ಬೆದರಿದ್ದು ಯಾರು?
ಹಾವೇರಿ ಜಿಲ್ಲೆಯ ಬಸಾಪುರ ಗ್ರಾಮದಲ್ಲಿ ಮೊನ್ನೆಯಷ್ಟೇ ಕೊಬ್ರಿ ಹೋರಿ ಬೆದರಿಸುವ ಸ್ಪರ್ಧೆ ನಡೆಯಿತು. ಜನಜಂಗುಳಿಯ ಮಧ್ಯದಲ್ಲಿ ಮಿಂಚಿನ ವೇಗದಲ್ಲಿ ಓಡಿಬಂದ ಹೋರಿಗಳನ್ನು ಬೆದರಿಸುವ, ನಿಯಂತ್ರಿಸುವ ಸಾಹಸಕ್ಕೆ ಗಂಡೆದೆ ಗುಂಡಿಗೆಯ ಯುವಕರು ಯತ್ನಿಸಿದರು. ಅಡ್ಡ ಬಂದವರನ್ನು ಲೆಕ್ಕಿಸದೆ ಹೋರಿಗಳು ಓಡಿ ಬರುತ್ತಿದ್ದರೆ, ಜನ ‘ಹೋ’ ಎಂದು ಕೂಗು ಹಾಕಿ ಹಿಂದೆ ಸರಿಯುತ್ತಿ ದ್ದರು. ಸ್ಪರ್ಧೆಯಲ್ಲಿ ಕಂಡ ಕೆಲವು ರೋಚಕ ನೋಟಗಳು ಇಲ್ಲಿವೆ... ಚಿತ್ರಗಳು: ತಾಜುದ್ದೀನ್ ಆಜಾದ್.
Published : 16 ನವೆಂಬರ್ 2019, 16:20 IST