ಭಾನುವಾರ, ನವೆಂಬರ್ 27, 2022
27 °C

fact check: ಸಮಾರಂಭದಲ್ಲಿ ರಾಹುಲ್ ಜತೆಗಿರುವ ಹುಡುಗಿ ಯಾರು?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಯುವತಿಯೊಂದಿಗೆ ಮಾತುಕತೆಯಲ್ಲಿ ತೊಡಗಿರುವ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚೆಗೆ ವೈರಲ್ ಆಗಿತ್ತು. ‘ಭಾರತ್ ಜೋಡೊ ಯಾತ್ರೆಯಲ್ಲಿ ತೊಡಗಿರುವ ರಾಹುಲ್ ಅವರು ಯುವತಿ ಜೊತೆ ಕಾಲಕಳೆಯುತ್ತಿದ್ದಾರೆ’ ಎಂಬುದಾಗಿ ಚರ್ಚೆಯಾಗುತ್ತಿದೆ. ಇನ್ನೂ ಕೆಲವು ಬಳಕೆದಾರರು ಕೆಟ್ಟ ಅರ್ಥದಲ್ಲಿ ಮಾತನಾಡಿದ್ದಾರೆ.

ಚಿತ್ರದಲ್ಲಿ ರಾಹುಲ್ ಜೊತೆ ಇರುವ ಯುವತಿ ಹೆಸರು ಮಿರಾಯಾ ವಾದ್ರಾ. ರಾಹುಲ್ ಅವರ ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಮಗಳು. ಚರ್ಚೆಯಾಗುತ್ತಿರುವಂತೆ, ರಾಹುಲ್ ಅವರು ಭಾರತ್ ಜೊಡೊ ಯಾತ್ರೆಯ ವೇಳೆ ತೆಗೆದ ಚಿತ್ರ ಇದಲ್ಲ. 2015ರ ಆಗಸ್ಟ್ 20ರಂದು ನಡೆದ ರಾಜೀವ್‌ಗಾಂಧಿ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಈ ಚಿತ್ರವನ್ನು ಸೆರೆಹಿಡಿಯಲಾಗಿದೆ. ಮೂಲ ಚಿತ್ರದಲ್ಲಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಮಿರಾಯಾ ಅವರ ತಂದೆ ರಾಬರ್ಟ್ ವಾದ್ರಾ ಹಾಗೂ ಇತರರು ಇದ್ದಾರೆ ಎಂದು ‘ದಿ ಕ್ವಿಂಟ್‘ ತಾಣ ವರದಿ ಮಾಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು