ರಾಷ್ಟ್ರೀಯ ಪೌರತ್ವ ನೋಂದಣಿಯಿಂದ (ಎನ್‌ಆರ್‌ಸಿ) ಹೊರಗೆ ಉಳಿದವರನ್ನು ದೇಶದಿಂದ ಗಡಿಪಾರು ಮಾಡಲು ಅವಕಾಶವಿದೆ. ಎನ್‌ಆರ್‌ಸಿಯಿಂದ ಹೊರಗುಳಿದ ಮುಸ್ಲಿಮೇತರರಿಗೆ ಭಾರತದ ಪೌರತ್ವ ನೀಡಲು ಸಿಎಎ ಅವಕಾಶ ಮಾಡಿಕೊಡುತ್ತದೆ. ಮುಸ್ಲಿಮರು ಮಾತ್ರ ಗಡಿಪಾರಿನ ಭೀತಿ ಎದುರಿಸಬೇಕಾಗುತ್ತದೆ. ಎನ್‌ಆರ್‌ಸಿಯನ್ನು ರೂಪಿಸಲು ಮನೆ–ಮನೆಗೆ ಭೇಟಿ ನೀಡಿ, ಮಾಹಿತಿ ಕಲೆಹಾಕಿ ಜನಸಂಖ್ಯಾ ನೋಂದಣಿಯನ್ನು (ಎನ್‌ಪಿಆರ್) ರಚಿಸಬೇಕು. ಆದರೆ ಕೇಂದ್ರ ಸರ್ಕಾರವು ಆಧಾರ್ ದತ್ತಾಂಶಗಳನ್ನು ಬಳಸಿಕೊಂಡು ರಹಸ್ಯವಾಗಿ ಎನ್‌ಆರ್‌ಸಿಯನ್ನು ರೂಪಿಸಲು ಹೊರಟಿದೆ ಎನ್ನುತ್ತಿದೆ ಮಿಟಿಯಾಬುರ್ಜ್ ಕೋಲ್ಕತ್ತಾ ಮತ್ತು ಸಿಟಿಜನ್ ಫಾರ್ ಜಸ್ಟೀಸ್ ಆ್ಯಂಡ್ ಪೀಸ್ ನಡೆಸಿದ ತನಿಖಾ ವರದಿ