ದೊಡ್ಡಬಳ್ಳಾಪುರ: ನಗರದಲ್ಲಿ ಇತ್ತೀಚಿನ ದಿನಗಳಲ್ಲಿ ಮಿಲ್ಟ್ರಿ ಹೋಟೆಲ್ಗಳಿಗಿಂತಲೂ ಹೆಚ್ಚು ಜನಪ್ರಿಯವಾಗಿರುವುದು ಕಬಾಬ್ ಕಾರ್ನರ್ಗಳು.

ಮಾಂಸಹಾರಿಗಳಿಗೆ ಅತ್ಯಂತ ಪ್ರಿಯವಾದ ತಿಂಡಿಯಾಗಿರುವ ಕಬಾಬ್ ಸೆಂಟರ್ಗಳು ಸಂಜೆ ವೇಳೆ ತಮ್ಮದೇ ಆದ ವಿಶಿಷ್ಟ ರುಚಿ, ಸ್ವಾದದಿಂದಲೇ ಗ್ರಾಹಕರನ್ನು ತಮ್ಮತ್ತ ಸೆಳೆಯುತ್ತಿವೆ.

ಹೊರ ರಾಜ್ಯದ ಕಾರ್ಮಿಕರು ಹಾಗೂ ನೌಕರ ವರ್ಗ ಹೆಚ್ಚಾಗಿರುವ ರೈಲ್ವೆ ಸ್ಟೇಷನ್ ಸುತ್ತಮುತ್ತಲಿನ ಪ್ರದೇಶವು ಸೇರಿದಂತೆ ಡಿ.ಕ್ರಾಸ್, ಇಸ್ಲಾಂಪುರ ರಸ್ತೆ, ಮುತ್ಯಾಲಮ್ಮ ದೇವಾಲಯ ರಸ್ತೆ, ನೆಲಮಂಗಲ ರಸ್ತೆಯ ಕನಕದಾಸ ವೃತ್ತ, ಗೌರಿಬಿದನೂರು ರಸ್ತೆಯ ಪಾಲನಜೋಗಹಳ್ಳಿಯಲ್ಲಿ ಹೆಚ್ಚಿನ ಕಬಾಬ್ ಕಾರ್ನರ್ಗಳಿವೆ.

ಕೋಳಿ ಮಾಂಸದಿಂದ ಅದರಲ್ಲೂ ತಾಜಾ ನಾಟಿ ಕೋಳಿಯಿಂದ ತಯಾರಿಸುವ ನಂಬಿಕಸ್ಥ ಕಬಾಬ್ ಸೆಂಟರ್ಗಳಿಗೆ ಹೆಚ್ಚಿನ ಕಾಯಂ ಗ್ರಾಹಕರಿದ್ದಾರೆ. ಬಹುತೇಕ ಕಬಾಬ್ ಸೆಂಟರ್ಗಳವರು ಸ್ವಂತವಾಗಿ ತಯಾರಿಸಿಕೊಳ್ಳುವ ಮಸಾಲೆ, ವಿವಿಧ ಬಗೆಯೆ ಚಟ್ನಿ, ಕಬಾಬ್ ಜೊತೆಗೆ ನೀಡುವ ಇತರೆ ಮಸಾಲೆ ತಿಂಡಿಗಳಿಂದಾಗಿಯೇ ದೊಡ್ಡಬಳ್ಳಾಪುರ ಗೌರಿಬಿದನೂರು ರಸ್ತೆಯ ಹಬೀಬ್, ಬಾಬಣ್ಣ, ಕುಚ್ಚಪ್ಪನಪೇಟೆ ಸತೀಶ್, ಲೋಕಿ,ಕಲ್ಲುಪೇಟೆ ಆನಂದ್,ಶ್ರೀಕಂಠ, ಕೊಂಗಾಡಿಯಪ್ಪ ಕಾಲೇಜ್ ರಸ್ತೆಯ ವೆಂಕಟೇಶ್, ಕೆ.ಎಂ.ಎಚ್.ಕಲ್ಯಾಣ ಮಂಟಪ ಸಮೀಪದ ರಮೇಶ್ ಹೀಗೆ ಹತ್ತಾರು ಜನ ಕಬಾಬ್ ಅನ್ನು ತಮ್ಮದೇ ಕೈ ರುಚಿಯಿಂದ ಗ್ರಾಹಕರನ್ನು ಹಿಡಿದಿಟ್ಟುಕೊಂಡಿದ್ದಾರೆ.

ಕಬಾಬ್ ತಿಂಡಿಗೆ ಬಳಸುವ ಮಸಾಲೆ ಮೊದಲುಗೊಂಡು ಕೋಳಿ ಲಿವರ್ ಕಬಾಬ್, ಲೆಗ್ ಪೀಸ್, ಲಾಲಿ ಪಪ್ ಹೀಗೆ ತರಹೇವಾರಿ ಕಬಾಬ್ ಗಳನ್ನು ತಯಾರಿಸುತ್ತಾರೆ. ಹೀಗಾಗಿಯೇ ಮಾಂಸಹಾರದ ಹೋಟೆಲ್ಗಳ ವ್ಯಾಪರದಂತೆಯೇ ಕಬಾಬ್ ತಿಂಡಿ ಕಾರ್ನರ್ಗಳು ಹೆಚ್ಚು ಜನಪ್ರಿಯತೆ ಪಡೆದಿವೆ. ಸಂಜೆ ವೇಳೆ ಮಕ್ಕಳೊಂದಿಗೆ ಕುಟುಂಬ ಸಮೇತ ಬಂದು ಬಿಸಿ ಬಿಸಿ ಕಬಾಬ್ ಸೇವನೆ ಮಾಡುವ ದೃಶ್ಯ ನಗರದಲ್ಲಿ ಸಾಮಾನ್ಯವಾಗ ಕಾಣಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.