ಮಂಗಳವಾರ, ಜನವರಿ 18, 2022
23 °C

Fact check: ಬಿಜೆಪಿ ಬ್ಯಾನರನ್ನು ಹರಿಯುತ್ತಿರುವ ವಿಡಿಯೊ, ಇದು ರೈತರ ಕೆಲಸವೇ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಫ್ಯಾಕ್ಟ್‌ಚೆಕ್‌

ಗುಂಪೊಂದು ವೇದಿಕೆಗೆ ಹತ್ತಿ, ವೇದಿಕೆಯನ್ನು ಧ್ವಂಸಗೊಳಿಸುವ ಮತ್ತು ಬಿಜೆಪಿ ಬ್ಯಾನರನ್ನು ಹರಿಯುತ್ತಿರುವ ವಿಡಿಯೊವೊಂದು ವೈರಲ್‌ ಆಗಿದೆ. ಮೂರು ಕೃಷಿ ಕಾನೂನುಗಳನ್ನು ಹಿಂಪಡೆಯುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ ಬಳಿಕ ಹರಿಯಾಣದಲ್ಲಿ ರೈತರು ನಡೆದುಕೊಂಡ ರೀತಿ ಇದು ಎಂದು ಹೇಳಲಾಗಿದೆ. ‘ಕೃಷಿ ಕಾನೂನುಗಳನ್ನು ಹಿಂಪಡೆಯುವುದಾಗಿ ಹೇಳಿದ ಬಳಿಕ ಈ ರೀತಿಯ ಘಟನೆಗಳು ನಡೆಯುತ್ತಿವೆ. ಮಾಧ್ಯಮಗಳು ಇವನ್ನು ತೋರಿಸುವುದಿಲ್ಲ’ ಎಂದು ಅಡಿ ಬರಹ ನೀಡಲಾಗಿದೆ.

ಈ ಘಟನೆ ನಡೆದಿರುವುದು 2021ರ ಜನವರಿಯಲ್ಲಿ ಎಂದು ಲಾಜಿಕಲ್‌ ಇಂಡಿಯನ್‌ ಹೇಳಿದೆ. ಈ ಕುರಿತು ಎಬಿಪಿ ನ್ಯೂಸ್‌ 2021ರ ಜ.10ರಂದು ವರದಿ ಮಾಡಿದೆ. ಈ ಘಟನೆ ಹರಿಯಾಣದ ಕರ್ನಾಲ್‌ನಲ್ಲಿ ನಡೆದಿದೆ. ಹರಿಯಾಣ ಮುಖ್ಯಮಂತ್ರಿ ಮನೋಹರ್‌ ಲಾಲ್‌ ಖಟ್ಟರ್‌ ಅವರು ಆಯೋಜಿಸಿದ್ದ ಮಹಾಪಂಚಾಯಿತಿಗೆ ರೈತರು ಅಡ್ಡಿಪಡಿಸಿದ್ದರು. ಈ ಪ್ರತಿಭಟನೆ ನಡೆಸಿದ್ದಕ್ಕಾಗಿ ಕಾಂಗ್ರೆಸ್‌ ವಿರುದ್ಧ ಖಟ್ಟರ್‌ ಹರಿಹಾಯ್ದಿರುವುದಾಗಿ ವರದಿಯಲ್ಲಿ ಹೇಳಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು