ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕ್ ಉಗ್ರರ ಶಿಬಿರಗಳ ಮೇಲೆ ವೈಮಾನಿಕ ದಾಳಿ: ವೈರಲ್ ಆಗಿದೆ ವಿಡಿಯೊ ಗೇಮ್‍ ದೃಶ್ಯ

Last Updated 26 ಫೆಬ್ರುವರಿ 2019, 12:33 IST
ಅಕ್ಷರ ಗಾತ್ರ

ಬೆಂಗಳೂರು: ಪಾಕಿಸ್ತಾನದ ಜೈಷ್ -ಎ- ಮೊಹಮ್ಮದ್ ಉಗ್ರರ ತರಬೇತಿಶಿಬಿರಗಳ ಮೇಲೆ ಭಾರತೀಯ ವಾಯು ಪಡೆ ವೈಮಾನಿಕ ದಾಳಿ ನಡೆಸಿದ ಸುದ್ದಿ ಪ್ರಕಟವಾಗುತ್ತಿದ್ದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಫೇಕ್ ವಿಡಿಯೊಗಳು ಹರಿದಾಡತೊಡಗಿವೆ.

ಫೆ. 26ರಂದು ಬಲಾಕೋಟ್‍ನಲ್ಲಿ ನಡೆದ ವೈಮಾನಿಕ ದಾಳಿಯ ದೃಶ್ಯ ಇದು ಎಂದುವಿಡಿಯೊ ಗೇಮ್‍ದೃಶ್ಯದ ತುಣುಕೊಂದುವಾಟ್ಸ್ಆ್ಯಪ್, ಫೇಸ್‍ಬುಕ್ ಮತ್ತು ಟ್ವಿಟರ್ ನಲ್ಲಿ ಇದು ಶೇರ್ ಆಗಿದೆ.

ಈ ವಿಡಿಯೊ ಬಗ್ಗೆ ಬೂಮ್ ಲೈವ್ ಫ್ಯಾಕ್ಟ್ ಚೆಕ್ ಮಾಡಿದ್ದು ಹೀಗೆ

ವೈರಲ್ ಆಗಿರುವ 20 ಸೆಕೆಂಡ್ ಅವಧಿಯ ಈ ವಿಡಿಯೊದ ಪ್ರಧಾನ ಫ್ರೇಮ್‍ಗಳನ್ನು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ ಯೂಟ್ಯೂಬ್‍ನಲ್ಲಿ ಜುಲೈ 9, 2015ರಂದು ಅಪ್‍ಲೋಡ್ ಆಗಿರುವ ವಿಡಿಯೊ ಸಿಕ್ಕಿದೆ.ವಿಡಿಯೊದ ಶೀರ್ಷಿಕೆ ‘Really Short Engagement (ft. Taliban) – Apache Gunner FLIR Cam #6 – Arma 2’.


Arma 2 ಎಂಬುದು ಮಿಲಿಟರಿ ಅಣಕವಿಡಿಯೊ ಗೇಮ್ ಆಗಿದೆ.ವೈರಲ್ ಆಗಿರುವ ವಿಡಿಯೊದಲ್ಲಿ ಇರುವುದು ಇದೇ ದೃಶ್ಯ ಹೊರತು ವೈಮಾನಿಕ ದಾಳಿಯ ದೃಶ್ಯವಲ್ಲ.

ಗಮನಿಸಿ: ವೈಮಾನಿಕ ದಾಳಿಯ ದೃಶ್ಯಗಳನ್ನು ಭಾರತೀಯ ಸೇನೆ ಅಥವಾ ವಾಯುಪಡೆಮಾತ್ರ ಬಿಡುಗಡೆ ಮಾಡುತ್ತವೆ.ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ವಿಡಿಯೊ ದೃಶ್ಯಗಳನ್ನು ಸೇನಾಪಡೆ ಬಿಡುಗಡೆ ಮಾಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT