2025ರಲ್ಲಿ ರಾಜ್ಯದಾದ್ಯಂತ ನಡೆದ ಪ್ರಮುಖ ಬೆಳವಣಿಗೆಗಳು, ಚರ್ಚೆಯಾದ ಪ್ರಕರಣಗಳು, ನಿಧನರಾದ ಪ್ರಮುಖರ ವಿವರ ಇಲ್ಲಿದೆ

* ಈ ವರ್ಷ ರಾಜ್ಯದ ಒಂಬತ್ತು ಮಂದಿ ‘ಪದ್ಮ’ ಪುರಸ್ಕಾರಕ್ಕೆ ಭಾಜನರಾದರು. ಖ್ಯಾತ ಪಿಟೀಲು ವಾದಕ
ಎಲ್.ಸುಬ್ರಮಣಿಯನ್ ಅವರು ಪದ್ಮ ವಿಭೂಷಣ, ಪತ್ರಕರ್ತ ಸೂರ್ಯಪ್ರಕಾಶ್ ಮತ್ತು ನಟ ಅನಂತನಾಗ್ ಪದ್ಮಭೂಷಣ, ತೊಗಲು ಬೊಂಬೆಯಾಟದ ಹಿರಿಯ ಕಲಾವಿದೆ ಭೀಮವ್ವ ದೊಡ್ಡಬಾಳಪ್ಪ ಶಿಳ್ಳೇಕ್ಯಾತರ, ಸಮರ ಕಲೆ ಪರಿಣತ ಹಾಸನ್ ರಘು, ಸಂಗೀತ ನಿರ್ದೇಶಕ ರಿಕಿ ಗ್ಯಾನ್ ಕೇಜ್, ಜನಪದ ಗಾಯಕ ವೆಂಕಪ್ಪ ಅಂಭಾಜಿ ಸುಗತೇಕರ, ಉದ್ಯಮಿ ಪ್ರಶಾಂತ್ ಪ್ರಕಾಶ್, ಕ್ಯಾನ್ಸರ್ ರೋಗ ಚಿಕಿತ್ಸಾ ತಜ್ಞೆ ವಿಜಯಲಕ್ಷ್ಮಿ ದೇಶಮಾನೆ ಅವರು ‘ಪದ್ಮಶ್ರಿ’ ಪುರಸ್ಕಾರಕ್ಕೆ ಆಯ್ಕೆಯಾದರು

* ಫೆ.1: ನಕ್ಸಲ್ ಚಟುವಟಿಕೆಯಲ್ಲಿ ಗುರುತಿಸಿಕೊಂಡಿದ್ದ ಲಕ್ಷ್ಮಿ ತೊಂಬಟ್ಟು ಅವರು ಉಡುಪಿ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಸಮ್ಮುಖದಲ್ಲಿ ಶರಣಾದರು

* ಫೆ.13: ಹಾಲಕ್ಕಿ ಸಮುದಾಯದ ಹಾಡುಗಾರ್ತಿ, ಪದ್ಮಶ್ರೀ ಪ್ರಶಸ್ತಿ ಪುರಸ್ಕತರಾದ ಅಂಕೋಲಾ ತಾಲ್ಲೂಕು ಬಡಗೇರಿಯ ಸುಕ್ರಿ ಬೊಮ್ಮಗೌಡ (88)ಅವರು ನಿಧನರಾದರು

* ಮಾರ್ಚ್ 6: ಗಂಗಾವತಿ ತಾಲ್ಲೂಕಿನ ಪ್ರವಾಸಿ ತಾಣ ಸಾಣಾಪುರದಲ್ಲಿ ಇಸ್ರೇಲ್ ಮಹಿಳೆ ಮತ್ತು ಸ್ಥಳೀಯ ಹೋಮ್ ಸ್ಟೇ ಒಡತಿ ಮೇಲೆ ಹಲ್ಲೆ ಹಾಗೂ ಅತ್ಯಾಚಾರ ನಡೆಯಿತು

* ಏ.24: ಚಾಮರಾಜನಗರ ಜಿಲ್ಲೆಯ ಮಹದೇಶ್ವರ ಬೆಟ್ಟದಲ್ಲಿ ರಾಜ್ಯ ಸಚಿವ ಸಂಪುಟ ಸಭೆ ನಡೆಯಿತು. ₹3,645 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಅನುಮೋದನೆ ದೊರೆಯಿತು

* ಮೇ 21: ಭಾರತೀಯ ನೌಕಾಸೇನೆಯ ಹಡಗು ‘ಐಎನ್ಎಸ್ ಕೌಂಡಿನ್ಯ’ವನ್ನು ಕಾರವಾರದ ಕದಂಬ ನೌಕಾನೆಲೆಯಲ್ಲಿ ಲೋಕಾರ್ಪಣೆ ಮಾಡಲಾಯಿತು

* ಜೂನ್ 26: ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ವನ್ಯಧಾಮದಲ್ಲಿ ವಿಷಪ್ರಾಷನದಿಂದ ಐದು ಹುಲಿಗಳು ಮೃತಪಟ್ಟಿರುವುದು ಬೆಳಕಿಗೆ ಬಂತು

* ಜುಲೈ 14: ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಅಂಬಾರಗೋಡ್ಲು-ಕಳಸವಳ್ಳಿ ನಡುವೆ ನಿರ್ಮಾಣಗೊಂಡಿದ್ದ ನೂತನ ತೂಗು ಸೇತುವೆ (ಸಿಗಂದೂರು ಸೇತುವೆ) ಉದ್ಘಾಟನೆಯಾಯಿತು

* ಆ. 14: ಕಲಬುರಗಿಯ ಶರಣಬಸವೇಶ್ವರ ಮಹಾಸಂಸ್ಥಾನದ 8ನೇ ಪೀಠಾಧಿಪತಿ, ಕಲ್ಯಾಣವನ್ನು ಶಿಕ್ಷಣದ ಕಾಶಿಯಾಗಿಸಿದ್ದ ಶರಣಬಸವಪ್ಪ ಅಪ್ಪ ಅವರು ಅಸ್ತಂಗತರಾದರು

* ಸೆಪ್ಟೆಂಬರ್ 4: ಹಾಸನ ತಾಲ್ಲೂಕಿನ ಮೊಸಳೆ ಹೊಸಹಳ್ಳಿಯಲ್ಲಿ ಗಣೇಶ ವಿಸರ್ಜನಾ ಮೆರವಣಿಗೆ ಮೇಲೆ ಕ್ಯಾಂಟರ್ ಹರಿದು 10 ಜನರು ಮೃತಪಟ್ಟರು

* ಸೆಪ್ಟೆಂಬರ್ 17: ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ವಸೀಗರನ್ ಎಂಬ ಕರಡಿಗೆ ಕೃತಕ ಕಾಲು ಜೋಡಣೆ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿ ನಡೆಯಿತು. ವನ್ಯಜೀವಿಗೆ ಈ ರೀತಿಯ ಶಸ್ತ್ರಚಿಕಿತ್ಸೆ ನಡೆದಿರುವುದು ದೇಶದಲ್ಲಿ ಇದೇ ಮೊದಲು

* ಸೆಪ್ಟೆಂಬರ್ 21: ಬಾಗಲಕೋಟೆ ಜಿಲ್ಲೆಯ ಕೂಡಲಸಂಗಮದಲ್ಲಿರುವ ಪಂಚಮಸಾಲಿ ಪೀಠದಿಂದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಅವರನ್ನು ಅಖಿಲ ಭಾರತ ಪಂಚಮಸಾಲಿ ಲಿಂಗಾಯತ ಮಹಾಸಭಾವು ಉಚ್ಚಾಟಿಸಿತು

* ಟನ್ ಕಬ್ಬಿಗೆ ₹3,500 ದರ ನೀಡಬೇಕು ಎಂದು ಆಗ್ರಹಿಸಿ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲ್ಲೂಕಿನ ಗುರ್ಲಾಪುರ ಕ್ರಾಸ್ ಬಳಿ ರೈತರಿಂದ ಅ.30ರಿಂದ ನ.8ರವರೆಗೆ ಹೋರಾಟ ನಡೆಸಿದರು. ಟನ್ ಕಬ್ಬಿಗೆ ₹3,300 ನೀಡಲು ಸರ್ಕಾರ ಹಾಗೂ ಸಕ್ಕರೆ ಕಾರ್ಖಾನೆಗಳು ಒಪ್ಪಿದವು

* ನ. 11: ಕೋಲಾರ ಜಿಲ್ಲೆಯ ಮಾಲೂರು ವಿಧಾನಸಭಾ ಕ್ಷೇತ್ರದ ಮರು ಮತಎಣಿಕೆ ನಡೆಯಿತು. ಮುಚ್ಚಿದ ಲಕೋಟೆಯಲ್ಲಿ ಸುಪ್ರೀಂ ಕೋರ್ಟ್ಗೆ ವರದಿ ಸಲ್ಲಿಕೆ. ಫಲಿತಾಂಶದಲ್ಲಿ ಯಾವುದೇ ಬದಲಾವಣೆ ಇಲ್ಲದ ಕಾರಣ ಶಾಸಕ ನಂಜೇಗೌಡ ನಿರಾಳರಾದರು

* ನವೆಂಬರ್ನಲ್ಲಿ ಬೆಳಗಾವಿ ಸಮೀಪದ ಭೂತರಾಮನ ಹಟ್ಟಿಯ ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿ ಒಟ್ಟು 31 ಕೃಷ್ಣಮೃಗಗಳು ಗಳಲೆ ರೋಗದಿಂದ (ಬ್ಯಾಕ್ಟೀರಿಯಾ ಸೋಂಕು) ಮೃತಪಟ್ಟವು

* ನ.26: ಕಲಬುರಗಿ ಜಿಲ್ಲೆಯ ಜೇವರ್ಗಿಯ ಗೌನಳ್ಳಿ ಕ್ರಾಸ್ ಬಳಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ ಬೀಳಗಿ (51) ಸೇರಿ ನಾಲ್ವರು ಮೃತಪಟ್ಟರು

* ನ. 26: ಮುರುಘರಾಜೇಂದ್ರ ಬೃಹನ್ಮಠದ ಶಿವಮೂರ್ತಿ ಶ್ರೀಗಳನ್ನು ಚಿತ್ರದುರ್ಗದ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸಿವಿಲ್ ನ್ಯಾಯಾಲಯವು ಪೋಕ್ಸೋ ಅಡಿ ದಾಖಲಾಗಿರುವ ಒಂದು ಪ್ರಕರಣದಲ್ಲಿ ಆರೋಪಮುಕ್ತಗೊಳಿಸಿತು. ಅದರ ವಿರುದ್ಧ ಸಂತ್ರಸ್ತ ಬಾಲಕಿಯರು ಡಿ.10ರಂದು ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದರು

* ನ. 28: ಪ್ರಧಾನಿ ನರೇಂದ್ರ ಮೋದಿ ಅವರು ಉಡುಪಿಯ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ ಲಕ್ಷ ಕಂಠ ಗೀತಾ ಪಾರಾಯಣ ಕಾರ್ಯಕ್ರಮದಲ್ಲಿ ಪಾಲ್ಗೊಂಡರು

* ಡಿಸೆಂಬರ್ 25: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಗೊರ್ಲಡುಕು ಕ್ರಾಸ್ ಬಳಿ ರಂದು ಕಂಟೇನರ್ವೊಂದು ಡಿವೈಡರ್ಗೆ ಗುದ್ದಿ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಸೀಬರ್ಡ್ ಸ್ಲೀಪರ್ ಬಸ್ಗೆ ಡಿಕ್ಕಿ ಹೊಡೆದಿದ್ದರಿಂದ ಬೆಂಕಿ ಹೊತ್ತಿಕೊಂಡು ಐವರು ಸುಟ್ಟು ಕರಕಲಾದರು

* 73 ವರ್ಷಗಳ ಬಳಿಕ ತುಂಗಭದ್ರಾ ಜಲಾಶಯದ 33 ಕ್ರಸ್ಟ್ಗೇಟ್ಗಳನ್ನು ಅಳವಡಿಸುವ ಕಾರ್ಯ ಡಿಸೆಂಬರ್ನಲ್ಲಿ ಆರಂಭವಾಯಿತು

ಅಗಲಿದ ಪ್ರಮುಖರು

* ಕನ್ನಡದ ಖ್ಯಾತ ಕಾದಂಬರಿಕಾರರಾಗಿದ್ದ ಎಸ್.ಎಲ್.ಭೈರಪ್ಪ ಅವರು ಸೆಪ್ಟೆಂಬರ್ 24ರಂದು ತಮ್ಮ 94ನೇ ವಯಸ್ಸಿನಲ್ಲಿ ಬೆಂಗಳೂರಿನಲ್ಲಿ ನಿಧನರಾದರು

* ಸಾಹಿತಿ ಎಚ್.ಎಸ್. ವೆಂಕಟೇಶಮೂರ್ತಿ (80) ಅವರು ಮೇ 30ರಂದು ನಿಧನರಾದರು

* ಸಾಹಿತಿ, ವಿಮರ್ಶಕ ಜಿ.ಎಸ್.ಸಿದ್ದಲಿಂಗಯ್ಯ (94) ಅವರು ಮೇ 7ರಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು

* ಸಾಹಿತಿ, ವಿಮರ್ಶಕ ಪಿ.ವಿ. ನಾರಾಯಣ (82) ಅವರು ಏಪ್ರಿಲ್ 3ರಂದು ನಿಧನರಾದರು

*ಪರಿಸರದ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದ, ಸಾಲು ಗಿಡಗಳನ್ನು ನೆಟ್ಟು ಪೋಷಿಸಿ ‘ಸಾಲುಮರದ ತಿಮ್ಮಕ್ಕ’ ಎಂದೇ ಖ್ಯಾತರಾಗಿದ್ದ ತಿಮ್ಮಕ್ಕ ಅವರು ನವೆಂಬರ್ 14ರಂದು ತಮ್ಮ 114ನೇ ವಯಸ್ಸಿನಲ್ಲಿ ಅಗಲಿದರು

ಧರ್ಮಸ್ಥಳ ಪ್ರಕರಣ

ಈ ವರ್ಷ ರಾಜ್ಯವಲ್ಲದೆ, ದೇಶದಾದ್ಯಂತ ಚರ್ಚೆ ಹುಟ್ಟುಹಾಕಿದ್ದು ಧರ್ಮಸ್ಥಳ ಪ್ರಕರಣ. ಧರ್ಮಸ್ಥಳದಲ್ಲಿ ಹಿಂದಿನಿಂದಲೂ ಹಲವಾರು ಅಪರಾಧ ಕೃತ್ಯಗಳು ನಡೆದಿದ್ದು, ಮೃತದೇಹಗಳನ್ನು ರಹಸ್ಯವಾಗಿ ವಿಲೇವಾರಿ ಮಾಡಿಸಿದ್ದಾರೆ ಎಂದು ವ್ಯಕ್ತಿಯೊಬ್ಬರು ಜುಲೈ 3ರಂದು ದೂರು ನೀಡಿದರು. ಅವರು ಸಾಕ್ಷಿಯಾಗಿ ಬೆಳ್ತಂಗಡಿ ನ್ಯಾಯಾಲಯಕ್ಕೆ ಜುಲೈ 11ರಂದು ಹಾಜರಾದರು. ತನಿಖೆಗಾಗಿ ರಾಜ್ಯ ಸರ್ಕಾರ ಡಿಜಿಪಿ ಪ್ರಣವ್ ಮೊಹಾಂತಿ ನೇತೃತ್ವದಲ್ಲಿ ಜುಲೈ 19ರಂದು ಎಸ್ಐಟಿ ರಚಿಸಿತು.

ಜುಲೈ 29ರಿಂದ ಮೃತದೇಹಗಳ ಅವಶೇಷಗಳಿಗಾಗಿ 17 ಕಡೆ ಶೋಧಕಾರ್ಯ ನಡೆಯಿತು. ನಂತರ ಪ್ರಕರಣಕ್ಕೆ ತಿರುವು ದೊರೆತು ಸಾಕ್ಷಿ ದೂರುದಾರನನ್ನೇ ಎಸ್ಐಟಿ ಬಂಧಿಸಿತು. ಆಗಸ್ಟ್ 23ರಂದು ಬೆಳ್ತಂಗಡಿಯ ಜೆಎಂಎಫ್ಸಿ ನ್ಯಾಯಾಲಯದಲ್ಲಿ ಹಾಜರು ಪಡಿಸಲಾಯಿತು. ನ್ಯಾಯಾಂಗ ಬಂಧನದಲ್ಲಿದ್ದ ಸಾಕ್ಷಿ ದೂರುದಾರ ಡಿಸೆಂಬರ್ 18ರಂದು ಜಾಮೀನಿನ ಮೇಲೆ ಬಿಡುಗಡೆಯಾದರು. ನ್ಯಾಯಾಲಯಕ್ಕೆ 5,000ಕ್ಕೂ ಹೆಚ್ಚು ಪುಟಗಳ ವರದಿಯನ್ನು ಎಸ್ಐಟಿ ಸಲ್ಲಿಸಿದ್ದು, ಸಾಕ್ಷಿ ದೂರುದಾರ, ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ ಮಟ್ಟೆಣ್ಣವರ, ಜಯಂತ್ ಟಿ., ವಿಠಲ ಗೌಡ, ಸುಜಾತಾ ಭಟ್ ಅವರು ನ್ಯಾಯಾಲಯದ ದಾರಿ ತಪ್ಪಿಸಿರುವುದಾಗಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಆರ್ಎಸ್ಎಸ್ ಪಥಸಂಚಲನ ವಿವಾದ

ಕಲಬುರಗಿ ಜಿಲ್ಲೆಯ ಚಿತ್ತಾಪುರದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್ಎಸ್ಎಸ್) ಹಮ್ಮಿಕೊಂಡಿದ್ದ ಪಥಸಂಚಲನವು ಈ ವರ್ಷ ವಿವಾದಕ್ಕೆ ಗುರಿಯಾಯಿತು. ಇದೊಂದು ರಾಜಕೀಯ ವಿಚಾರವಾಗಿ ಬದಲಾಗಿ ಸೈದ್ಧಾಂತಿಕ ಸಂಘರ್ಷಕ್ಕೂ ಕಾರಣವಾಯಿತು. ಕಾಂಗ್ರೆಸ್ ಪಕ್ಷ , ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಬಿಜೆಪಿ, ಆರ್ಎಸ್ಎಸ್ ನಡುವೆ ವಾದ ಪ್ರತಿವಾದಗಳು ನಡೆದವು.

ಅ. 19ರಂದು ಕಲಬುರಗಿ ಜಿಲ್ಲೆಯ ಚಿತ್ತಾಪುರದಲ್ಲಿ ನಿಗದಿಯಾಗಿದ್ದ ಆರ್ಎಸ್ಎಸ್ ಪಥಸಂಚಲನಕ್ಕೆ ತಾಲ್ಲೂಕು ಆಡಳಿತ ಅವಕಾಶ ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿ ಆರ್ಎಸ್ಎಸ್ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿತ್ತು. ಹೈಕೋರ್ಟ್ ಪಥಸಂಚಲನಕ್ಕೆ ಅವಕಾಶ ನೀಡುವಂತೆ ಸೂಚಿಸಿತು. ನ್ಯಾಯಾಲಯದಂತೆ ಜಿಲ್ಲಾಡಳಿತ ಅವಕಾಶ ನೀಡಿತು. ಪೊಲೀಸರ ಬಿಗಿ ಭದ್ರತೆಯಲ್ಲಿ ನವೆಂಬರ್ 26ರಂದು ಮಧ್ಯಾಹ್ನ 350 ಗಣವೇಷಧಾರಿಗಳು ಪಥಸಂಚಲನ ನಡೆಸಿದರು. ಅದರ ವೀಕ್ಷಣೆಗೆ ಸಾವಿರಾರು ಜನರು ಸೇರಿದ್ದರು.

ಆರ್ಎಸ್ಎಸ್ ಪಥಸಂಚಲನಕ್ಕೆ ಪರ್ಯಾಯವಾಗಿ ವಿವಿಧ ಪ್ರಗತಿಪರ ಸಂಘಟನೆಗಳಿಂದ ಸಂವಿಧಾನ ಸಂರಕ್ಷಣಾ ಸಮಿತಿ ನೇತೃತ್ವದಲ್ಲಿ ಡಿ.1ರಂದು ‘ಭೀಮನಡೆ’ ಮೆರವಣಿಗೆ ಹಾಗೂ ಸಂವಿಧಾನ ಸಮಾವೇಶವೂ ನಡೆಯಿತು.