ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫ್ಯಾಕ್ಟ್‌ ಚೆಕ್‌: ರಾಹುಲ್ ಜತೆ ಇದ್ದದ್ದು ಚೀನಾ ರಾಯಭಾರಿ ಅಲ್ಲ

Last Updated 4 ಮೇ 2022, 19:32 IST
ಅಕ್ಷರ ಗಾತ್ರ

ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಪಬ್‌ವೊಂದರಲ್ಲಿ ಮಹಿಳೆಯ ಜೊತೆ ಕಾಣಿಸಿಕೊಂಡಿದ್ದ ವಿಡಿಯೊ ವೈರಲ್ ಆಗಿದೆ. ‘ಚೀನಾದ ರಾಯಭಾರಿಯ ಜತೆ ನೇಪಾಳದ ಪಬ್‌ನಲ್ಲಿ ರಾಹುಲ್ ಕಾಣಿಸಿಕೊಂಡಿದ್ದಾರೆ’ ಎಂದು ಬಿಜೆಪಿ ಆರೋಪಿಸಿತ್ತು. ‘ಕಾಂಗ್ರೆಸ್ ಬಿಕ್ಕಟ್ಟಿನಲ್ಲಿರುವಾಗ ರಾಹುಲ್ ಅವರು ನೈಟ್‌ಕ್ಲಬ್‌ನಲ್ಲಿದ್ದಾರೆ’ ಎಂದು ಮುಖಂಡ ಅಮಿತ್ ಮಾಳವೀಯ ಟ್ವೀಟ್ ಮಾಡಿದ್ದರು.ಈ ವಿದ್ಯಮಾನ ಕಾಂಗ್ರೆಸ್–ಬಿಜೆಪಿ ನಡುವೆ ವಾಕ್ಸಮರ ಸೃಷ್ಟಿಸಿತ್ತು. ‘ಭಾರತದ ವಿರುದ್ಧ ಸಂಚು ರೂಪಿಸಲು ರಾಹುಲ್ ಅವರು ಚೀನಾ ರಾಯಭಾರಿ ಜತೆಗೆ ಮಾತನಾಡಲು ನೇಪಾಳಕ್ಕೆ ಹೋಗಿದ್ದಾರೆ’ ಎಂಬ ವಿವರ ಇರುವ ಪೋಸ್ಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ರಾಹುಲ್ ಗಾಂಧಿ ಅವರ ಜೊತೆ ಕಾಣಿಸಿಕೊಂಡಿರುವ ಮಹಿಳೆ ಚೀನಾದ ರಾಯಭಾರಿ ಅಲ್ಲ ಎಂದು ಇಂಡಿಯಾ ಟುಡೇ ವರದಿ ಮಾಡಿದೆ. ‘ಸಿಎನ್‌ಎನ್‌ ಸುದ್ದಿಸಂಸ್ಥೆಯ ದೆಹಲಿ ವರದಿಗಾರ್ತಿ ಸುಮ್ನಿಮಾ ಉದಾಸ್ ಅವರ ಮದುವೆ ಸಮಾರಂಭದಲ್ಲಿ ಭಾಗಿಯಾಗಲು ರಾಹುಲ್ ನೇಪಾಳಕ್ಕೆ ಭೇಟಿ ನೀಡಿದ್ದರು. ಸುಮ್ನಿಮಾ ಅವರ ತಂದೆ ಬಿಮಾಉದಾಸ್ ಅವರುಮ್ಯಾನ್ಮಾರ್‌ಗೆ ನೇಪಾಳದ ರಾಯಭಾರಿಯಾಗಿದ್ದರು. ಪಬ್‌ ನಿರ್ವಾಹಕರನ್ನು ಸಂಪರ್ಕಿಸಿದಾಗ, ಚೀನಾದ ಯಾವ ರಾಯಭಾರಿಯೂ ರಾಹುಲ್ ಜೊತೆ ಇರಲಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ರಾಹುಲ್ ಜೊತೆ ಇರುವ ಮಹಿಳೆಯು ಮದುಮಗಳ ಗೆಳತಿ’ ಎಂದು ವರದಿಯಲ್ಲಿ ವಿವರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT