ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಗ್ಯ ವೃದ್ಧಿಗೆ ಕುಂಬಳಕಾಯಿ ಬೀಜ

Last Updated 8 ಅಕ್ಟೋಬರ್ 2021, 19:30 IST
ಅಕ್ಷರ ಗಾತ್ರ

ತರಕಾರಿ ಅಂದ್ರೆ ಮೂಗು ಮುರಿಯೋರೆ ಹೆಚ್ಚು. ಇನ್ನು ಕೆಲವು ತರಕಾರಿ ಬೀಜಗಳನ್ನಂತೂ ಬಿಸಾಡೋದು ಮಾಮೂಲಿ. ಆದರೆ, ಹೆಚ್ಚಿನ ತರಕಾರಿ ಬೀಜಗಳಲ್ಲಿ ದೇಹಕ್ಕೆ ಬೇಕಾದ ಪೌಷ್ಟಿಕಾಂಶಗಳು ಇರುತ್ತವೆ; ಒಮ್ಮೊಮ್ಮೆ ತರಕಾರಿಗಿಂತ ಅದರ ಬೀಜದಲ್ಲೇ ಹೆಚ್ಚು ಆರೋಗ್ಯಕರ ಅಂಶಗಳು ಇರುತ್ತವೆ. ಅಂಥ ತರಕಾರಿಯಲ್ಲೊಂದು ಕುಂಬಳಕಾಯಿ.

ಕುಂಬಳಕಾಯಿ ಬೀಜದಲ್ಲಿ ಬಹಳಷ್ಟು ಒಳ್ಳೆಯ ಅಂಶಗಳಿವೆ. ಈ ಬೀಜ ಒಂದು ತರಹ ಪೌಷ್ಟಿಕಾಂಶದ ಪವರ್‌ಹೌಸ್‌ ಇದ್ದ ಹಾಗೆ. ಉತ್ತಮ ಕೊಬ್ಬು, ನಾರು, ಪ್ರೊಟೀನ್‌, ಕಬ್ಬಿಣ, ಮ್ಯಾಂಗನೀಸ್, ಜಿಂಕ್‌ ಸೇರಿದಂತೆ ಅನೇಕ ಪೋಷಕಾಂಶಗಳು ಕುಂಬಳಕಾಯಿ ಬೀಜದಲ್ಲಿ ಇವೆ. ಆದ್ದರಿಂದ ಇದರಿಂದ ಮಾಡಿದ ತಿಂಡಿಗಳು, ಆಹಾರ ಪದಾರ್ಥಗಳು ರುಚಿಕರವೂ ಹೌದು, ಆರೋಗ್ಯಪೂರ್ಣವೂ ಹೌದು.

ಉಪಯೋಗಿಸುವ ಕ್ರಮ

ಕುಂಬಳಕಾಯಿ ಬೀಜವನ್ನು ಕುಂಬಳಕಾಯಿಯಿಂದ ಬೇರ್ಪಡಿಸಲು ಒಂದು ಕ್ರಮ ಇದೆ. ಬೀಜಗಳನ್ನು ಒಣಗಿಸಿ ಇಟ್ಟುಕೊಂಡರೆ ಅದರ ಉಪಯೋಗ ಸುಲಭ. ಬೀಜಗಳು ಒಳಗೆ ಪಲ್ಪ್‌ನೊಂದಿಗೆ ಬೆಸೆದುಕೊಂಡಿರುತ್ತವೆ. ನಾರುಗಳ ಮಧ್ಯೆ ಬೀಜ ಇರುತ್ತದೆ. ಇವುಗಳಿಂದ ಬೀಜಗಳನ್ನು ಬೇರ್ಪಡಿಸಬೇಕು. ಪಲ್ಪ್‌ನೊಂದಿಗೆ ಬೆಸೆದುಕೊಂಡ ಬೀಜಗಳಿಗೆ ಕಾಲು ಚಮಚ ಉಪ್ಪು ಬೆರೆಸಿದರೆ, ಎರಡೂ ಬೇರ್ಪಡುತ್ತವೆ. ಹೀಗೆ ಸಿಕ್ಕ ಬೀಜಗಳನ್ನು ಚೆನ್ನಾಗಿ ತೊಳೆದು, ಬಿಸಿಲಿನಲ್ಲಿ ಒಣಗಿಸಿ ಇಟ್ಟುಕೊಂಡರೆ ಸುಲಭ.

ಬೀಜಗಳನ್ನು ಹುರಿದು, ಕೆಲವು ಗಂಟೆಗಳ ಕಾಲ ನೆನೆಸಿಟ್ಟು ಅಥವಾ ಮೊಳಕೆ ಬರಿಸಿ ಪದಾರ್ಥಗಳನ್ನು ತಯಾರು ಮಾಡಬಹುದು.

ಕುಂಬಳಕಾಯಿ ಬೀಜವನ್ನು ರೋಸ್ಟ್‌ ಮಾಡುವುದು; ವಿವಿಧ ತರಕಾರಿ, ಹಣ್ಣು ಬಳಸಿ ಮಾಡುವ ಸಲಾಡ್‌ಗೆ ಹುರಿದ ಮಾಡಿದ ಬೀಜಗಳನ್ನು ಸೇರಿಸಬಹುದು. ತಿನ್ನುವಾಗ ಮಧ್ಯೆ ಮಧ್ಯೆ ಬಾಯಿಗೆ ಹುರಿದ ಈ ಕುಂಬಳಕಾಯಿ ಬೀಜಗಳು ಬಂದರೆ ತುಂಬಾ ಚೆನ್ನಾಗಿರುತ್ತದೆ.

ಹುರಿದ ಕುಂಬಳಕಾಯಿ ಬೀಜಗಳನ್ನು ಬೇರೆ ಬೇರೆ ಆಹಾರ ಪದಾರ್ಥಗಳ ಮೇಲೆ ಗ್ರಾರ್ನಿಷ್‌ ಮಾಡಲು ಬಳಸಬಹುದು. ಉದಾಹರಣೆಗೆ– ಪಾಸ್ತಾ, ರಿಸೊಟ್ಟೊ, ಟಾಕೊಸ್‌, ಮೀನು ಅಥವಾ ಮಾಂಸದ ಭಕ್ಷ್ಯಗಳ ಮೇಲೆ ಬೀಜಗಳನ್ನು ಗ್ರಾರ್ನಿಷ್‌ ಮಾಡಬಹುದಾಗಿದೆ.

ಕುಕೀಸ್‌ ಅಥವಾ ಬ್ರೆಡ್‌ ಮಾಡುವ ಆಲೋಚನೆ ಇದ್ದರೆ, ಕುಂಬಳಕಾಯಿ ಬೀಜಗಳು ಅದರ ರುಚಿಯನ್ನು ಹೆಚ್ಚಿಸುತ್ತವೆ. ಕುಕೀಸ್‌ ಮಾಡುವ ಮಿಶ್ರಣಕ್ಕೆ ಬೀಜಗಳನ್ನು ಹಾಕಬಹುದು, ಕುಕೀಸ್‌ ಅನ್ನು ಮೈಕ್ರೊವೇವ್‌ ಮಾಡುವ ಮೊದಲು ಬೀಜಗಳನ್ನು ಅದರ ಮೇಲೆ ಉದುರಿಸಬಹುದು. ಕುಕೀಸ್‌ ಅಥವಾ ಬ್ರೆಡ್‌ ಮಾಡುವಾಗ ಬೀಜಗಳನ್ನು ಮೊದಲೇ ರೋಸ್ಟ್‌ ಮಾಡಿಕೊಳ್ಳುವುದು ಬೇಡ. ಹೇಗಿದ್ದರೂ ಮೈಕ್ರೊವೇವ್‌ ಮಾಡಿಕೊಳ್ಳುವುದರಿಂದ ಸಾದಾ ಬೀಜಗಳನ್ನು ಬಳಸಿದರೆ ಸಾಕಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT