ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Fact Check | ಅಮೃತಾ ಕೌರ್ ಚಿತ್ರ ವೈರಲ್

Last Updated 24 ಜೂನ್ 2021, 19:30 IST
ಅಕ್ಷರ ಗಾತ್ರ

ಭಾರತದ ಮೊದಲ ಆರೋಗ್ಯ ಸಚಿವೆ ಅಮೃತಾ ಕೌರ್ ಅವರದ್ದು ಎಂದು ಹೇಳಲಾದ ಎರಡು ಚಿತ್ರಗಳು ಫೇಸ್‌ಬುಕ್‌ನಲ್ಲಿ ಕೆಲವು ದಿನಗಳಿಂದ ವೈರಲ್ ಆಗಿವೆ. ಆದರೆ 2020ರ ಅಕ್ಟೋಬರ್‌ನಿಂದಲೂ ಈ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿವೆ. ‘ದೇಶದ ಅತಿದೊಡ್ಡ ಏಮ್ಸ್ ಆಸ್ಪತ್ರೆಯು ಕೌರ್ ಅವರ ಕೊಡುಗೆ. ಈಗಿನ ಯಾವ ಸಚಿವರ ಜೊತೆಗೂ ಅವರನ್ನು ಹೋಲಿಸಲಾಗದು’ ಎಂಬ ಒಕ್ಕಣೆ ಇರುವ ಪೋ‌‌ಸ್ಟರ್‌ಗಳು ಹರಿದಾಡುತ್ತಿವೆ.

ಈ ಚಿತ್ರಗಳನ್ನು ಆಲ್ಟ್‌ ನ್ಯೂಸ್ ಹಾಗೂ ಲಾಜಿಕಲ್ ಇಂಡಿಯನ್ ಫ್ಯಾಕ್ಟ್ ಚೆಕ್ ವೇದಿಕೆಗಳು ಪರಿಶೀಲಿಸಿವೆ. ಒಂದು ಚಿತ್ರದಲ್ಲಿರುವುದು ಬರಹಗಾರ್ತಿ ಹಾಗೂ ಲೇಡಿಸ್ ಕಂಪಾರ್ಟ್‌ಮೆಟ್ ಸಂಸ್ಥಾಪಕಿ ಅವಂತಿಕಾ ಮೆಹ್ತಾ. ಫೋಟೋಶೂಟ್‌ಗಾಗಿ ಸೆರೆಹಿಡಿದ ಚಿತ್ರದಲ್ಲಿ ಅವರು ಕೌರ್ ತರಹ ಕಾಣಿಸಿದ್ದಾರೆ. ಸ್ವತಃ ಅವಂತಿಕಾ ಇದನ್ನು ಟ್ವೀಟ್ ಮಾಡಿ ತಿಳಿಸಿದ್ದಾರೆ. ಎರಡನೇ ಚಿತ್ರದಲ್ಲಿರುವವರು ಕಪುರ್ತಲಾದ ಮಹಾರಾಜ ಜಗ್ಜೀತ್ ಸಿಂಗ್ ಅವರ ಪುತ್ರಿ ರಾಜಕುಮಾರಿ ಅಮೃತ್ ಕೌರ್.

ಎರಡೂ ಚಿತ್ರಗಳಲ್ಲಿರುವುದು ಮೊದಲ ಆರೋಗ್ಯ ಸಚಿವೆ ಅಮೃತಾ ಕೌರ್ ಅಲ್ಲ ಎಂಬುದು ಸ್ಪಷ್ಟಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT