ಕಾಮಕಸ್ತೂರಿ, ಬಲು ಆರೋಗ್ಯಕಾರಿ

7

ಕಾಮಕಸ್ತೂರಿ, ಬಲು ಆರೋಗ್ಯಕಾರಿ

Published:
Updated:

ಕಾಮಕಸ್ತೂರಿ ಬೀಜಗಳು ಆರೋಗ್ಯಕ್ಕೆ ತುಂಬಾ ಉಪಯುಕ್ತವಾಗಿದ್ದು ಇದನ್ನು ಅನೇಕ ವರ್ಷಗಳಿಂದ ಮನೆ ಮದ್ದಾಗಿ ಬಳಸಲಾಗುತ್ತದೆ. ಇದು ಹೆಚ್ಚಿನ ಪ್ರಮಾಣದಲ್ಲಿ ಪ್ರೋಟಿನ್, ನಾರಿನಾಂಶ ಮತ್ತು ಕಬ್ಬಿಣವನ್ನು ಹೊಂದಿದೆ.

ಕಾಮಕಸ್ತೂರಿ ಬೀಜಗಳಿಂದ ಹಲವಾರು ಪ್ರಯೋಜನಗಳನ್ನು ಪಡೆಯಬಹುದಾಗಿದೆ. ಇದನ್ನು ಆಯುರ್ವೇದ ಮತ್ತು ಪ್ರಾಚೀನ ಚೀನೀ ಔಷಧಿಗಳಲ್ಲಿ ಬಳಸಲಾಗುತ್ತದೆ.  ಸಬ್ಜಾ ಬೀಜಗಳು ಎಂದೂ ಕರೆಯಲಾಗುವ ಕಾಮಕಸ್ತೂರಿ ಬೀಜಗಳು ಜೀರ್ಣಕ್ರಿಯೆ, ತೂಕ ನಷ್ಟ, ಕೆಮ್ಮು ಮತ್ತು ಶೀತವನ್ನು ಗುಣಪಡಿಸಿ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

* ಉರಿಯೂತ ಕಡಿಮೆ: ಕಾಮಕಸ್ತೂರಿ ಬೀಜದ ಸೇವನೆ ಎಡಿಮಾ ಮತ್ತು ಉರಿಯೂತಕ್ಕೆ ಸಂಬಂಧಿಸಿರುವ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ.

* ನಿರೋಧಕ ಶಕ್ತಿ: ಕಾಮಕಸ್ತೂರಿ ಬೀಜಗಳಲ್ಲಿರುವ  ಔಷಧೀಯ ಅಂಶಗಳು ದೇಹದಲ್ಲಿನ ಅಶುದ್ಧತೆಯನ್ನು ಹೊರಹಾಕಿ ದೇಹವನ್ನು ರಕ್ಷಣೆ ಮಾಡುತ್ತದೆ. ಕಾಮಕಸ್ತೂರಿ ಬೀಜಗಳಲ್ಲಿ ಆ್ಯಂಟಿ ಆಕ್ಸಿಡೆಂಟ್‌ಗಳು ಸಮೃದ್ಧವಾಗಿವೆ. 

* ಜೀರ್ಣಕಾರಿ: ಕಾಮಕಸ್ತೂರಿ ಬೀಜಗಳಲ್ಲಿ ನಾರಿನ ಅಂಶವು ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಕಾಮಕಸ್ತೂರಿ ಬೀಜದ ಸೇವನೆಯಿಂದ ಮಲಬದ್ಧತೆ, ಭೇದಿ ಮತ್ತು ಭೇದಿಗೆ ನಿವಾರಿಸಲು ಸಹಾಯಕವಾಗಿವೆ. ಕಾಮ ಕಸ್ತೂರಿ ಬೀಜಗಳು, ಬಾಯಿ ಹುಣ್ಣಿಗೆ ಚಿಕಿತ್ಸೆ ನೀಡಲು ಪರಿಣಾಮಕಾರಿಯಾಗುತ್ತವೆ. 

* ಕೊಲೆಸ್ಟ್ರಾಲ್ ಮಟ್ಟ ನಿರ್ವಹಣೆ: ಹೃದಯ ರಕ್ತನಾಳದ ಆರೋಗ್ಯ ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟವನ್ನು ನಿರ್ವಹಿಸುವಲ್ಲಿ ಕಾಮಕಸ್ತೂರಿ ಬೀಜಗಳು ಸಹಾಯಕವಾಗಿವೆ. ಅಧಿಕ ರಕ್ತದೊತ್ತಡದ ಚಿಕಿತ್ಸೆಗಾಗಿ ಅವುಗಳನ್ನು ಆಯುರ್ವೇದದಲ್ಲಿ ಬಳಸಲಾಗುತ್ತದೆ. ಅಧಿಕ ಕೊಲೆಸ್ಟ್ರಾಲ್ ಮಟ್ಟ ಮತ್ತು ಅಧಿಕ ರಕ್ತದೊತ್ತಡವು ಹೃದಯದ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ಎರಡು ಸ್ಥಿತಿಗಳಾಗಿವೆ.

ಕಾಮಕಸ್ತೂರಿ ಬೀಜಗಳು ಹೆಚ್ಚಿನ ಲಿಪಿಡ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ದೇಹದ ಮೇಲೆ ಹೃದಯ-ರಕ್ಷಣೆ ಮಾಡುತ್ತದೆ.

* ಒತ್ತಡವನ್ನು ಕಡಿಮೆ: ಕಾಮಕಸ್ತೂರಿ ಬೀಜಗಳ ಸೇವನೆ ಮನಸ್ಸಿನ ಮೇಲೆ ಹಿತವಾದ ಮತ್ತು ಶಾಂತಗೊಳಿಸುವ ಪರಿಣಾಮ ಬೀರುತ್ತದೆ. ಮಾನಸಿಕ ಒತ್ತಡ ಮತ್ತು ಖಿನ್ನತೆಯಿಂದ ಬಳಲುವವರ ಚಿಕಿತ್ಸೆಗಾಗಿ ಕಾಮಕಸ್ತೂರಿ ಬೀಜಗಳನ್ನು ಬಳಸಲಾಗುತ್ತದೆ.

ಬರಹ ಇಷ್ಟವಾಯಿತೆ?

 • 49

  Happy
 • 3

  Amused
 • 1

  Sad
 • 0

  Frustrated
 • 1

  Angry

Comments:

0 comments

Write the first review for this !