ಬುಧವಾರ, ಆಗಸ್ಟ್ 4, 2021
28 °C

ಮೊಟ್ಟೆ ಕೆಟ್ಟಿದ್ದರೆ ಗುರುತಿಸುವುದು ಹೇಗೆ ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಳಿ ಮೊಟ್ಟೆಯಲ್ಲಿ ಅಧಿಕ ಪ್ರೋಟಿನ್,‌ ವಿಟಮಿನ್‌ಗಳಿವೆ. ಮೊಟ್ಟೆ ತಿಂದರೆ ಮಿದುಳಿನ ಬೆಳವಣಿಗೆ ಹಾಗೂ ಕಣ್ಣಿನ ಆರೋಗ್ಯಕ್ಕೂ ಒಳ್ಳೆಯದು. ಕೂದಲು ಹಾಗೂ ಚರ್ಮದ ಆರೈಕೆಯಲ್ಲೂ ಅದಕ್ಕೆ ಪ್ರಮುಖ ಸ್ಥಾನ ಇದೆ. 

ಅಡುಗೆ ಮನೆಯ ಪ್ರಯೋಗಪ್ರಿಯರಿಗೆ ಮೊಟ್ಟೆಯೂ ಬಲು ಪ್ರಿಯ. ಆದರೆ ಮೊಟ್ಟೆಯನ್ನು ಬಳಸುವ ಮುನ್ನ ಅದು ತಾಜಾವೇ, ಹಳೆಯದಾಗಿದೆಯೇ ಎಂದು ಪರೀಕ್ಷಿಸುವುದು ಹೇಗೆ?

ಮೊಟ್ಟೆಯನ್ನು ಪರೀಕ್ಷಿಸುವ ವಿಧಾನಗಳ ಬಗ್ಗೆ ಬೆಂಗಳೂರಿನ ಶೆಫ್‌ ವಾಸಿಂ ಅಹಮದ್‌ ಒಂದಷ್ಟು ಮಾಹಿತಿ ನೀಡಿದ್ದಾರೆ. ಅಷ್ಟೇ ಅಲ್ಲ, ಮೊಟ್ಟೆಗಳನ್ನು ಹೇಗೆ ರಕ್ಷಿಸಿಡುವ ವಿಧಾನಗಳ ಬಗ್ಗೆಯೂ ಇಲ್ಲಿ ತಿಳಿಸಿದ್ದಾರೆ.

ವಿಧಾನಗಳು ಹೀಗಿವೆ
* ನಿತ್ಯ ಮೊಟ್ಟೆ ಬಳಸುವವರಿಗೆ ಮೊಟ್ಟೆ ಭಾರ ಎಷ್ಟಿರುತ್ತದೆ ಎಂದು ಖಂಡಿತಾ ಗೊತ್ತಾಗುತ್ತದೆ. ಮೊಟ್ಟೆ ಕೈಯಲ್ಲಿ ಹಿಡಿದಾಗ ತೂಕವಾಗಿದ್ದರೆ ಅದು ತಾಜಾ, ಲೈಟ್‌ವೇಟ್‌ ಅನಿಸಿದರೆ ಅದು ಹಳೆಯದಾಗಿದೆ ಎಂದರ್ಥ.
* ಇದನ್ನು ಇನ್ನೊಂದು ರೀತಿಯಿಂದಲೂ ಪರೀಕ್ಷಿಸಬಹುದು. ಒಂದು ಬೌಲ್‌ನಲ್ಲಿ ನೀರು ತೆಗೆದುಕೊಂಡು ಅದರಲ್ಲಿ ಮೊಟ್ಟೆಗಳನ್ನು ಹಾಕಿ ಸ್ವಲ್ಪ ಕಾಲ ಬಿಡಬೇಕು. ಆಗ ತಾಜ ಮೊಟ್ಟೆಗಳು ನೀರಿನಲ್ಲಿ ಭಾರಕ್ಕೆ ಮುಳುಗುತ್ತವೆ. ಕೆಟ್ಟು ಹೋಗಿದ್ದರೆ ಅವು ಮೇಲಕ್ಕೆ ಬರುತ್ತವೆ. ಮೊಟ್ಟೆ ಬೆಂದಿದೆಯೇ ಎಂದು ತಿಳಿಯಲು ಸಹಾ ಇದೇ ವಿಧಾನವನ್ನು ಅನುಕರಿಸಬಹುದು. ಮೊಟ್ಟೆ ಸರಿಯಾಗಿ ಬೆಂದಿಲ್ಲದಿದ್ದರೆ ಮೊಟ್ಟೆ ಅರ್ಧ ಭಾಗ ನೀರಿನಿಂದ ಮೇಲೆ ಬರುತ್ತದೆ.
* ಆಮ್ಲೆಟ್‌ ಮಾಡುವಾಗ ಮೊದಲು ಮೊಟ್ಟೆಯನ್ನು ಒಡೆದು, ಚೆನ್ನಾಗಿ ಮಿಶ್ರ ಮಾಡಿಕೊಂಡು, ನಂತರ ನೀರು ಸೇರಿಸಿದರೆ ಆಮ್ಲೆಟ್‌ ಗರಿಗರಿಯಾಗಿ ಬರುತ್ತದೆ.
* ಮೊಟ್ಟೆ ಬೇಯಿಸುವಾಗ ಅದರ ಸಿಪ್ಪೆ ಬಿರುಕು ಬಿಡುವಷ್ಟು ಬೇಯಿಸಬಾರದು. ಹಾಗೇ ಮಾಡಿದರೆ ಅದರ ಪೋಷಕಾಂಶಗಳು ನಾಶವಾಗುತ್ತವೆ.
* ಬೇಯಿಸಿದ ಮೊಟ್ಟೆಯನ್ನು ತುಂಡು ಮಾಡುವಾಗ ಒದ್ದೆಯಾಗಿರುವ ಚಾಕನ್ನು ಬಳಸಿದರೆ ಪುಡಿಯಾಗುವುದಿಲ್ಲ.
* ಫ್ರಿಡ್ಜ್‌ನಿಂದ ತೆಗೆದ ಕೂಡಲೇ ಮೊಟ್ಟೆಯನ್ನು ಬಳಸಬಾರದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು