‘ಮನೆಯಿಂದಲೇ ಕೆಲಸ ಮಾಡಿ ಹಣ ಸಂಪಾದಿಸಿ’ ಎಂದು ದೇಶದ ಪ್ರಮುಖ ಪೆನ್ಸಿಲ್ ತಯಾರಿಕಾ ಸಂಸ್ಥೆಯಾದಹಿಂದೂಸ್ಥಾನ್ ಪೆನ್ಸಿಲ್ಸ್ ಪ್ರೈವೇಟ್ ಲಿಮಿಟೆಡ್ ಹೊರಡಿಸಿದೆ ಎನ್ನಲಾದ ಜಾಹೀರಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿವೆ. ನಟರಾಜ್ ಪೆನ್ಸಿಲ್ ಸಂಸ್ಥೆಯಲ್ಲಿ ಪೆನ್ಸಿಲ್ ಪ್ಯಾಕ್ ಮಾಡುವ ಉದ್ಯೋಗಗಳು ಖಾಲಿ ಇವೆ. ಮನೆಯಲ್ಲಿಯೇ ಕುಳಿತು ₹35,000ದ ವರೆಗೆ ಹಣ ಸಂಪಾದಿಸಬಹುದು ಎಂದು ಹಲವಾರು ಜಾಹೀರಾತುಗಳನ್ನು ನೀಡಲಾಗಿದೆ. ಜೊತೆಗೆ, ಸಂಪರ್ಕಕ್ಕಾಗಿ ದೂರವಾಣಿ ಸಂಖ್ಯೆಗಳನ್ನೂ ನೀಡಲಾಗಿದೆ. ಸಂಸ್ಥೆಯ ‘ಅಪ್ಸರಾ ಪೆನ್ಸಿಲ್’ ಪೊಟ್ಟಣಕ್ಕೆ ಪೆನ್ಸಿಲ್‌ಗಳನ್ನು ತುಂಬುತ್ತಿರುವ ವಿಡಿಯೊ ಜೊತೆ ಈ ಮಾಹಿತಿ ಹರಿಬಿಡಲಾಗಿದೆ.

ವೈರಲ್ ಆಗಿರುವ ಜಾಹೀರಾತುಗಳು ನಕಲಿ ಎಂದು ಹಿಂದೂಸ್ಥಾನ್ ಪೆನ್ಸಿಲ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯೇ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಮಾಹಿತಿ ನೀಡಿದೆ. ನಟರಾಜ್ ಪೆನ್ಸಿಲ್‌ಗಳನ್ನು ಪ್ಯಾಕ್ ಮಾಡುವ ಕೆಲಸ ಲಭ್ಯ ಇದೆ ಎಂಬಂತ ಜಾಹೀರಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಇವು ನಕಲಿ ಜಾಹೀರಾತುಗಳಾಗಿದ್ದು, ಹಿಂದೂಸ್ಥಾನ್ ಪೆನ್ಸಿಲ್ಸ್ ಸಂಸ್ಥೆಗೆ ಸಂಬಂಧಿಸಿಲ್ಲ. ಸಂಸ್ಥೆಯ ಪೆನ್ಸಿಲ್‌ಗಳ ತಯಾರಿ ಮತ್ತು ಪ್ಯಾಕಿಂಗ್ ಸಂಪೂರ್ಣವಾಗಿ ಯಂತ್ರಗಳ ಮೂಲಕ ನಡೆಯುತ್ತದೆ. ಈ ಪ್ರಕ್ರಿಯೆಗೆ ಜನರ ಅಗತ್ಯವಿಲ್ಲ ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.