ಮನೆ ಊಟಕ್ಕೂ ಆರ್ಡರ್‌ ಮಾಡಿ!

7

ಮನೆ ಊಟಕ್ಕೂ ಆರ್ಡರ್‌ ಮಾಡಿ!

Published:
Updated:
ಊಟಬಾಕ್ಸ್‌

‘ನಾಳೆ ಸಂಜೆ ನಮ್ಮನೆಗೆ ಸ್ನೇಹಿತರು ಬರುತ್ತಿದ್ದಾರೆ. ಅವರನ್ನು ಸ್ವಾಗತಿಸಬೇಕು. ವಿಶೇಷ ಅಡುಗೆ ಸಿದ್ಧಪಡಿಸಬೇಕು. ಅಷ್ಟು ಜನರಿಗೆ ಅಡುಗೆ ಮಾಡೋಕೆ ಕಷ್ಟ, ಹೋಟೆಲ್‌ನಿಂದ ತರಿಸೋಣ ಎಂದರೆ ಅವರೆಲ್ಲರಿಗೂ ಮನೆ ಊಟವೇ ಇಷ್ಟ. ಏನು ಮಾಡುವುದು ಎಂದು ತಿಳಿಯುತ್ತಿಲ್ಲ’. 

‘ನಾನು ಒಂದು ವಾರ ಊರಿಗೆ ಹೋಗುತ್ತಿದ್ದೇನೆ. ಮನೆಯಲ್ಲಿ ಅತ್ತೆ ಒಬ್ಬರೇ ಇರುತ್ತಾರೆ. ಅವರಿಗೆ ಆರೋಗ್ಯ ಸರಿಯಿಲ್ಲ. ಅವರಿಗೆ ಮನೆ ಊಟವೇ ಬೇಕು. ಏನು ಮಾಡುವುದೋ ಗೊತ್ತಾಗುತಿಲ್ಲ’

ನಗರದಲ್ಲಿ ಹೀಗೆ ಪೇಚಾಡುವವರ ಸಂಖ್ಯೆ ಕಡಿಮೆಯೇನಿಲ್ಲ. ಅಡುಗೆ ಮಾಡಲು ಕಷ್ಟ ಪಡುವವರು, ಮನೆ ಊಟದ ಭಾಗ್ಯ ನಮ್ಮದಲ್ಲ ಎಂದು ನಿರಾಸೆಯಲ್ಲಿರುವಂತವರು ನೆಮ್ಮದಿಯ ನಿಟ್ಟುಸಿರು ಬಿಡುವ ಕಾಲ ಬಂದಿದೆ. ನಿಮ್ಮಿಷ್ಟದ ಮನೆ ಊಟ, ಅಂದುಕೊಂಡ ಸಮಯಕ್ಕೆ ನಿಮ್ಮ ಮನೆ ಬಾಗಿಲಿಗೆ ಬರಲಿದೆ. ಮನೆ ಊಟದ ಬಯಕೆಯನ್ನು ಪೂರೈಸುವ ನಿಟ್ಟಿನಲ್ಲಿ ‘ಊಟ ಬಾಕ್ಸ್‌’ ನಗರಕ್ಕೆ ಲಗ್ಗೆ ಇಟ್ಟಿದೆ.

ಕೆಲಸದ ಒತ್ತಡ, ಸಮಯದ ಅಭಾವದಿಂದಾಗಿ ಪ್ರತಿದಿನ ಹೋಟೆಲ್‌ ಊಟಕ್ಕೆ ಅವಲಂಬಿತರಾಗಿರುವವರು ನಗರದಲ್ಲಿ ದಿನೇ ದಿನೇ ಹೆಚ್ಚುತ್ತಿದ್ದಾರೆ. ಇನ್ನು ನಗರದ ಒಂದು ಮೂಲೆಯಿಂದ ಮತ್ತೊಂದು ಮೂಲೆಗೆ ಉದ್ಯೋಗಕ್ಕಾಗಿ ಸಂಚರಿಸುವವರಿಗೆ ಅಡುಗೆ ಮಾಡಲು ಸಮಯವೇ ಇರುವುದಿಲ್ಲ. ಈ ಎಲ್ಲಾ ಕಾರಣಗಳಿಂದ ಹೋಟೆಲ್‌ ಊಟಕ್ಕೆ ಅಂಟಿಕೊಂಡಿರುವವರು ಎಲ್ಲೆಡೆ ಸಿಗುತ್ತಾರೆ.

ಹೀಗೆ ಮನೆಯಿಂದ ಹೊರಗೆ ಹೆಚ್ಚಿನ ಸಮಯ ಕಳೆಯುತ್ತಿದ್ದ ಯುವ ಉದ್ಯಮಿ ಶ್ರೀಕಾಂತ್‌ ಅವರ ಮನೆ ಊಟದ ಇಂಗಿತ ‘ಊಟದ ಬಾಕ್ಸ್‌’ ಎಂಬ ಕಂಪನಿ ರಚನೆಗೆ ನಾಂದಿಯಾಯಿತು. ಇದು ಮನೆ ಊಟವನ್ನು ಮನೆಗೆ ತಲುಪಿಸುತ್ತದೆ.

‘ಈ ಮೂರು ವರ್ಷಗಳ ಹಿಂದೆ ನನಗೆ ಆ್ಯಪ್‌ ಅಭಿವೃದ್ಧಿ ಪಡಿಸುವ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೆ. ನನ್ನನ್ನು ಒಳಗೊಂಡು 20 ಮಂದಿ ಸಹೋದ್ಯೋಗಿಗಳು ಹೋಟೆಲ್‌ ಊಟವನ್ನು ಅವಲಂಬಿಸಿದ್ದೆವು. ಪ್ರತಿ ದಿನ ಹೋಟೆಲ್‌ ಊಟ ಮಾಡುತ್ತಿದ್ದರಿಂದ ಮನೆ ಊಟ ಇದ್ದರೆ ಚೆನ್ನಾಗಿರುತ್ತಿತ್ತು ಎಂದು ಅನ್ನಿಸುತ್ತಿತ್ತು. ಇದಕ್ಕೆ ಪರಿಹಾರ ಕಂಡುಕೊಳ್ಳಲು ಆರಂಭಿಸಿದೆವು. ನಾನು ಕಂಪ್ಯೂಟರ್‌ ಸೈನ್ಸ್‌ನಲ್ಲಿ ಎಂಜಿನಿಯರಿಂಗ್‌ ಮುಗಿಸಿದ್ದೆ. ಆ್ಯಪ್‌ ರಚನೆ, ಅಭಿವೃದ್ಧಿಯ ಬಗ್ಗೆ ತಿಳಿದಿತ್ತು. ಹಾಗಾಗಿ ‘ಊಟಬಾಕ್ಸ್‌’ ಆ್ಯಪ್‌ ಅಭಿವೃದ್ಧಿಪಡಿಸಿದೆ’ ಎನ್ನುತ್ತಾರೆ ಸಂಸ್ಥಾಪಕ ಶ್ರೀಕಾಂತ್‌. 

‘ನಾವು ಅಡುಗೆ ತಯಾರಿಸುವುದಿಲ್ಲ. ಆಯಾ ಪ್ರದೇಶವಾರು ಊಟಕ್ಕೆ ಆರ್ಡರ್‌ ಮಾಡಿದವರಿಗೆ ಮೂರು ಕಿ.ಮೀ ವ್ಯಾಪ್ತಿಯಲ್ಲಿ ಮನೆಯಲ್ಲಿ ಅಡುಗೆ ಮಾಡಿಕೊಡುವವರಿಂದ ಊಟ ಪ್ಯಾಕ್‌ ಮಾಡಿಸಿ ಗ್ರಾಹಕರಿಗೆ ತಲುಪಿಸುವುದಷ್ಟೆ ನಮ್ಮ ಕೆಲಸ.’ ಎನ್ನುತ್ತಾರೆ ಅವರು.

2016ರಲ್ಲಿ ಆರಂಭವಾದ ಈ ಕಂಪನಿಯಲ್ಲಿ ಇಂದು 25 ಮಂದಿ ಕೆಲಸ ಮಾಡುತ್ತಿದ್ದಾರೆ.  ಆರ್ಡರ್‌ ವಿವರವನ್ನು ಅಡುಗೆ ಮಾಡುವವರಿಗೆ ತಿಳಿಸುವುದು, ಸಮಯಕ್ಕೆ ಸರಿಯಾಗಿ ಗ್ರಾಹಕರಿಗೆ ಊಟ ತಲುಪಿಸುವುದನ್ನು ಈ ಕಂಪನಿ ಮಾಡುತ್ತಿದೆ. 

ಎಲ್ಲೆಲ್ಲಿದೆ?: ಮುಂಬೈ, ಹೈದರಾಬಾದ್‌, ಪುಣೆ, ಚೆನ್ನೈ ಹಾಗೂ ದೆಹಲಿಯಲ್ಲಿ ಈಗಾಗಲೇ ಚಾಲ್ತಿಯಲ್ಲಿರುವ ‘ಊಟ ಬಾಕ್ಸ್‌’ ಬೆಂಗಳೂರಿನ 75 ಪ್ರದೇಶಗಳಲ್ಲಿ ಕಾರ್ಯನಿರತವಾಗಿದೆ. ಸಸ್ಯಹಾರಿ, ಮಾಂಸಹಾರಿ ಯಾವ ಊಟ ಬೇಕಾದರೂ ಆರ್ಡರ್‌ ಮಾಡಬಹುದು.


ಶ್ರೀಕಾಂತ್‌

ಸಾಮಾನ್ಯವಾಗಿ ಒಂದು ಊಟಕ್ಕೆ ₹ 60ರಿಂದ ಬೆಲೆ ಆರಂಭವಾಗುತ್ತದೆ. ₹ 500ಗಿನ ವಿಭಿನ್ನ ಖಾದ್ಯಗಳು ಲಭ್ಯವಿವೆ. ಊಟ ತಲುಪಿಸಲು ₹30 ಚಾರ್ಜ್‌ ಮಾಡಲಾಗುತ್ತದೆ. 

‘ಉತ್ತರ ಭಾರತದ ಅಡುಗೆಗಳಿಗೆ ಹೆಚ್ಚಿನ ಬೇಡಿಕೆ ಇದ್ದು, ಪ್ರತಿದಿನ 250–300 ಊಟದ ಆರ್ಡರ್‌ಗಳು ಬರುತ್ತವೆ. ನಾವೂ ಆ ಊಟವನ್ನೇ ಮಾಡುತ್ತೇವೆ’ ಎಂದು ಶ್ರೀಕಾಂತ್‌ ವಿವರಿಸುತ್ತಾರೆ.  ಕನಿಷ್ಟ ಒಂದು ವಾರದ ಮುಂಚಿತವಾಗಿ ಆರ್ಡರ್‌ ಮಾಡಿದರೆ ವಿಶೇಷ ಸಮಾರಂಭಗಳಿಗೂ ಅಡುಗೆ ಪೂರೈಸುತ್ತಾರೆ. ‌ ಶ್ರೀಕಾಂತ್‌ ಬಿಸಿಎ ಪದವೀಧರರು. ಲಂಡನ್‌ನಲ್ಲಿನ ಸ್ನೇಹಿತ ಕುಶಾಲ್‌ ಕುಮಾರ್‌ ಸಹಭಾಗಿತ್ವದಲ್ಲಿ ಈ ಆ್ಯಪ್‌ ಅಭಿವೃದ್ಧಿ ಪಡಿಸಿದ್ದಾರೆ. ವೆಬ್‌ಸೈಟ್‌ ಲಿಂಕ್‌: https://www.ootabox.com/

ಗೂಗಲ್‌ ಪ್ಲೇಸ್ಟೋರ್ ಆ್ಯಪ್‌ ಡೌನ್ಲೋಡ್‌ ಮಾಡಿಕೊಳ್ಳಲು ಇಲ್ಲಿ ‘ootabox’ ಕ್ಲಿಕ್ಕಿಸಿ.

ಬರಹ ಇಷ್ಟವಾಯಿತೆ?

 • 24

  Happy
 • 4

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !