ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫ್ಯಾಕ್ಟ್‌ ಚೆಕ್‌: ಉತ್ತರ ಪ್ರದೇಶದಲ್ಲಿ ಮಹಿಳೆಯರ ಮೇಲೆ ದಾಳಿ ನಡೆಸಿದ್ದು ಯಾರು?

Last Updated 11 ಏಪ್ರಿಲ್ 2022, 16:01 IST
ಅಕ್ಷರ ಗಾತ್ರ

ಪುರುಷರ ಗುಂಪೊಂದು ಮಹಿಳೆಯರನ್ನು ಮನಬಂದಂತೆ ಥಳಿಸುತ್ತಿರುವ ವಿಡಿಯೊವೊಂದು ವೈರಲ್‌ ಆಗಿದೆ. 30 ಸೆಕೆಂಡ್‌ಗಳ ಈ ವಿಡಿಯೊದಲ್ಲಿ ಪುರುಷರ ಗುಂಪು ಮೊದಲಿಗೆ ಸರಳು, ಸುತ್ತಿಗೆ ಬಳಸಿ ಮಹಿಳೆಯರ ಮೇಲೆ ದಾಳಿ ನಡೆಸುತ್ತದೆ. ಬಳಿಕ ಘಟನೆಯ ವಿಡಿಯೊ ಚಿತ್ರೀಕರಣ ಮಾಡುತ್ತಿದ್ದ ಪುರುಷರ ಮೇಲೂ ದಾಳಿ ನಡೆಸುತ್ತದೆ. ಈ ಘಟನೆ ಉತ್ತರ ಪ್ರದೇಶದ ಮಿರ್ಜಾಪುರದಲ್ಲಿ ನಡೆದಿದೆ. ಕಸವನ್ನು ಹೊರಗಡೆ ಬಿಸಾಡಲು ಹೇಳಿದ ಕಾರಣಕ್ಕೆ ಹಿಂದು ಕುಟುಂಬದ ಮೇಲೆ ಮುಸ್ಲಿಮರು ಮಾರಣಾಂತಿಕ ದಾಳಿ ನಡೆಸಿದರು ಎಂಬ ಮಾಹಿತಿಯನ್ನು ಈ ವಿಡಿಯೊ ಜೊತೆ ಹಂಚಲಾಗಿದೆ.

ಈ ವಿಡಿಯೊ ಜೊತೆ ಹಂಚಲಾಗಿರುವ ಮಾಹಿತಿ ಸುಳ್ಳು ಎಂದು ದಿ ಲಾಜಿಕಲ್‌ ಇಂಡಿಯನ್ ವೇದಿಕೆ ವರದಿ ಮಾಡಿದೆ. ದಾಳಿ ಮಾಡಿದವರು ಮತ್ತು ದಾಳಿಗೊಳಗಾದವರು ಇಬ್ಬರೂ ಮುಸ್ಲಿಂ ಸಮುದಾಯಕ್ಕೆ ಸೇರಿರುವವರು. ಈ ಘಟನೆ 2022ರ ಜನವರಿಯಲ್ಲಿಯೇ ವರದಿ ಆಗಿದೆ. ಸಂತ್ರಸ್ತೆ ನಸೀರಾ ಬೇಗಂ ಮತ್ತು ಅವರ ಮಕ್ಕಳು ಮದರಸಾದಲ್ಲಿ ಆಶ್ರಯ ಪಡೆದಿದ್ದರು. ಮೆಟ್ಟಿಲು ಇಳಿದು ಕೆಳಗೆ ಬರುವಾಗಿ ಮೆಟ್ಟಿಲ ಮೇಲೆ ಕುಳಿತಿದ್ದ ಮಹಿಳೆಗೆ ದಾರಿ ಬಿಡುವಂತೆ ನಸೀರಾ ಕೇಳಿದಾಗ ಜಗಳ ಶುರುವಾಗಿದೆ. ಅಲ್ಲಿಯೇ ಇದ್ದ ಪುರುಷರ ಗುಂಪು ನಸೀರಾ ಮತ್ತು ಮಕ್ಕಳ ಮೇಲೆ ದಾಳಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT