್ಟಿಸಿತು. ಪೆರು, ಪಿಲಿಪ್ಪೀನ್ಸ್, ಇಂಡೊನೇಷ್ಯಾ, ಮೊರಾಕ್ಕೊ, ಮಡಗಾಸ್ಕರ್ಗಳಲ್ಲಿ ಯುವ ಜನರ ಪ್ರತಿಭಟನೆಗಳು ನಡೆದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.