ಭಾನುವಾರ, ಮೇ 9, 2021
25 °C

ಫ್ಯಾಕ್ಟ್‌ ಚೆಕ್ | ನೀಟ್ ಮುಂದೂಡಲಾಗಿದೆ ಎಂಬ ಸುದ್ದಿ ನಿಜವೇ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಕೋವಿಡ್‌–19 ತೀವ್ರಗೊಳ್ಳುತ್ತಿರುವ ಕಾರಣದಿಂದ, ಜುಲೈ 26ರಂದು ನಡೆಸಲು ಉದ್ದೇಶಿಸಿದ್ದ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಗಳನ್ನು (ನೀಟ್‌) ಮುಂದೂಡಲಾಗಿದೆ. ಪರಿಸ್ಥಿತಿಯ ಅವಲೋಕನ ನಡೆಸಿ, 2020ರ ಆಗಸ್ಟ್‌ ಅಂತ್ಯದ ವೇಳೆಗೆ ಪರೀಕ್ಷೆಗಳನ್ನು ನಡೆಸಲಾಗುವುದು. ಪರೀಕ್ಷೆಗೆ ಹಾಜರಾಗುವವರಿಗೆ ಆಗಸ್ಟ್‌ 15ರ ನಂತರ ಪ್ರವೇಶಪತ್ರಗಳನ್ನು ನೀಡಲಾಗುವುದು’ ಎಂಬ ಒಕ್ಕಣೆ ಇರುವ, ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯೇ (ಎನ್‌ಟಿಎ) ಹೊರಡಿಸಿದ್ದು ಎನ್ನಲಾದ ಪತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಇದು ಸುಳ್ಳು ಸುದ್ದಿ, ಇಂಥ ಯಾವುದೇ ಪತ್ರವನ್ನು ಎನ್‌ಟಿಎ ಬಿಡುಗಡೆ ಮಾಡಿಲ್ಲ. ನೀಟ್‌ ಪರೀಕ್ಷೆ ಮುಂದೂಡುವ ಯಾವುದೇ ಸಲಹೆಯನ್ನು ಸಚಿವಾಲಯವು ಈವರೆಗೆ ನೀಡಿಲ್ಲ ಎಂದು ಪಿಐಬಿ ಸ್ಪಷ್ಟಪಡಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು