ಗುರುವಾರ , ಜೂನ್ 30, 2022
25 °C

ಫ್ಯಾಕ್ಟ್ ಚೆಕ್: ಸೋನಿಯಾ ಜೊತೆ ಇರುವುದು ಕ್ವಟ್ರೋಚಿ ಅಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ತಮ್ಮ ಪುತ್ರ ರಾಹುಲ್ ಗಾಂಧಿ ಜೊತೆ ಇರುವ ಹಳೆಯ ಚಿತ್ರವೊಂದು ವೈರಲ್ ಆಗಿದೆ. ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗಿರುವ ಪ್ರಕಾರ, ಈ ಚಿತ್ರದಲ್ಲಿ ಸೋನಿಯಾ ಜೊತೆ ಇರುವುದು ಉದ್ಯಮಿ ಒಟ್ಟಾವಿಯೊ ಕ್ವಟ್ರೋಚಿ. ಇವರ ಹೆಸರು ಬೋಫೋರ್ಸ್ ಹಗರಣದಲ್ಲಿ ಕೇಳಿಬಂದಿತ್ತು. ರಾಜೀವ್ ಗಾಂಧಿ ನಿಧನಾನಂತರ ಸೋನಿಯಾ ಅವರು ಕ್ವಟ್ರೋಚಿ ಅವರನ್ನು 57 ಬಾರಿ ಭೇಟಿ ಮಾಡಿದ್ದರು ಎಂಬ ಸಂದೇಶ ಹರಿದಾಡುತ್ತಿದೆ.

ಈ ವೈರಲ್ ಚಿತ್ರವನ್ನು ಲಾಜಿಕಲ್ ಇಂಡಿಯನ್ ಹಾಗೂ ಆಲ್ಟ್ ನ್ಯೂಸ್ ಪರಿಶೀಲಿಸಿವೆ. ಈ ಚಿತ್ರವನ್ನು 1996ರ ಏಪ್ರಿಲ್ 8ರಂದು ಪಿಟಿಐ ಸುದ್ದಿಸಂಸ್ಥೆಯ ಸಿಬ್ಬಂದಿ ಸೆರೆಹಿಡಿದಿದ್ದಾರೆ. ಇದನ್ನು ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆ ಪ್ರಕಟಿಸಿದೆ. ವಿಶೇಷ ಭದ್ರತಾ ಪಡೆ (ಎಸ್‌ಪಿಜಿ) ಸಂಸ್ಥಾಪನಾ ದಿನದ ಕಾರ್ಯಕ್ರಮದಲ್ಲಿ ಸೋನಿಯಾ ಅವರು ತಮ್ಮ ಪುತ್ರ ರಾಹುಲ್ ಜೊತೆ ಭಾಗಿಯಾಗಿದ್ದರು ಎಂದು ಚಿತ್ರದ ಅಡಿಬರಹ ಉಲ್ಲೇಖಿಸಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು