ಐಟಿಸಿಯ ಫ್ಯಾಬೆಲ್ ಎಕ್ಸ್ಕ್ವಿಸಿಟ್ ಚಾಕೊಲೇಟ್ಸ್ನವರು ಹೊಸದಾಗಿ 6 ವಿಭಿನ್ನ ರುಚಿಕರವಾದ ಚಾಕೊಲೇಟ್ ಬಾರ್ಗಳನ್ನು ಪರಿಚಯಿಸುತ್ತಿದೆ. ವಿಶೇಷವಾಗಿ ಸ್ವಾತಂತ್ರ್ಯ ದಿನಾಚರಣೆಯ ನಿಮಿತ್ತ ಒಟ್ಟು 73 ಕೆ.ಜಿಚಾಕೊಲೇಟ್ಗಳನ್ನು ತಯಾರಿಸಿದ್ದಾರೆ.

ಆಗಸ್ಟ್ 15 ರಂದು ಅನಾವರಣಗೊಳ್ಳಲಿರುವ ಈ ಚಾಕೊಲೇಟ್ ಬಾರ್ಗಳು ಆಗಸ್ಟ್ 18ರವರೆಗೆ ಐಟಿಸಿ ಗಾರ್ಡೇನಿಯಾದ (ಹೋಟೆಲ್) ಚಾಕೊಲೇಟ್ ಬುಟಿಕ್ನಲ್ಲಿ ದೊರೆಯಲಿವೆ.

ಅಹ್ಲಾದಕರ ಸ್ವಾದ ಫ್ಯಾಬೆಲ್ ಚಾಕೊಲೇಟ್ಸ್ 6 ಪ್ರದೇಶಗಳ ಸ್ವಾದವನ್ನು ಜನರಿಗೆ ಚಾಕೊಲೇಟ್ ರೂಪದಲ್ಲಿ ಪರಿಚಯಿಸಲು, ಡಾರ್ಕ್ ಚಾಕೊಲೇಟ್ನಲ್ಲಿ ಉತ್ತರ ಹಿಮಾಲಯದ ನಸುಗೆಂಪು ಉಪ್ಪು ಮತ್ತು ಚಹಾವನ್ನು ಬಳಸಿದೆ. ಥಾರ್ ಮರಭೂಮಿಯ ರೂಬಿ ಮತ್ತು ಟೋಸ್ಟೆಡ್ ಬರ್, ಗಂಗಾನದಿ ಪ್ರದೇಶದ ಮಿಲ್ಕ್ ಚಾಕೊಲೇಟ್, ಮಧ್ಯ ಬಯಲು ಪ್ರದೇಶದ ಡಾರ್ಕ್ ಚಾಕೊಲೇಟ್, ದಕ್ಷಿಣ ಪ್ರದೇಶದ ವೈಟ್ ಚಾಕೊಲೇಟ್, ಕರಾವಳಿ ಪ್ರದೇಶದ ಮಿಲ್ಕ್ ಚಾಕೊಲೇಟ್ ಹೀಗೆ ಒಟ್ಟು 6 ಪ್ರದೇಶಗಳ ಪ್ರಾದೇಶಿಕ ಸ್ವಾದವನ್ನು ವಿಶೇಷವಾಗಿ ಸ್ವಾತಂತ್ರ್ಯ ದಿನಾಚರಣೆಯ ನಿಮಿತ್ತ ಜನರಿಗೆ ಪರಿಚಯಿಸಲಿದೆ. ಈ ಬಾರ್ಗಳ ಮಾರಾಟದಿಂದ ಬರುವ ಹಣವನ್ನು ಮೇಕ್–ಎ–ವಿಶ್ ಫೌಂಡೇಶನ್ ಆಫ್ ಇಂಡಿಯಾಕ್ಕೆ ನೀಡುತ್ತಿದೆ ಈ ಸಂಸ್ಥೆ.

ಈ ಪ್ರತಿ ಚಾಕ್ಲೇಟ್ ಬಾರ್ನ ಬೆಲೆ ₹265.

‘ಇದೊಂದು ಉತ್ತಮ ಅವಕಾಶ ಆದ್ದರಿಂದ ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಈ 6 ಹೊಸ ರುಚಿಯ ಚಾಕೊಲೇಟ್ಗಳನ್ನು ಜನರಮುಂದೆ ಇಡುತ್ತಿದ್ದೇವೆ. ಪ್ರತಿ ಸ್ವಾದದ 120 ಬಾರ್ಗಳನ್ನು ಸಿದ್ದಪಡಿಸಿದ್ದೇವೆ. ಈ ಚಾಕೊಲೇಟ್ ತಯಾರಿಕೆಗೆ ಒಟ್ಟು 10 ದಿನಗಳನ್ನು ತೆಗೆದುಕೊಳ್ಳಲಾಯಿತು. ಇವುಗಳನ್ನು ಮಾಡುವಾಗ ಖುಷಿಯ ಅನುಭವ ನನಗಾಯಿತು’ ಎಂದು ಶೆಫ್ ತನ್ವಿ ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.