ಮಂಗಳವಾರ, ಜನವರಿ 25, 2022
25 °C

ಫ್ಯಾಕ್ಟ್‌ ಚೆಕ್‌: ಅಕ್ಕಿಗೆ ಕೃತಕ ಬಣ್ಣದ ಕಲಬೆರಕೆ- ವಿಡಿಯೊ ಹಿಂದಿನ ಸತ್ಯವೇನು?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೆಲ ಜನರ ಗುಂಪೊಂದು ಅಕ್ಕಿಗೆ ಕೃತಕ ಬಣ್ಣ ಸೇರಿಸಿ ಕಲಬೆರಕೆ ಮಾಡುತ್ತಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಆಹಾರ ಸಂಸ್ಕರಣಾ ಕಾರ್ಖಾನೆಯೊಂದರಲ್ಲಿ ಚಿತ್ರೀಕರಿಸಿರುವ ವಿಡಿಯೊ ಇದಾಗಿದೆ. ‘ಹಿಂದೂಗಳ ಜನಸಂಖ್ಯೆ ಕಡಿಮೆ ಮಾಡಲು ಮುಸ್ಲಿಮರು ಅಕ್ಕಿಗೆ ಹಾನಿಕಾರಕ ರಾಸಾಯನಿಕಗಳನ್ನು ಬೆರೆಸುತ್ತಿದ್ದಾರೆ. ಈಗ ದೇಶದಲ್ಲಿ ಅನ್ನ ಜಿಹಾದ್‌ ನಡೆಯುತ್ತಿದೆ. ಅಕ್ಕಿ ಸೇರಿ ಯಾವ ವಸ್ತುವನ್ನೂ ಮುಸ್ಲಿಮರ ಅಂಗಡಿಗಳಿಂದ ಕೊಳ್ಳಬೇಡಿ’ ಎಂಬ ಅಡಿಬರಹವನ್ನು ಈ ಪೋಸ್ಟ್‌ಗೆ ನೀಡಲಾಗಿದೆ. 

ಈ ವಿಡಿಯೊ ಕುರಿತು ಲಾಜಿಕಲ್‌ ಇಂಡಿಯನ್‌ ಪರಿಶೀಲನೆ ನಡೆಸಿದೆ. ವಿಡಿಯೊ ಜೊತೆ ಹಂಚಲಾಗಿರುವ ಮಾಹಿತಿ ಸುಳ್ಳು ಎಂದು ಅದು ವರದಿ ಮಾಡಿದೆ. 2018ರಲ್ಲಿ ದಕ್ಷಿಣ ಅಮೆರಿಕದ ಪೆರುವಿನಲ್ಲಿ ಈ ವಿಡಿಯೊ ಚಿತ್ರೀಕರಿಸಲಾಗಿದೆ. ರಾಸಾಯನಿಕ ಬೆರೆಸುತ್ತಿರುವವರು ಸ್ಪ್ಯಾನಿಶ್‌ ಭಾಷೆಯಲ್ಲಿ ಮಾತನಾಡುತ್ತಾರೆ. ಈ ವಿಡಿಯೊ 2018ರಲ್ಲೇ ಯುಟ್ಯೂಬ್‌ನಲ್ಲಿ ಅಪ್‌ಲೋಡ್‌ ಆಗಿದೆ. ಈ ವಿಡಿಯೊಗೆ ಪೆರುವಿನ ಹಲವು ನಾಗರಿಕರು ಕಮೆಂಟ್‌ ಕೂಡಾ ಮಾಡಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು