ಕಾಲ್ತುಳಿತವು ದೇಶದಲ್ಲಿ ಸಾಮಾನ್ಯ ಎನ್ನುವಂತಾಗಿದೆ. ತಮ್ಮ ಅಭಿಮಾನದ ಕ್ರೀಡಾ ಪಟುಗಳು, ಸಿನಿಮಾ ತಾರೆಯರನ್ನು ನೋಡಲು, ರಾಜಕೀಯ ಸಮಾವೇಶಗಳಲ್ಲಿ ಭಾಗವಹಿಸಲು, ಆಧ್ಯಾತ್ಮಿಕ ವ್ಯಕ್ತಿಗಳ ಕಾರ್ಯಕ್ರಮದಲ್ಲಿ ಭಾಗವಹಿಸಿದವರು, ದೇವಾಲಯಗಳಿಗೆ ತೆರಳಿದವರು ಕಾಲ್ತುಳಿತಕ್ಕೆ ಸಿಲುಕಿರುವುದು ದೇಶದಲ್ಲಿ ನಡೆದಿವೆ. ಕೊನೆಗೆ, ಹಬ್ಬದ ಸಂದರ್ಭದ ದಟ್ಟಣೆಯಿಂದಾಗಿ ಊರಿಗೆ ಹೋಗಲು ರೈಲು ನಿಲ್ದಾಣಕ್ಕೆ ಬಂದವರು ಕೂಡ ನೂಕುನುಗ್ಗಲಿನಿಂದ ಸಾವಿಗೀಡಾದದ್ದು ಇದೆ.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ದುರಂತದ ತೀವ್ರತೆಯನ್ನು ಹೇಳಿದ್ದ ಪಾದರಕ್ಷೆಗಳು –ಪಿಟಿಐ ಚಿತ್ರ