ಫ್ಯಾಕ್ಟ್‌ಚೆಕ್: ₹2000 ಮುಖಬೆಲೆಯ ನೋಟುಗಳ ಸರಬರಾಜನ್ನು ಸ್ಥಗಿತಗೊಳಿಸಿಲ್ಲ
₹2000 ಮುಖಬೆಲೆಯ ನೋಟುಗಳ ಸರಬರಾಜನ್ನು ಆರ್‌ಬಿಐ ಸ್ಥಗಿತಗೊಳಿಸಿದೆ. ಈಗಾಗಲೇ 58 ಎಟಿಎಂಗಳಿಂದ ₹2000 ಮುಖಬೆಲೆಯ ನೋಟಿನ ಕ್ಯಾಲಿಬರ್‌ಗಳನ್ನು ತೆಗೆಯಲಾಗಿದೆ. ಇನ್ನು ಮುಂದೆ ಎಟಿಎಂಗಳಲ್ಲಿ ₹100, ₹200 ಹಾಗೂ ₹500 ಮುಖಬೆಲೆಯ ನೋಟುಗಳು ಮಾತ್ರ ಲಭ್ಯವಾಗಲಿವೆ ಎಂಬ ಸುದ್ದಿಯನ್ನು ಪತ್ರಿಕೆಯೊಂದು ಪ್ರಕಟಿಸಿದೆ. ಅದರ ತುಣುಕು ಸಾಮಾಜಿಕ ಮಧ್ಯಮದಲ್ಲಿ ಹರಿದಾಡುತ್ತಿದೆ.
ಇದು ಸುಳ್ಳುಸುದ್ದಿ, ₹2000 ಮುಖಬೆಲೆಯ ನೋಟುಗಳ ಸರಬರಾಜನ್ನು ಆರ್‌ಬಿಐ ಸ್ಥಗಿತಗೊಳಿಸಿಲ್ಲ. ₹2,000 ಮುಖಬೆಲೆಯ ನೋಟುಗಳು ಎಟಿಎಂಗಳಲ್ಲಿ ಲಭ್ಯ ಇವೆ ಎಂದು ಪಿಐಬಿಯ ಫ್ಯಾಕ್ಟ್‌ಚೆಕ್ ಸ್ಪಷ್ಟಪಡಿಸಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.