ಸೋಮವಾರ, ಡಿಸೆಂಬರ್ 6, 2021
23 °C

ರೆಸಿಪಿ: ಜಾಲಿ ಆಲೂ ಸಮೋಸ, ಕಚೋರಿ

ಅನುಪಮ ಸುನೀಲ್ ಕುಮಾರ್ Updated:

ಅಕ್ಷರ ಗಾತ್ರ : | |

Prajavani

ಜಾಲಿ ಆಲೂ ಸಮೋಸ

ಬೇಕಾಗುವ ಸಾಮಗ್ರಿಗಳು: ಮೈದಾಹಿಟ್ಟು – 2 ಕಪ್, ಉಪ್ಪು– 1 ಟೀ ಚಮಚ, ಅಜ್ವಾನಾ – 1/2 ಚಮಚ, ಎಣ್ಣೆ – ಕಾಲು ಕಪ್‌, ಆಲೂಗೆಡ್ಡೆ – 2 (ಬೇಯಿಸಿ ತುರಿದುಕೊಂಡಿದ್ದು), ಖಾರದ ಪುಡಿ– ಒಂದೂವರೆ ಚಮಚ, ಕೊತ್ತಂಬರಿ ಸೊಪ್ಪು, ಗರಂಮಸಾಲೆ – ಕಾಲು ಚಮಚ, ಉಪ್ಪು– ರುಚಿಗೆ, ಕರಿಬೇವು– ಸ್ವಲ್ಪ, ಚಾಟ್ ಮಸಾಲೆ –1/2 ಚಮಚ, ಈರುಳ್ಳಿ – 1, ಅರಿಸಿನ ಪುಡಿ – 1/4 ಚಮಚ, ಅಕ್ಕಿಹಿಟ್ಟು – 1/4 ಕಪ್, ಎಣ್ಣೆ.

ತಯಾರಿಸುವ ವಿಧಾನ: ಒಂದು ಪಾತ್ರೆಯಲ್ಲಿ ಮೈದಾಹಿಟ್ಟು, ಉಪ್ಪು, ಅಜ್ವಾನಾ, ಎಣ್ಣೆ, ನೀರು ಹಾಕಿ ಚೆನ್ನಾಗಿ ಕಲೆಸಿಕೊಳ್ಳಿ. ಇದನ್ನು 15 ನಿಮಿಷಗಳ ಕಾಲ ನೆನೆಸಿಡಿ. ಇನ್ನೊಂದು ಪಾತ್ರೆಯಲ್ಲಿ ಆಲೂಗೆಡ್ಡೆ, ಖಾರದ ಪುಡಿ, ಕೊತ್ತಂಬರಿ ಸೊಪ್ಪು, ಗರಂಮಸಾಲೆ, ಉಪ್ಪು, ಕರಿಬೇವು, ಚಾಟ್ ಮಸಾಲೆ, ಈರುಳ್ಳಿ, ಅರಿಸಿನ ಪುಡಿ, ಅಕ್ಕಿಹಿಟ್ಟು ಹಾಕಿ ಚೆನ್ನಾಗಿ ಕಲೆಸಿಕೊಳ್ಳಿ. ಚಿಕ್ಕ ಚಿಕ್ಕ ಉಂಡೆಗಳನ್ನು ಮಾಡಿ ಇಟ್ಟುಕೊಳ್ಳಿ. ಒಂದು ಬೌಲ್‌ನಲ್ಲಿ ಮೈದಾಹಿಟ್ಟು, ನೀರು ಸೇರಿಸಿ ಪೇಸ್ಟ್ ತಯಾರಿಸಿಕೊಳ್ಳಿ. ನೆನೆಸಿಟ್ಟ ಹಿಟ್ಟಿನಿಂದ ಸ್ವಲ್ಪ ತೆಗೆದುಕೊಂಡು ಅದನ್ನು ಲಟ್ಟಿಸಿ 4 ಭಾಗಗಳಾಗಿ ಮಾಡಿಕೊಳ್ಳಿ. ನಂತರ ಮೈದಾಹಿಟ್ಟಿನ ಪೇಸ್ಟ್ ಅನ್ನು ಹಚ್ಚಿ ತುದಿಯನ್ನು ಮಡಿಚಿ. ಮಧ್ಯದಲ್ಲಿ ಆಲೂಗೆಡ್ಡೆ ಉಂಡೆಗಳನ್ನು ಇಟ್ಟು ಮಡಿಚಿ. ಪಾತ್ರೆಯಲ್ಲಿ ಎಣ್ಣೆ ಕಾಯಲು ಇಟ್ಟು ಬಿಸಿಯಾದ ಮೇಲೆ ಸಮೋಸಗಳನ್ನು ಕರಿಯಿರಿ. ಇದನ್ನು ಹುಣಸೆಚಟ್ನಿ ಅಥವಾ ಖಾರದ ಚಟ್ನಿ ಜೊತೆ ತಿನ್ನಲು ಚೆನ್ನಾಗಿರುತ್ತದೆ.

ಎಲೆಕೋಸಿನ ಮಂಚೂರಿ
ಬೇಕಾಗುವ ಸಾಮಗ್ರಿಗಳು:
ಕ್ಯಾಪ್ಸಿಕಂ – 1 (ಹೆಚ್ಚಿದ್ದು), ಮೈದಾಹಿಟ್ಟು – 4 ಚಮಚ, ಕಾರ್ನ್‌ಫ್ಲೋರ್‌ – 4 ಚಮಚ, ಕೊತ್ತಂಬರಿ ಸೊಪ್ಪು – ಸ್ವಲ್ಪ, ಗರಂಮಸಾಲೆ – 1 ಟೀ ಚಮಚ, ಖಾರದಪುಡಿ – 1 ಚಮಚ, ಶುಂಠಿ–ಬೆಳ್ಳುಳ್ಳಿ ಪೇಸ್ಟ್‌ – 1 ಚಮಚ, ಅಡುಗೆಸೋಡಾ– ಚಿಟಿಕೆ, ಟೊಮೆಟೊ ಕೆಚಪ್‌ – 4 ಚಮಚ, ವಿನೆಗರ್‌ – 1 ಚಮಚ, ಸೋಯಾ ಸಾಸ್ – 1 ಚಮಚ, ಈರುಳ್ಳಿ – 1 (ಹೆಚ್ಚಿದ್ದು), ಉಪ್ಪು – ರುಚಿಗೆ, ಕ್ಯಾಬೆಜ್– 3 ಕಪ್‌

ತಯಾರಿಸುವ ವಿಧಾನ: ಕ್ಯಾಬೆಜ್‌ ಅನ್ನು ಹೆಚ್ಚಿಕೊಂಡು ಚೆನ್ನಾಗಿ ತೊಳೆದು ಉಪ್ಪು ನೀರಿನಲ್ಲಿ 30 ನಿಮಿಷ ನೆನೆಸಿಡಿ. ಅದನ್ನು ಸೋಸಿಕೊಂಡು ಪಾತ್ರೆಯೊಂದಕ್ಕೆ ಹಾಕಿ ಅದಕ್ಕೆ ಅಡುಗೆಸೋಡಾ, ಖಾರದಪುಡಿ, ಗರಂಮಸಾಲೆ, ಶುಂಠಿ–ಬೆಳ್ಳುಳ್ಳಿ ಪೇಸ್ಟ್‌, ಮೈದಾಹಿಟ್ಟು, ಜೋಳದ ಹಿಟ್ಟು ಪುಡ್‌ ಕಲರ್‌ ಚಿಟಿಕೆ ಸೇರಿಸಿ ಎಲ್ಲವನ್ನೂ ಚೆನ್ನಾಗಿ ಕಲೆಸಿ. ಸ್ವಲ್ಪ ನೀರು ಸೇರಿಸಿಕೊಂಡು ಚಪಾತಿಹಿಟ್ಟಿನ ಹದಕ್ಕೆ ಕಲೆಸಿ. ಅದರಿಂದ ಚಿಕ್ಕ ಚಿಕ್ಕ ಉಂಡೆ ಮಾಡಿಕೊಂಡು ಎಣ್ಣೆಯಲ್ಲಿ ಕರಿಯಿರಿ. ಈಗ ಬೇರೊಂದು ಪಾತ್ರೆಗೆ ಸ್ವಲ್ಪ ಎಣ್ಣೆ ಹಾಕಿ ಬಿಸಿಯಾದ ಮೇಲೆ ಈರುಳ್ಳಿ ಹಾಕಿ ಹುರಿಯಿರಿ. ಅದಕ್ಕೆ ಶುಂಠಿ ಬೆಳ್ಳುಳ್ಳಿ ಪೇಸ್ಟ್‌, ಕ್ಯಾಪ್ಸಿಕಂ ಹಾಗೂ ಚಿಟಿಕೆ ಉಪ್ಪು ಸೇರಿಸಿ ಹುರಿದುಕೊಳ್ಳಿ. ಟೊಮೆಟೊ ಕೆಚಪ್‌ ಸೇರಿಸಿ ಮಿಶ್ರಣ ಮಾಡಿ, ನಂತರ ಖಾರದಪುಡಿ ಸೇರಿಸಿ ಚೆನ್ನಾಗಿ ಕಲೆಸಿ. ಅದಕ್ಕೆ ಸೋಯಾ ಸಾಸ್‌, ವಿನೆಗರ್‌, ನೀರಿನಲ್ಲಿ ಕಲೆಸಿದ ಕಾರ್ನ್‌ಫ್ಲೋರ್‌ ಸೇರಿಸಿ ಎಲ್ಲವನ್ನು ಚೆನ್ನಾಗಿ ಮಿಶ್ರಣ ಮಾಡಿ. ಇದು ಸ್ವಲ್ಪ ದಪ್ಪಗಾದ ಮೇಲೆ ಕರಿದುಕೊಂಡ ಎಲೆಕೋಸಿನ ಉಂಡೆಯನ್ನು ಸೇರಿಸಿ. ಅದರ ಮೇಲೆ ಕೊತ್ತಂಬರಿ ಸೊಪ್ಪು ಉದುರಿಸಿ. 

ಕಚೋರಿ
ಬೇಕಾಗುವ ಸಾಮಗ್ರಿಗಳು:
ಮೈದಾಹಿಟ್ಟು – 2 ಕಪ್‌, ಉಪ್ಪು– ಚಿಟಿಕೆ, ಅಜ್ವಾನ – ಅರ್ಧ ಚಮಚ, ಎಣ್ಣೆ – ಕಾಲು ಕಪ್‌, ‌ಕೊತ್ತಂಬರಿ – 1 ಚಮಚ, ಜೀರಿಗೆ – 1 ಚಮಚ, ಸೋಂಪು – 1 ಚಮಚ, ಎಣ್ಣೆ – 3 ಚಮಚ, ಈರುಳ್ಳಿ – 3 ದೊಡ್ಡದು (ಹೆಚ್ಚಿಕೊಂಡಿದ್ದು), ಹಸಿಮೆಣಸು – 2, ಕಡಲೆಹಿಟ್ಟು – 2 ಚಮಚ, ಖಾರದ ಪುಡಿ – 1 ಚಮಚ, ಗರಂಮಸಾಲೆ – ಅರ್ಧ ಚಮಚ, ಕಾಳುಮೆಣಸಿನ ಪುಡಿ – ಅರ್ಧ ಚಮಚ, ಅರಿಸಿನ ಪುಡಿ – ಚಿಟಿಕೆ, ಆಲೂಗೆಡ್ಡೆ – 3 ಬೇಯಿಸಿದ್ದು, ಕೊತ್ತಂಬರಿ ಸೊಪ್ಪು – 1 ಚಮಚ (ಕತ್ತರಿಸಿದ್ದು), ಸಕ್ಕರೆ– 1 ಚಮಚ.

ತಯಾರಿಸುವ ವಿಧಾನ: ಮೈದಾಹಿಟ್ಟಿಗೆ ಉಪ್ಪು, ಅಜ್ವಾನ ಹಾಗೂ 1 ಚಮಚ ಎಣ್ಣೆ ಹಾಕಿ ಚೆನ್ನಾಗಿ ಕಲೆಸಿ. ಅದಕ್ಕೆ ಸ್ವಲ್ಪ ಸ್ವಲ್ಪ ನೀರು ಸೇರಿಸಿ ಚಪಾತಿ ಹಟ್ಟಿನ ಹದಕ್ಕೆ ಕಲೆಸಿಕೊಂಡು 20 ನಿಮಿಷಗಳ ಕಾಲ ನೆನೆಸಿಡಿ. ಕೊತ್ತಂಬರಿ, ಜೀರಿಗೆ ಹಾಗೂ ಸೋಂಪನ್ನು ಹುಡಿ ಮಾಡಿಕೊಳ್ಳಿ. ಪಾತ್ರೆಯೊಂದಕ್ಕೆ 3 ಚಮಚ ಎಣ್ಣೆ ಹಾಕಿ. ಅದಕ್ಕೆ ಹೆಚ್ಚಿದ ಈರುಳ್ಳಿ, ಹಸಿಮೆಣಸು ಸೇರಿಸಿ ಹುರಿದುಕೊಳ್ಳಿ. ಇದಕ್ಕೆ ಪುಡಿ ಮಾಡಿಕೊಂಡ ಮಿಶ್ರಣ, ಶುಂಠಿ–ಬೆಳ್ಳುಳ್ಳಿ ಪೇಸ್ಟ್‌, ಕಡಲೆಹಿಟ್ಟು ಸೇರಿಸಿ ಚೆನ್ನಾಗಿ ಕಲೆಸಿ. ತಳ ಹಿಡಿಯದಂತೆ ನೋಡಿಕೊಳ್ಳಿ. ಅದಕ್ಕೆ ಖಾರದಪುಡಿ, ಗರಂಮಸಾಲೆ, ಕಾಳುಮೆಣಸಿನ ಪುಡಿ, ಅರಿಸಿನ ಪುಡಿ, ಅಮ್ಚೂರ್ ಪುಡಿ, ಇಂಗು ಸೇರಿಸಿ ಎಲ್ಲವನ್ನೂ ಮಿಶ್ರಣ ಮಾಡಿ. ಅದಕ್ಕೆ ಪುಡಿ ಮಾಡಿದ ಆಲೂಗೆಡ್ಡೆ ಕೊತ್ತಂಬರಿ ಸೊಪ್ಪು ಸೇರಿಸಿ ಮಿಶ್ರಣ ಮಾಡಿ. ಕೊನೆಯಲ್ಲಿ ಸಕ್ಕರೆ ಸೇರಿಸಿ ಕಲೆಸಿ. ಇದನ್ನು ಉಂಡೆ ಮಾಡಿಕೊಳ್ಳಿ. ಮೈದಾಹಿಟ್ಟಿನ ಮಿಶ್ರಣವನ್ನು ಉಂಡೆ ಮಾಡಿಕೊಂಡು ಅಂಗೈ ಅಗಲಕ್ಕೆ ತಟ್ಟಿಕೊಳ್ಳಿ. ಅದರೊಳಗೆ ಆಲೂಗೆಡ್ಡೆ ಉಂಡೆಯನ್ನು ಇರಿಸಿ ಲಟ್ಟಿಸಿಕೊಳ್ಳಿ. ಇದನ್ನು ಎಣ್ಣೆಯಲ್ಲಿ ಕರಿಯಿರಿ. ಕಚೋರಿಯನ್ನು ಸಿಹಿ ಚಟ್ನಿ, ಪಾನಿ ಜೊತೆ ತಿನ್ನಲು ಕೊಡಿ.

(ಲೇಖಕಿ: ಅನು ಸ್ವಯಂ ಕಲಿಕೆ ಯೂಟ್ಯೂಬ್‌ ಚಾನೆಲ್‌ ನಿರ್ವಾಹಕಿ)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು