ಮಂಗಳವಾರ, ಜೂನ್ 15, 2021
24 °C

ನಿಯಂತ್ರಣಕ್ಕೆ ಸಿಗದ ಕೊರೊನಾ: ದೇವರ ಮೇಲೆ ಸಿಟ್ಟಿನ ಕುರಿತ ವಿಡಿಯೊ ನಿಜವೇ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊರೊನಾ ವೈರಸ್ ದೇಶದಾದ್ಯಂತ ರೌದ್ರರೂಪ ತಾಳಿದ್ದು, ಜನರು ರೋಸಿ ಹೋಗಿದ್ದಾರೆ. ಜನರ ಸಿಟ್ಟು ಎಷ್ಟಿದೆಯೆಂದರೆ ದೇವರ ಮೂರ್ತಿಗಳನ್ನು ರಸ್ತೆಗೆ ಎಸೆಯುತ್ತಿದ್ದಾರೆ. ಬೀದಿ ಬೀದಿಗಳಲ್ಲಿ ದೇವರ ವಿಗ್ರಹಗಳನ್ನು ಚೆಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಎಂದು ಬಿಂಬಿಸುವ ವಿಡಿಯೊ ವೈರಲ್ ಆಗಿದೆ. ಮತ್ತೊಂದು ವಿಡಿಯೊದಲ್ಲಿ ವಿಗ್ರಹಗಳನ್ನು ಜನರು ನದಿಗೆ ಎಸೆಯುತ್ತಿರುವ ದೃಶ್ಯವಿದೆ. ಸುದ್ದಿ ವಾಹಿನಿಗಳು ಈ ವಿಡಿಯೊಗಳನ್ನು ಪ್ರಸಾರ ಮಾಡಿವೆ. 

ಇನ್‌ವಿಡ್ ತಂತ್ರಜ್ಞಾನ ಬಳಸಿ ಈ ಎರಡೂ ವಿಡಿಯೊಗಳನ್ನು ಆಲ್ಟ್ ನ್ಯೂಸ್ ಪರಿಶೀಲನೆ ನಡೆಸಿದೆ. ಈ ವಿಡಿಯೊಗಳು 2019ರ ಆಗಸ್ಟ್‌ನಲ್ಲಿ ಚಿತ್ರೀಕರಿಸಿದವು. ಆದರೆ ದೇಶದಲ್ಲಿ ಕೋವಿಡ್‌ ಮೊದಲ ಪ್ರಕರಣ ವರದಿಯಾಗಿದ್ದು ಜನವರಿ 2020ರಲ್ಲಿ. ಹೀಗಾಗಿ ಕೋವಿಡ್‌ಗೂ ಈ ವಿಡಿಯೊಗಳಿಗೂ ಸಂಬಂಧವಿಲ್ಲ. ಸಾಬರಮತಿ ನದಿಗೆ ವಿಗ್ರಹಗಳನ್ನು ಬಿಡುವುದರಿಂದ ನೀರು ಮಲಿನವಾಗುತ್ತದೆ ಎಂಬ ಕಾರಣಕ್ಕೆ ನದಿತೀರ ಹಾಗೂ ಬೀದಿಗಳಲ್ಲಿ ವಿಗ್ರಹಗಳನ್ನು ಇರಿಸಲಾಗಿತ್ತು. ಮತ್ತೊಂದು ವಿಡಿಯೊವನ್ನು ತೆಲಂಗಾಣದಲ್ಲಿ ಗಣೇಶ ವಿಸರ್ಜನೆಯ ವೇಳೆ ಚಿತ್ರೀಕರಿಸಲಾಗಿದೆ. ಹಳೆಯ ವಿಡಿಯೊಗಳನ್ನು ಈಗಿನ ವಿಡಿಯೊಗಳು ಎಂಬುದಾಗಿ ತಪ್ಪಾಗಿ ಬಿಂಬಿಸಲಾಗುತ್ತಿದೆ ಎಂದು ವೆಬ್‌ಸೈಟ್ ತಿಳಿಸಿದೆ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು