ದಕ್ಷಿಣದ ರಾಜ್ಯಗಳಲ್ಲಿ ಜನಸಂಖ್ಯೆ ಕಡಿಮೆ ಆಗುತ್ತಿದೆ ಎನ್ನುವ ಆತಂಕ ವ್ಯಾಪಕವಾಗುತ್ತಿರುವಾಗಲೇ, ಅದನ್ನು ಸಮರ್ಥಿಸುವ ಮತ್ತೊಂದು ವರದಿ ಬಿಡುಗಡೆಯಾಗಿದೆ. ಮಾದರಿ ನೋಂದಣಿ ವ್ಯವಸ್ಥೆಯ (ಎಸ್‌ಆರ್‌ಎಸ್) ಸಾಂಖ್ಯಿಕ ವರದಿಯನ್ನು (2021) ಭಾರತದ ರಿಜಿಸ್ಟ್ರಾರ್ ಜನರಲ್ ಮತ್ತು ಜನಗಣತಿ ಆಯುಕ್ತರ ಕಚೇರಿ ಬಿಡುಗಡೆ ಮಾಡಿದೆ. ದೇಶದ 13 ದೊಡ್ಡ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ರಾಷ್ಟ್ರೀಯ ಸರಾಸರಿ ಕುಸಿತಕ್ಕಿಂತ ಹೆಚ್ಚಿನ ವೇಗದಲ್ಲಿ ಶಿಶು ಜನನ ಪ್ರಮಾಣ ಕುಸಿಯುತ್ತಿದೆ ಎಂದು ವರದಿ ಹೇಳುತ್ತಿದೆ. ತಮಿಳುನಾಡು, ಕೇರಳ, ದೆಹಲಿ ರಾಜ್ಯಗಳಲ್ಲಿ ಈ ಪ್ರಮಾಣ ರಾಷ್ಟ್ರೀಯ ಸರಾಸರಿಗಿಂತ ದುಪ್ಪಟ್ಟಾಗಿದೆ. ಜನನ ಪ್ರಮಾಣವು ತ್ವರಿತವಾಗಿ ಕುಸಿಯುತ್ತಿರುವ ರಾಜ್ಯಗಳಲ್ಲಿ ಕರ್ನಾಟಕವೂ ಸೇರಿದಂತೆ ದಕ್ಷಿಣದ ಎಲ್ಲ ರಾಜ್ಯಗಳೂ ಸ್ಥಾನ ಪಡೆದಿವೆ.
.
ಜನನ ಪ್ರಮಾಣ: ಯಾವ ವರ್ಷ ಎಷ್ಟು?
ಆಧಾರ: ಕೇಂದ್ರ ಗೃಹ ಇಲಾಖೆಯ ಮಾದರಿ ನೋಂದಣಿ ವ್ಯವಸ್ಥೆಯ ಸಾಂಖ್ಯಿಕ ವರದಿ– 2021, ಪಿಐಬಿ ಪತ್ರಿಕಾ ಹೇಳಿಕೆ, ನ್ಯಾಷನಲ್ ಲೈಬ್ರೆರಿ ಆಫ್ ಮೆಡಿಸಿನ್ ವೆಬ್‌ಸೈಟ್