ಭಾನುವಾರ, ಫೆಬ್ರವರಿ 23, 2020
19 °C
ಫ್ಯಾಕ್ಟ್‌ಚೆಕ್

ರಾಷ್ಟ್ರಧ್ವಜಕ್ಕೆ ಎಡಗೈನಲ್ಲಿ ಸಲ್ಯೂಟ್ ಮಾಡಿದರೇ ರಾಹುಲ್ ಗಾಂಧಿ?

ಪ್ರಜಾವಾಣಿ ವೆಬ್‌ ಡೆಸ್ಕ್ Updated:

ಅಕ್ಷರ ಗಾತ್ರ : | |

Rahul gandhi

ಬೆಂಗಳೂರು: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ರಾಷ್ಟ್ರಧ್ವಜಕ್ಕೆ ಎಡಗೈನಲ್ಲಿ ಸಲ್ಯೂಟ್ ಮಾಡಿದ್ದಾರೆ ಎನ್ನಲಾದ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಆಗಿದೆ. ಆದರೆ, ಅದು ಎಡಿಟ್ ಮಾಡಿದ ಚಿತ್ರ ಎಂಬುದು ತಿಳಿದುಬಂದಿದೆ.

‘ಝೀ ನ್ಯೂಸ್ ಗ್ಲೋಬಲ್ ಫ್ಯಾನ್ಸ್’ ಎಂಬ ಫೇಸ್‌ಬುಕ್‌ ಪುಟದಲ್ಲಿ ರಾಹುಲ್ ಅವರು ಎಡಗೈನಲ್ಲಿ ಸಲ್ಯೂಟ್ ಮಾಡುವ ಚಿತ್ರ ಪ್ರಕಟಿಸಿ, ‘ಯಾವ ಕೈಯಲ್ಲಿ ಸಲ್ಯೂಟ್ ಮಾಡಬೇಕು ಎಂಬುದೂ ಈ ಮಹಾನ್ ನಾಯಕನಿಗೆ ತಿಳಿದಿಲ್ಲ. ಇವರು ದೇಶದ ಪ್ರಧಾನಿಯಾಗಬೇಕೆಂದು ಬಯಸುತ್ತಾರೆ’ ಎಂಬ ವಿವರಣೆಯನ್ನೂ ಬರೆಯಲಾಗಿದೆ.

ಈ ಕುರಿತು ಇಂಡಿಯಾ ಟುಡೆ ಫ್ಯಾಕ್ಟ್‌ ಚೆಕ್ ಮಾಡಿದ್ದು, ರಾಹುಲ್ ಅವರು ಬಲಗೈನಲ್ಲಿ ಸಲ್ಯೂಟ್ ಮಾಡಿದ ಚಿತ್ರವನ್ನು ತಿರುಚಿ ಎಡಿಟ್ ಮಾಡಿ ಪ್ರಕಟಿಸಲಾಗಿದೆ ಎಂದು ವರದಿ ಮಾಡಿದೆ.

ಎಡಿಟ್ ಮಾಡಲು ಬಳಸಿದ ಈ ಚಿತ್ರವು 65ನೇ ಸ್ವಾತಂತ್ರ್ಯೋತ್ಸವದ ಸಂದರ್ಭದ್ದು. ಆ ಚಿತ್ರವನ್ನು ಅನೇಕ ಸುದ್ದಿ ಮಾಧ್ಯಮಗಳು ಅಂದಿನ ವರದಿಗಳಲ್ಲಿ ಬಳಸಿದ್ದವು ಎಂಬುದನ್ನೂ ವರದಿ ಉಲ್ಲೇಖಿಸಿದೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು