ಬಿಲ್ವಪತ್ರೆ

ಬೇಕಾಗುವ ಸಾಮಗ್ರಿಗಳು; ಎಳೆಯದಾಗಿರುವ ಬಿಲ್ವ ಪತ್ರೆ ಆರು ಎಸಳು, ಬೋಳ್ಕಾಳು ಎಂಟು, ಜೀರಿಗೆ ಅರ್ಧ ಚಮಚ, ತೆಂಗಿನಕಾಯಿ ತುರಿ ಅರ್ಧ ಕಪ್, ರುಚಿಗೆ ಉಪ್ಪು, ಕಡೆದ ಮಜ್ಜಿಗೆ ಕಾಲು ಕಪ್. ಒಗ್ಗರಣೆಗೆ ಎಣ್ಣೆ ಒಂದು ಚಮಚ, ಜೀರಿಗೆ ಅರ್ಧ ಚಮಚ.
ಮಾಡುವ ವಿಧಾನ; ಜೀರಿಗೆ ಮತ್ತು ಬೋಳ್ಕಾಳು ಎರಡನ್ನು ಸ್ವಲ್ಪ ಎಣ್ಣೆ ಹಾಕಿ ಕಮ್ಮಗೆ ಹುರಿದುಕೊಳ್ಳಿ. ಪತ್ರೆ ತುಂಬ ಎಳೆಯತಾಗಿದ್ದರೆ ಹುರಿಯುವುದು ಬೇಡ, ಸ್ವಲ್ಪ ಬೆಳೆದ ಎಲೆಗಳಾದರೆ ಒಮ್ಮೆ ಹುರಿದುಕೊಂಡು, ತೆಂಗಿನ ಕಾಯಿತುರಿ ಜೊತೆ ಉಳಿದ ಸಾಮಗ್ರಿಗಳನ್ನು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ನಂತರ ಇದಕ್ಕೆ ಎರಡು ಕಪ್ ಆಗುವಷ್ಟು ನೀರು ಬೆರೆಸಿ, ಕಡೆದ ಮಜ್ಜಿಗೆ, ಉಪ್ಪು ಹಾಕಿರಿ. ನಂತರ ಜೀರಿಗೆಯ ಒಗ್ಗರಣೆ ಹಾಕಿದರೆ ಬಿಲ್ವ ಪತ್ರೆ ತಂಬುಳಿ ರೆಡಿ.

ಕರಿಬೇವು

ಬೇಕಾಗುವ ಸಾಮಗ್ರಿಗಳು: ಎಳೆಯದಾಗಿರುವ ಕರಿಬೇವಿನ ಸೊಪ್ಪು ನಾಲ್ಕು ಎಸಳು, ಉದ್ದಿನ ಬೇಳೆ ಅರ್ಧ ಚಮಚ, ಸಣ್ಣ ಮೆಣಸು ಎರಡು, ಬಿಳಿ ಎಳ್ಳು ಕಾಲು ಚಮಚ, ತೆಂಗಿನ ಕಾಯಿ ತುರಿ ಅರ್ಧ ಕಪ್, ಲಿಂಬೆ ಹುಳಿ ಒಂದು ಚಮಚ, ರುಚಿಗೆ ಉಪ್ಪು, ಒಗ್ಗರಣೆಗೆ ಎಣ್ಣೆ ಒಂದು ಚಮಚ, ಸಾಸಿವೆ ಕಾಳು ಅರ್ಧ ಚಮಚ.
ಮಾಡುವ ವಿಧಾನ: ಮೊದಲು ಉದ್ದಿನಬೇಳೆಯನ್ನು ಸ್ವಲ್ಪ ಎಣ್ಣೆ ಹಾಕಿ ಹೊಂಬಣ್ಣ ಬರುವವರೆಗೆ ಹುರಿದು, ಇದಕ್ಕೆ ಮೆಣಸು,ಎಳ್ಳು, ಕರಿಬೇವಿನ ಸೊಪ್ಪು ಸೇರಿಸಿ ಮತ್ತೊಮ್ಮೆ ಸಣ್ಣ ಉರಿಯಲ್ಲಿ ಹುರಿದುಕೊಳ್ಳಿ. ನಂತರ ತೆಂಗಿನಕಾಯಿ ತುರಿ ಸೇರಿಸಿ ನುಣ್ಣಗೆ ರುಬ್ಬಿಕೊಂಡು, ಬೇಕಷ್ಟೆ ನೀರು ಹಾಕಿ, ಲಿಂಬೆ ಹುಳಿ, ಉಪ್ಪು ಬೆರೆಸಿ ಹದ ಮಾಡಿಕೊಳ್ಳಿ. ಆಮೇಲೆ ಸಾಸಿವೆ ಕಾಳಿನ ಒಗ್ಗರಣೆ ಕೊಟ್ಟರೆ ರುಚಿಯಾದ ಕರಿಬೇವಿನ ಸೊಪ್ಪಿನ ತಂಬುಳಿ ಸಿದ್ಧ.

ಚಕ್ರಮನಿ

ಬೇಕಾಗುವ ಸಾಮಗ್ರಿಗಳು: ಚಕ್ರಮನಿ ಸೊಪ್ಪು ಐದರಿಂದ ಆರು ಎಸಳು(ಇದಕ್ಕೆ ಬೀಪಿ ಸೊಪ್ಪು ಎಂತಲೂ ಹೇಳುತ್ತಾರೆ) ಅರ್ಧ ಚಮಚ ಜೀರಿಗೆ, ಎಂಟು ಬೋಳ್ಕಾಳು, ಕಾಲು ಚಮಚ ಬಿಳಿ ಎಳ್ಳು, ತೆಂಗಿನಕಾಯಿ ತುರಿ ಅರ್ಧ ಕಪ್, ರುಚಿಗೆ ಉಪ್ಪು, ಕಡೆದ ಮಜ್ಜಿಗೆ ಕಾಲು ಕಪ್, ಒಗ್ಗರಣೆಗೆ ಎಣ್ಣೆ ಒಂದು ಚಮಚ, ಜೀರಿಗೆ, ಸಾಸಿವೆ ಕಾಳು ತಲಾ ಕಾಲು ಚಮಚ.
ಮಾಡುವ ವಿಧಾನ: ಸೊಪ್ಪನ್ನು ಸ್ವಚ್ಛಗೊಳಿಸಿ ಎಸಳಿನಿಂದ ಎಲೆಗಳನ್ನು ಮಾತ್ರ ತೆಗೆದು,ಜೀರಿಗೆ, ಬೋಳ್ಕಾಳು, ಎಳ್ಳು, ಸೇರಿಸಿ ಸ್ವಲ್ಪ ಎಣ್ಣೆ ಹಾಕಿ ಸೊಪ್ಪು ಬಾಡುವವರೆಗೆ ಹುರಿದುಕೊಳ್ಳಿ. ನಂತರ ಕಾಯಿ ಹಾಕಿ ನುಣ್ಣಗೆ ರುಬ್ಬಿಕೊಂಡು ಬೇಕಷ್ಟೆ ನೀರು ಹಾಕಿ, ಉಪ್ಪು,ಕಡೆದ ಮಜ್ಜಿಗೆ ಬೆರೆಸಿಕೊಂಡು ಹದ ಮಾಡಿಕೊಳ್ಳಿ. ಆಮೇಲೆ ಜೀರಿಗೆ, ಸಾಸಿವೆಕಾಳಿನ ಒಗ್ಗರಣೆ ಕೊಡಿರಿ.

ಒಂದೆಲಗ

ಬೇಕಾಗುವ ಸಾಮಗ್ರಿಗಳು; ಬೇರು ಸಹಿತ ಇರುವ ಒಂದೆಲಗ ಒಂದು ಮುಷ್ಟಿ, ಜೀರಿಗೆ ಅರ್ಧ ಚಮಚ, ಬೋಳ್ಕಾಳು ಎಂಟು, ತೆಂಗಿನಕಾಯಿ ತುರಿ ಅರ್ಧ ಕಪ್, ಬೆಲ್ಲ ಎರಡು ದೊಡ್ಡ ಚಮಚ, ರುಚಿಗೆ ಉಪ್ಪು, ಕಡೆದ ಮಜ್ಜಿಗೆ ಕಾಲು ಕಪ್, ಒಗ್ಗರಣೆಗೆ ಎಣ್ಣೆ ಒಂದು ಚಮಚ, ಜೀರಿಗೆ ಅರ್ಧ ಚಮಚ.
ಮಾಡುವ ವಿಧಾನ; ಮೊದಲು ಒಂದೆಲಗವನ್ನು ಸ್ವಚ್ಛಗೊಳಿಸಿ ಚಿಕ್ಕದಾಗಿ ಕೊಚ್ಚಿಕೊಂಡು ಸ್ವಲ್ಪವೆ ನೀರು ಸೇರಿಸಿ ಮಿಕ್ಸಿಗೆ ಹಾಕಿ ರುಬ್ಬಿಕೊಂಡು ಇದರ ರಸವನ್ನು ಸೋಯಿಸಿ ತೆಗೆದಿಟ್ಟುಕೊಳ್ಳಿ. ನಂತರ ಜೀರಿಗೆ, ಬೋಳ್ಕಾಳನ್ನು ಎಣ್ಣೆ ಹಾಕಿ ಕಮ್ಮಗೆ ಹುರಿದು, ತೆಂಗಿನಕಾಯಿ ತುರಿ ಸೇರಿಸಿ, ಸೋಸಿಕೊಂಡ ಒಂದೆಲಗದ ನೀರಿನಲ್ಲಿ ನುಣ್ಣಗೆ ರುಬ್ಬಿರಿ. ಇದಕ್ಕೆ ಬೇಕಷ್ಟೆ ನೀರು ಹಾಕಿ ಉಪ್ಪು, ಬೆಲ್ಲ ಬೆರೆಸಿಕೊಳ್ಳಿ. (ಬೆಲ್ಲ ಬೇಡವೆಂದರೆ ಹಾಕದೆ ಇದ್ದರೂ ನಡೆಯುತ್ತದೆ) ಆಮೇಲೆ ಕಡೆದ ಮಜ್ಜಿಗೆ ಹಾಕಿ ಜೀರಿಗೆಯ ಒಗ್ಗರಣೆ ಕೊಟ್ಟರೆ ತಂಪಾದ ತಂಬುಳಿ ಸಿದ್ಧ.

ಮಜ್ಜಿಗೆ ಹುಲ್ಲು (ಲೆಮನ್ ಗ್ರಾಸ್)

ಬೇಕಾಗುವ ಸಾಮಗ್ರಿಗಳು: ಚಿಕ್ಕದಾಗಿ ಕಟ್ ಮಾಡಿಕೊಂಡ ಮಜ್ಜಿಗೆಹುಲ್ಲು ಒಂದು ಕಪ್, ತೆಂಗಿನ ಕಾಯಿ ತುರಿ ಮುಕ್ಕಾಲು ಕಪ್,ರುಚಿಗೆ ಉಪ್ಪು,ಒಗ್ಗರಣೆಗೆ ಎಣ್ಣೆ ಒಂದು ಚಮಚ, ಸಾಸಿವೆ ಕಾಳು ಅರ್ಧ ಚಮಚ, ಖಾರ ಬೇಕೆನಿಸಿದರೆ ಒಂದು ಸಣ್ಣ ಮೆಣಸು, ಲಿಂಬೆ ಹುಳಿ ಒಂದು ಚಮಚ.
ಮಾಡುವ ವಿಧಾನ: ಮೊದಲು ಮಜ್ಜಿಗೆಹುಲ್ಲನ್ನು ಸ್ವಲ್ಪವೆ ನೀರು ಸೇರಿಸಿ ಮಿಕ್ಸಿಗೆ ಹಾಕಿ ರುಬ್ಬಿಕೊಂಡು, ಅದರ ರಸವನ್ನು ಸೋಯಿಸಿ ಇಟ್ಟುಕೊಳ್ಳಿ. ನಂತರ ಸೋಸಿಕೊಂಡ ನೀರಿನಲ್ಲಿ ತೆಂಗಿನ ಕಾಯಿ(ಬೇಕಿದ್ದರೆ ಸಣ್ಣ ಮೆಣಸು) ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ನಂತರ ಇದಕ್ಕೆ ಎರಡು ಕಪ್ ಆಗುವಷ್ಟು ನೀರು ಹಾಕಿ, ಉಪ್ಪು,ಲಿಂಬೆ ಹುಳಿ ಬೆರೆಸಿ, ಸಾಸಿವೆಕಾಳಿನ ಒಗ್ಗರಣೆ ಕೊಡಿ. ಕಡಿಮೆ ಸಾಮಗ್ರಿಯಲ್ಲಿ ಸುಲಭವಾಗಿ ಲೆಮನ್ ಗ್ರಾಸ್ ನ ತಂಬುಳಿ ರೆಡಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.