ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸಸ್ವಾದ: ಸವತೆ ಮುಗಿಯದ ರುಚಿಯ ಒರತೆ

ಕವಿತಾ ಹೆಗಡೆ
Published 26 ಜನವರಿ 2024, 23:52 IST
Last Updated 26 ಜನವರಿ 2024, 23:52 IST
ಅಕ್ಷರ ಗಾತ್ರ

ಕೇಕ್‌

ಬೇಕಾಗುವ ಸಾಮಗ್ರಿಗಳು: ತುರಿದ ಸವತೆಕಾಯಿ 3/4 ಕಪ್, ತೆಂಗಿನ ತುರಿ 3/4 ಕಪ್, ತುರಿದ ಬೆಲ್ಲ 3/4 ಕಪ್, ಚಿರೋಟಿ ರವೆ 3/4 ಕಪ್, ಜಾಯಿಕಾಯಿ 1/2 , ತುಪ್ಪ 4 ಚಮಚ, ಉಪ್ಪು 1/2 ಚಮಚ, ಬೇಕಿಂಗ್ ಪೇಪರ್ 1

ಮಾಡುವ ವಿಧಾನ: ಮೊದಲು ಒಂದು ಮಿಕ್ಸಿಂಗ್ ಬೌಲ್ ನಲ್ಲಿ ಚಿರೋಟಿ ರವೆ, ತುರಿದ ಬೆಲ್ಲ , ಸಣ್ಣಗೆ ತುರಿದ ಸವತೆಕಾಯಿ ಮತ್ತು ತೆಂಗಿನ ತುರಿ ಹಾಕಿ ಮಿಕ್ಸ್ ಮಾಡಿ..ತುಪ್ಪ ಮತ್ತು ಉಪ್ಪು ಸೇರಿಸಿ ಒಂದು ಗಂಟೆಗಳ ಕಾಲ ಮಿಶ್ರಣವನ್ನು ಮುಚ್ಚಿಡಿ.. ನಂತರ ಅಗಲವಾದ ಕೇಕ್ ಮೌಲ್ಡ್ ನಲ್ಲಿ ಬೇಕಿಂಗ್ ಪೇಪರ್ ಹಾಕಿಕೊಂಡು ತಯಾರಿಸಿದ ಮಿಶ್ರಣವನ್ನು ಸುರುವಿಕೊಂಡು ಸರಿಯಾಗಿ ಸೆಟ್ ಮಾಡಿ. .ಓವನನ್ನು ಫ್ರೀ ಹೀಟ್ ಮಾಡಿ 180'ಸೆಲ್ಸಿಯಸ್ ನಲ್ಲಿ ಮುಕ್ಕಾಲು ಗಂಟೆ ಬೇಯಿಸಿ.. ನಂತರ ಡಿ ಮೌಲ್ಡ್ ಮಾಡಿ ಕೇಕ್ ಪೀಸ್ ಗಳನ್ನು ಕಟ್ ಮಾಡಿ ಸರ್ವ್‌ ಮಾಡಿ.

ಖಾರ ಸೇವ್

ಬೇಕಾಗುವ ಸಾಮಗ್ರಿಗಳು: ಸವತೆಕಾಯಿ ರಸ 1 ಕಪ್, ಹಸಿಮೆಣಸು 3, ಓಂ ಕಾಳು 1 ಚಮಚ, ಅಕ್ಕಿ ಹಿಟ್ಟು 2 ಕಪ್, ಉಪ್ಪು ರುಚಿಗೆ ತಕ್ಕಷ್ಟು, ಎಣ್ಣೆ 1 ಕಪ್

ಮಾಡುವ ವಿಧಾನ: ಮೊದಲು ಸವತೆಕಾಯಿ ಸಿಪ್ಪೆ ತೆಗೆದು ತುರಿದುಕೊಂಡು ಹಸಿಮೆಣಸು ಸೇರಿಸಿ ರುಬ್ಬಿಕೊಳ್ಳಿ.ರುಬ್ಬಿದ ರಸಕ್ಕೆ ಅಕ್ಕಿ ಹಿಟ್ಟು , ಓಂಕಾಳು , ಉಪ್ಪು ಬೆರೆಸಿ ಚೆನ್ನಾಗಿ ಕಲೆಸಿ. ತೇಂಗೊಳಲು ಒರಳಿಗೆ ಎಣ್ಣೆ ಸವರಿಕೊಂಡು ಕಲೆಸಿಕೊಂಡ ಹಿಟ್ಟನ್ನು ತುಂಬಿ ಪ್ರೆಸ್ ಮಾಡಿ. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿಕೊಂಡು ನೇರವಾಗಿ ಒರಳಿನಿಂದ ಬಾಣಲೆಗೆ ಸೇವ್ ಒತ್ತಿರಿ.ಕೆಂಪಗೆ ಗರಿ-ಗರಿಯಾಗಿ ಕರಿದು ತೆಗೆಯಿರಿ. ಟೀ ಮತ್ತು ಕಾಫಿ ಜೊತೆಗೆ ಖುಷಿಯಿಂದ ಸವಿಯಿರಿ.

ಗ್ರೀನ್ ಹಲ್ವಾ

ಬೇಕಾಗುವ ಸಾಮಗ್ರಿಗಳು: ತುರಿದ ಸವತೆಕಾಯಿ 2 ಕಪ್, ಸಕ್ಕರೆ 1 ಕಪ್, ಹಾಲಿನ ಪುಡಿ 2 ಚಮಚ, ತುಪ್ಪ 2 ಚಮಚ, ಏಲಕ್ಕಿ ಪುಡಿ 1/4 ಚಮಚ, ಗೋಡಂಬಿ- ದ್ರಾಕ್ಷಿ-ಪಿಸ್ತಾ 1/4 ಕಪ್

ಮಾಡುವ ವಿಧಾನ:- ಸವತೆಕಾಯಿ ಮೇಲಿನ ಸಿಪ್ಪೆ ತೆಗೆದು ಒಳಗಿನ ಬೀಜ ತೆಗೆದು ತುರಿದುಕೊಳ್ಳಿ . ಬಾಣಲೆಗೆ ಸ್ವಲ್ಪ ತುಪ್ಪ ಹಾಕಿ ಗೋಡಂಬಿ ಮತ್ತು ದ್ರಾಕ್ಷಿ ಹುರಿದು ತೆಗೆದಿಟ್ಟುಕೊಳ್ಳಿ .

ಅದೇ ಬಾಣಲೆಗೆ ತುರಿದಿಟ್ಟುಕೊಂಡ ಸವತೆಕಾಯಿಯನ್ನು ನೀರಿನಿಂದ ಬೇರ್ಪಡಿಸಿ ಬಾಣಲೆಗೆ ಹಾಕಿ ಹುರಿಯಿರಿ ಎರಡು ಚಮಚ ಹಾಲಿನ ಪುಡಿ ಹಾಕಿ ಮಿಕ್ಸ್ ಮಾಡಿ ಸಕ್ಕರೆ ಹಾಕಿ ಹೊಂದಿಸಿ. ಏಲಕ್ಕಿ ಪುಡಿ ಹಾಕಿ ಕೆಳಗಿಳಿಸಿ ತುಪ್ಪ ಸವರಿದ ತಟ್ಟೆಗೆ ಹಾಕಿ ಅದರ ಮೇಲೆ ತುಪ್ಪದಲ್ಲಿ ಕರಿದ ದ್ರಾಕ್ಷಿ, ಗೋಡಂಬಿ, ಪಿಸ್ತಾ ಉದುರಿಸಿ ಅರ್ಧ ಗಂಟೆ ಸೆಟ್ ಆಗಲು ಬಿಡಿ . ನಂತರ ಬೌಲ್ ಗೆ ಹಾಕಿ ಸರ್ವ್ ಮಾಡಿ .

ರಿಬ್ಬನ್ ಪಕೋಡ

ಬೇಕಾಗುವ ಸಾಮಗ್ರಿಗಳು: ಕಡಲೆಹಿಟ್ಟು 1 ಕಪ್, ಅಕ್ಕಿಹಿಟ್ಟು 1/4 ಕಪ್, ಸವತೆಕಾಯಿ ರಸ 3/4 ಕಪ್, ಇಂಗು ಚಿಟಿಕೆ, ಉಪ್ಪು ರುಚಿಗೆ ತಕ್ಕಷ್ಟು, ಮೆಣಸಿನಪುಡಿ 1 ಚಮಚ, ಜೀರಿಗೆ ಪುಡಿ 1 ಚಮಚ, ಕರಿಯಲು ಸಾಕಷ್ಟು ಎಣ್ಣೆ


ಮಾಡುವ ವಿಧಾನ: ಒಂದು ಬೌಲ್ ನಲ್ಲಿ ಕಡಲೆ ಹಿಟ್ಟು , ಅಕ್ಕಿ ಹಿಟ್ಟು, ಸವತೆಕಾಯಿ ರುಬ್ಬಿ ತಯಾರಿಸಿದ ರಸ , ಇಂಗು, ಉಪ್ಪು,ಮೆಣಸಿನ ಪುಡಿ, ಜೀರಿಗೆ ಪುಡಿ, ಸೇರಿಸಿ ಚೆನ್ನಾಗಿ ಕಲೆಸಿಟ್ಟುಕೊಳ್ಳಿ..ಈಗ ಚಕ್ಕುಲು ಒರಳಿಗೆ ಎಣ್ಣೆ ಸವರಿಕೊಂಡು ನಲ್ಲಿ ರಿಬ್ಬನ್ ಪ್ಲೇಟ್ ನ್ನು ಹಾಕಿ ಕಾದ ಎಣ್ಣೆಯಲ್ಲಿ ರಿಬ್ಬನ್ ಗಳನ್ನು ಒತ್ತಿರಿ .....ಕೆಂಪಗೆ ಕರಿದು ತೆಗೆಯಿರಿ.. ಗರಿ ಗರಿಯಾದ ಸವತೆಕಾಯಿ ಸ್ನ್ಯಾಕ್ಸ್ ಸವಿಯಲು ಸಿದ್ಧ.

ಕ್ರಿಸ್ಪಿ ಕಟ್ಲೆಟ್‌

ಬೇಕಾಗುವ ಸಾಮಗ್ರಿಗಳು:- ಸವತೆಕಾಯಿ 1, ಚಿರೋಟಿ ರವೆ 1 ಕಪ್, ಸಕ್ಕರೆ 1 ಚಮಚ, ಉಪ್ಪು ರುಚಿಗೆ ತಕ್ಕಷ್ಟು, ಅರಿಶಿನ ಪುಡಿ 1/2 ಚಮಚ, ಜೀರಿಗೆ ಪುಡಿ 1/2 ಚಮಚ, ಹಸಿ ಮೆಣಸು 2, ಕೊತ್ತಂಬರಿ ಸೊಪ್ಪು ಸ್ವಲ್ಪ,ಎಣ್ಣೆ 5 ಚಮಚ

ಮಾಡುವವಿಧಾನ:- ಮೊದಲು ಸವತೆಕಾಯಿ ತುರಿದು ರುಬ್ಬಿಕೊಳ್ಳಿ.ಈ ರಸಕ್ಕೆ ಚಿರೋಟಿ ರವೆ, ಉಪ್ಪು, ಅರಿಶಿನ ಪುಡಿ, ಜೀರಿಗೆ ಪುಡಿ, ಸಕ್ಕರೆ, ಹೆಚ್ಚಿದ ಹಸಿಮೆಣಸು , ಕೊತ್ತಂಬರಿ ಸೊಪ್ಪು ಸೇರಿಸಿ ನೀರು ಹಾಕದೇ ಕಲೆಸಿಕೊಳ್ಳಿ. ತಯಾರಿಸಿದ ಮಿಶ್ರಣವನ್ನು ಕಟ್ಲೆಟ್ ಆಕಾರದಲ್ಲಿ ತಟ್ಟಿಕೊಂಡು ರವೆಯಲ್ಲಿ ಅದ್ದಿತೆಗೆದು ತವಾದ ಮೇಲೆ ಹಾಕಿ ಎರಡೂ ಕಡೆ ಎಣ್ಣೆ ಹಾಕಿ ಬೇಯಿಸಿ ತೆಗೆಯಿರಿ..ರುಚಿಕರ ಕಟ್ಲೆಟ್ ನ್ನು ಸಾಸ್ ಜೊತೆಗೆ ಸರ್ವ್‌ ಮಾಡಿ

ಕೋಡುಬಳೆ

ಬೇಕಾಗುವ ಸಾಮಗ್ರಿಗಳು: ಸವತೆಕಾಯಿ 2, ಹಸಿಮೆಣಸು 4, ಅಕ್ಕಿ ಹಿಟ್ಟು 2 ಕಪ್, ಅರಿಶಿನ ಪುಡಿ 1/4 ಚಮಚ, ಜೀರಿಗೆ 1/2 ಚಮಚ, ಓಂ ಕಾಳು 1/2 ಚಮಚ, ಉಪ್ಪು ರುಚಿಗೆ ತಕ್ಕಷ್ಟು, ಎಣ್ಣೆ ಕರಿಯಲು ಸಾಕಷ್ಟು

ಮಾಡುವ ವಿಧಾನ:- ಒಂದು ಪಾತ್ರೆಯಲ್ಲಿ ತುರಿದ ಸವತೆಕಾಯಿ ಹಸಿಮೆಣಸು,ಉಪ್ಪು,ಜೀರಿಗೆ, ಓಂ ಕಾಳು ,ಅರಿಶಿನ ಪುಡಿ ಹಾಕಿ ಕುದಿಸಿ.ಈ ಮಿಶ್ರಣಕ್ಕೆ ಅಕ್ಕಿ ಹಿಟ್ಟು ಬೆರೆಸಿ ಬಿಸಿಯಾಗಿದ್ದಾಗಲೇ ಕಲೆಸಿ. ಸ್ವಲ್ಪ ತಣಿದ ನಂತರ ಒಂದು ಚಮಚ ಕಾದ ಎಣ್ಣೆ ಹಾಕಿ ಚೆನ್ನಾಗಿ ನಾದಿಕೊಳ್ಳಿ.ಕೋಡುಬಳೆ ಹೊಸೆದುಕೊಳ್ಳಿ. .ಕಾದ ಎಣ್ಣೆಯಲ್ಲಿ ಗರಿಯಾಗಿ ಕರಿದು ತೆಗೆಯಿರಿ.ಕಾಫಿ ಅಥವಾ ಟೀ ಜೊತೆಗೆ ಸವಿಯಿರಿ..

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT