‘ಉದಯಪುರದಲ್ಲಿ ಟೇಲರ್ ಕನ್ಹಯ್ಯ ಲಾಲ್ ಅವರನ್ನುಹತ್ಯೆ ಮಾಡಿದ ಹಂತಕರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದ ಪೊಲೀಸ್ ಕಾನ್‌ಸ್ಟೆಬಲ್‌ಗೆ ಕತ್ತಿಯಿಂದ ಇರಿಯಲಾಗಿದೆ. ಮುಸ್ಲಿಂ ಸಮುದಾಯದ ವ್ಯಕ್ತಿಯೊಬ್ಬರು ಇವರ ಮೇಲೆ ಹಲ್ಲೆ ನಡೆಸಿದ್ದು, ದೇಶವು ಇಸ್ಲಾಮೀಕರಣಗೊಳುತ್ತಿದೆ. ಮೊದಲು ಹತ್ಯೆ, ನಂತರ ವಿಡಿಯೊ, ಇದೀಗ ಪೊಲೀಸರ ಮೇಲೆ ದಾಳಿ ನಡೆದಿದೆ’ ಎಂಬ ಬರಹ ಇರುವ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಈ ವಿಡಿಯೊಗೆ ನೀಡಲಾಗಿರುವ ವಿವರಣೆ ತಪ್ಪು ಎಂದು ಲಾಜಿಕಲ್ ಇಂಡಿಯನ್ ವೆಬ್‌ಸೈಟ್ ತಿಳಿಸಿದೆ. ರಾಜಸ್ಥಾನದ ಬದನೋರ್ ಎಂಬಲ್ಲಿ ಜುಲೈ 4ರಂದು ನಡೆದ ಬೇರೆ ಘಟನೆಯಲ್ಲಿ ಕಾನ್‌ಸ್ಟೆಬಲ್ ಭಜೇರಾಮ್ ಎಂಬುವರ ಮೇಲೆ ಹಲ್ಲೆ ನಡೆದಿದೆ. ಆರೋಪಿಯನ್ನು ಬಂಧಿಸಲಾಗಿದೆ. ಈ ಸುದ್ದಿಯನ್ನು ಅಮರ್ ಉಜಾಲ ಸೇರಿದಂತೆ ಹಲವು ಪತ್ರಿಕೆಗಳು ಪ್ರಕಟಿಸಿವೆ. ಹಲ್ಲೆ ನಡೆಸಿದ ಯುವಕ ಹಿಂದೂ ಧರ್ಮಕ್ಕೆ ಸೇರಿದವನಾಗಿದ್ದು, ಕನ್ಹಯ್ಯ ಲಾಲ್ ಹಂತಕರನ್ನು ಬಂಧಿಸಿದ ಪೊಲೀಸರಿಗೂ, ಕಾನ್‌ಸ್ಟೆಬಲ್ ಭಜೇರಾಮ್‌ಗೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.