ಚಿಕ್ಕಬಳ್ಳಾಪುರ: ವಿಷ ಸೇವಿಸಿ ರೈತ ಆತ್ಮಹತ್ಯೆ

7

ಚಿಕ್ಕಬಳ್ಳಾಪುರ: ವಿಷ ಸೇವಿಸಿ ರೈತ ಆತ್ಮಹತ್ಯೆ

Published:
Updated:

ಚಿಕ್ಕಬಳ್ಳಾಪುರ: ಗುಡಿಬಂಡೆ ತಾಲ್ಲೂಕಿನ ಸೋಮೇನಹಳ್ಳಿ ಹೋಬಳಿಯ ಯರಲಕ್ಕೇನಹಳ್ಳಿಯ ರೈತ ಲಕ್ಷ್ಮಯ್ಯ (55) ಅವರು ಮಂಗಳವಾರ  ಬೆಳಿಗ್ಗೆ ಸುಮಾರಿಗೆ ತಮ್ಮ ಜಮೀನಿನಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೃತರಿಗೆ ಒಬ್ಬ ಮಗ, ಮೂರು ಪುತ್ರಿಯರಿದ್ದಾರೆ. ಒಂದೂವರೆ ತಿಂಗಳ ಹಿಂದಷ್ಟೇ ಲಕ್ಷ್ಮಯ್ಯ ಅವರ ಪತ್ನಿ ತೀರಿಹೋಗಿದ್ದರು.

ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಗುಡಿಬಂಡೆ ತಹಶೀಲ್ದಾರ್ ಮುನಿರಾಜು, ‘ಮೃತ ಲಕ್ಷ್ಮಯ್ಯ ಅವರಿಗೆ ಎರಡೂವರೆ ಎಕರೆ ಜಮೀನಿದೆ. ಇತ್ತೀಚೆಗೆ ಕೊಳವೆಬಾವಿ ವಿಫಲಗೊಂಡಿತ್ತು. ಜತೆಗೆ ಕೆಲವರ ಬಳಿ ಕೈಸಾಲ ಕೂಡ ಮಾಡಿದ್ದರು’ ಎಂದು ಮೃತರ ಸಹೋದರ ಹೇಳಿಕೆ ನೀಡಿದ್ದಾರೆ. ಸಾವಿನ ನಿಖರ ಕಾರಣ ತನಿಖೆಯ ನಂತರವಷ್ಟೇ ತಿಳಿದು ಬರಬೇಕು’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !