ಹಬ್ಬದ ಸಡಗರದಲ್ಲಿ ಈ ಸಿಹಿ ಉಂಡೆಗಳನ್ನು ಮಾಡಿರಿ, ತಿನ್ನಿರಿ

7

ಹಬ್ಬದ ಸಡಗರದಲ್ಲಿ ಈ ಸಿಹಿ ಉಂಡೆಗಳನ್ನು ಮಾಡಿರಿ, ತಿನ್ನಿರಿ

Published:
Updated:

ಡ್ರೈ ಫ್ರೂಟ್ಸ್ ಉಂಡೆ

ಬೇಕಾಗುವ ಸಾಮಗ್ರಿಗಳು: ಖರ್ಜೂರದ ತುಂಡುಗಳು – 2ಕಪ್, ಬಾದಾಮಿ ತುಂಡುಗಳು – 1/2ಕಪ್‌,  ಗೋಡಂಬಿ ತುಂಡುಗಳು – 1/2ಕಪ್, ಒಣದ್ರಾಕ್ಷಿ – 1/4ಕಪ್, ಅಂಜೂರದ ತುಂಡುಗಳು – 1/2ಕಪ್,  ಒಣಕೊಬ್ಬರಿ ತುರಿ – 1ಕಪ್, ಸಕ್ಕರೆಪುಡಿ – 1ಕಪ್, ಹುರಿಗಡಲೆ ಪುಡಿ – 1ಕಪ್, ತುಪ್ಪ – 1ಕಪ್, ಏಲಕ್ಕಿ ಪುಡಿ – 1ಚಮಚ

ತಯಾರಿಸುವ ವಿಧಾನ: ಖರ್ಜೂರ, ಬಾದಾಮಿ, ಗೋಡಂಬಿ, ದ್ರಾಕ್ಷಿ, ಅಂಜೂರಗಳನ್ನು ಬೇರೆಬೇರೆಯಾಗಿ ಸ್ವಲ್ಪ ತುಪ್ಪದಲ್ಲಿ ಹುರಿದು, ಒಣಕೊಬ್ಬರಿ, ಹುರಿಗಡಲೆ ಪುಡಿ, ಏಲಕ್ಕಿ ಪುಡಿ ಸೇರಿಸಿ ಚೆನ್ನಾಗಿ ಕಲಕಿ.
ಬಾಣಲೆಯಲ್ಲಿ ತುಪ್ಪ ಕಾಯಿಸಿ, ಸಕ್ಕರೆ ಕರಗಿಸಿ. ಸಕ್ಕರೆ ಕರಗಿದ ನಂತರ, ಈ ಎಲ್ಲಾ ಸಾಮಗ್ರಿಗಳನ್ನು ಸೇರಿಸಿ, ಕೈಯಾಡಿ, ಒಲೆಯಿಂದ ಕೆಳಗಿರಿಸಿ. ತಣಿದ ನಂತರ ಬೇಕಾದ ಗಾತ್ರದಲ್ಲಿ ಉಂಡೆ ಕಟ್ಟಿ. ಮಕ್ಕಳಿಗೂ ಇಷ್ಟವಾಗುವ ರುಚಿಕರವಾದ, ಪುಷ್ಟಿದಾಯಕವಾದ ಡ್ರೈ ಫ್ರೂಟ್ಸ್‌ ಉಂಡೆ ತಯಾರು.
**
 

ಅಕ್ಕಿ-ಹೆಸರುಬೇಳೆ ಉಂಡೆ
ಬೇಕಾಗುವ ಸಾಮಗ್ರಿಗಳು:
ಅಕ್ಕಿ – 3ಕಪ್, ಹೆಸರುಬೇಳೆ – 2ಕಪ್, ತರಿತರಿಯಾಗಿ ಪುಡಿ ಮಾಡಿದ ಹುರಿಗಡಲೆ – 1/2ಕಪ್, ಕಡಲೆಕಾಯಿ ಬೀಜದ ಪುಡಿ – 1/2ಕಪ್‌, ಬೆಲ್ಲದ ತುರಿ – 3ಕಪ್, ಕೊಬ್ಬರಿ ತುರಿ – 2ಕಪ್, ಏಲಕ್ಕಿಪುಡಿ –1ಚಮಚ, ತುಪ್ಪ – 1ಕಪ್, ತುಪ್ಪದಲ್ಲಿ ಹುರಿದ ಗೋಡಂಬಿ – 7-8, ಬಾದಾಮಿ – 5-6


ಅಕ್ಕಿ-ಹೆಸರುಬೇಳೆ ಉಂಡೆ

ತಯಾರಿಸುವ ವಿಧಾನ: ಅಕ್ಕಿ, ಹೆಸರುಬೇಳೆಗಳನ್ನು ತುಪ್ಪದಲ್ಲಿ ಹುರಿದು ಪುಡಿ ಮಾಡಿ, ಮಿಕ್ಸ್ ಮಾಡಿ. ಗೋಡಂಬಿ, ಬಾದಾಮಿಗಳನ್ನು ಸೇರಿಸಿ ಪುಡಿ ಮಾಡಿಡಿ. ಬಾಣಲೆಯಲ್ಲಿ ತುಪ್ಪ ಕಾಯಲಿರಿಸಿ, ಬೆಲ್ಲ ಕರಗಿಸಿ.
ಬೆಲ್ಲ ಕರಗಿದ ನಂತರ, ಹೆಸರಿಟ್ಟಿನ ಮಿಶ್ರಣ, ಕೊಬ್ಬರಿತುರಿ, ಪುಡಿ ಮಾಡಿರಿಸಿದ ಗೋಡಂಬಿ-ಬಾದಾಮಿಗಳ ಮಿಶ್ರಣ ಹಾಗೂ ಏಲಕ್ಕಿಗಳನ್ನು ಸೇರಿಸಿ ಮಗುಚಿ ಒಲೆಯಿಂದ ಕೆಳಗಿರಿಸಿ. ತಣಿದ ನಂತರ ಬೇಕಾದ ಗಾತ್ರದಲ್ಲಿ ಉಂಡೆ ಕಟ್ಟಿ. ಸ್ವಾದಿಷ್ಟವಾದ ಅಕ್ಕಿ-ಹೆಸರುಬೇಳೆ ಉಂಡೆ ಸವಿಯಲು ರೆಡಿ.
**

ರವೆ-ಬೇಸನ್ ಉಂಡೆ 
ಬೇಕಾಗುವ ಸಾಮಗ್ರಿ:
ಕಡಲೆಹಿಟ್ಟು – 2ಕಪ್, ತುಪ್ಪ –2ಕಪ್, ಚಿರೋಟಿ ರವೆ –1ಕಪ್, ಸಕ್ಕರೆ – 2ಕಪ್, ಏಲಕ್ಕಿ ಪುಡಿ – 1ಚಮಚ, ಲವಂಗದ ಪುಡಿ – 1ಚಮಚ, ಜಾಕಾಯಿ ಪುಡಿ – 1/4ಚಮಚ,  ಗೋಡಂಬಿ ತುಂಡುಗಳು – 8-10,  ದ್ರಾಕ್ಷಿ – 8-10


ರವೆ-ಬೇಸನ್ ಉಂಡೆ

ತಯಾರಿಸುವ ವಿಧಾನ: ಲವಂಗದ ಪುಡಿ, ದ್ರಾಕ್ಷಿ, ಗೋಡಂಬಿಗಳನ್ನು ಸ್ವಲ್ಪ ತುಪ್ಪದಲ್ಲಿ ಹುರಿದು ಬದಿಗಿಡಿ. ದಪ್ಪ ತಳವಿರುವ ಬಾಣಲೆಯಲ್ಲಿ ತುಪ್ಪವನ್ನು ಕರಗಿಸಿ, ಕಡಲೆಹಿಟ್ಟು ಹಾಗೂ ಚಿರೋಟಿ ರವೆಗಳನ್ನು ಕಂದುಬಣ್ಣ ಬರುವವರೆಗೆ ಬೇರೆಬೇರೆಯಾಗಿ ಹುರಿದು ಸೇರಿಸಿ. ಸಕ್ಕರೆಗೆ ಕಾಲು ಕಪ್ ನೀರು ಸೇರಿಸಿ ಎಳೆ ಪಾಕ ತಯಾರಿಸಿ. (ಒಂದು ಹನಿ ಪಾಕವನ್ನು ನೀರಿನ ಪಾತ್ರೆಗೆ ಹಾಕಿದರೆ ಅದು ಕರಗದೆ, ಗಟ್ಟಿಯಾಗಿ ಮಣಿಯಂತಿರಬೇಕು). ಸಕ್ಕರೆ ಪಾಕಕ್ಕೆ, ಎಲ್ಲಾ ಸಾಮಗ್ರಿಗಳನ್ನು ಸೇರಿಸಿ, ಕಲಕಿ, ಒಲೆಯಿಂದ ಕೆಳಗಿರಿಸಿ. ತಣಿದ ಮೇಲೆ ಸ್ವಲ್ಪ ಮಿಶ್ರಣದಿಂದ, ಕೈಗೆ ತುಪ್ಪ ಸವರಿಕೊಂಡು ಬೇಕಾದ ಗಾತ್ರದಲ್ಲಿ ಉಂಡೆ ಕಟ್ಟಿದರೆ ರವೆ-ಬೇಸನ್ ಉಂಡೆ ರೆಡಿ.
**

ಅವಲಕ್ಕಿ ಉಂಡೆ
ಬೇಕಾಗುವ ಸಾಮಗ್ರಿಗಳು
: ಮೀಡಿಯಮ್ ಅವಲಕ್ಕಿ – 2ಕಪ್, ತುರಿದ ಬೆಲ್ಲ – 3/4ಕಪ್, ಹುರಿದ ಒಣಕೊಬ್ಬರಿ ತುರಿ – 1/2ಕಪ್, ತುಪ್ಪ – 4ಚಮಚ, ಖರ್ಜೂರದ ತುಂಡುಗಳು – 7-8, ತುಪ್ಪದಲ್ಲಿ ಹುರಿದ ದ್ರಾಕ್ಷಿ – 7-8, ತುಪ್ಪದಲ್ಲಿ ಹುರಿದ ಗೋಡಂಬಿ – 7-8, ಏಲಕ್ಕಿ ಪುಡಿ – 1/2 ಚಮಚ, ಜಾಕಾಯಿ ಪುಡಿ – 1/4 ಚಮಚ
 


ಅವಲಕ್ಕಿ ಉಂಡೆ

ತಯಾರಿಸುವ ವಿಧಾನ: ಅವಲಕ್ಕಿಯನ್ನು ತರಿತರಿಯಾಗಿ ಪುಡಿ ಮಾಡಿರಿಸಿ. ಬಾಣಲೆಯಲ್ಲಿ, ತುಪ್ಪವನ್ನು ಕಾಯಲಿರಿಸಿ, ಬೆಲ್ಲವನ್ನು ಕರಗಿಸಿ. ಬೆಲ್ಲ ಕರಗಿದ ನಂತರ, ಪುಡಿ ಮಾಡಿದ ಅವಲಕ್ಕಿ, ಒಣಕೊಬ್ಬರಿ ತುರಿ, ಹುರಿದ ದ್ರಾಕ್ಷಿ-ಗೋಡಂಬಿ, ಖರ್ಜೂರದ ತುಂಡುಗಳು, ಏಲಕ್ಕಿಪುಡಿ, ಜಾಕಾಯಿಪುಡಿಗಳನ್ನು ಸೇರಿಸಿ ಚೆನ್ನಾಗಿ ಕಲಕಿ, ಒಲೆಯಿಂದ ಕೆಳಗಿರಿಸಿ. ಬೇಕಾದ ಗಾತ್ರದ ಉಂಡೆಗಳನ್ನು ಕಟ್ಟಿದರೆ, ಸವಿಯಾದ ಅವಲಕ್ಕಿ ಉಂಡೆ ತಯಾರು.

ಬರಹ ಇಷ್ಟವಾಯಿತೆ?

 • 5

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !