ನ್ಯಾಯಾಲಯವು ಸ್ವತಃ ತಾನೇ ಕಾನೂನು ಬರೆಯಲು ಸಾಧ್ಯವಿಲ್ಲ. ಆದರೆ, ಸರ್ಕಾರಕ್ಕೆ ಅರಿವು ಮೂಡಿಸುವ ಗುರುತರ ಜವಾಬ್ದಾರಿಯನ್ನಂತೂ ಹೊಂದಿದೆ. ಹೀಗಾಗಿ, 2007ರಲ್ಲಿ ಅರ್ಥಪೂರ್ಣವೆಂದು ಭಾವಿಸಲಾದ ಮಸೂದೆಯ ನಿಬಂಧನೆಗಳು 2025ರಲ್ಲಿ ಬದಲಾಗಬೇಕಾದ ಅನಿವಾರ್ಯ ಇದೆ ಎಂಬುದನ್ನು ನಾವು ಈ ಹಂತದಲ್ಲಿ ಎದೆಗೊತ್ತಿಕೊಳ್ಳಬೇಕು. ಪೋಷಕರ ಪಾಲನೆಯ ಭತ್ಯೆ ಕೇವಲ ಭ್ರಮೆ ಎನಿಸಬಾರದು. ವಾಸ್ತವದಲ್ಲಿ ಅದು ಅವರ ನೆರವಿಗೆ ಬರಬೇಕು. ಇಲ್ಲದಿದ್ದರೆ ‘ಮರಳಿನ ಕಂಬ’ದಂತೆಯೇ ಉಳಿದು ಬಿಡುತ್ತದೆ.