ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಲೂಬೆರಿಯಲ್ಲೂ ಮಾಡಬಹುದು ಪಾಯಸ

Last Updated 8 ಸೆಪ್ಟೆಂಬರ್ 2020, 19:30 IST
ಅಕ್ಷರ ಗಾತ್ರ

ಬ್ಲೂಬೆರ‍್ರಿ ರಬ್ಡಿ ಪಾಯಸ

ಬ್ಲೂಬೆರ್ರಿ ಹಣ್ಣಿನಿಂದ ಜ್ಯೂಸ್‌, ಐಸ್‌ಕ್ರೀಮ್‌, ಕೇಕ್‌, ಜಾಮ್‌ ಮಾಡುವುದನ್ನು ನೋಡಿರುತ್ತೇವೆ ತಿಂದಿರುತ್ತೇವೆ. ಆರೋಗ್ಯಕ್ಕೆ ಉತ್ತಮವಾಗಿರುವ ಬ್ಲೂಬೆರ‍್ರಿ ಹಣ್ಣಿನಿಂದ ಪಾಯಸವನ್ನು ತಯಾರಿಸಬಹುದು. ಬ್ಲೂಬೆರ್ರಿ ರಬ್ಬಿ ಪಾಯಸ ತಯಾರಿಸುವ ವಿಧಾನವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ ಶೆಫ್ ಪಿಳ್ಳೈ.

ಬೇಕಾಗುವ ಸಾಮಗ್ರಿಗಳು

ಬ್ಲೂಬೆರ‍್ರಿ ಹಣ್ಣು – 400 ಗ್ರಾಂ, ತುಪ್ಪ – 30 ಗ್ರಾಂ, ಸಕ್ಕರೆ – 30ಗ್ರಾಂ

ತಯಾರಿಸುವ ವಿಧಾನ: ಪಾನ್‌ವೊಂದರಲ್ಲಿ ಬ್ಲೂಬೆರ‍್ರಿ, ತುಪ್ಪ ಹಾಗೂ ಸಕ್ಕರೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಪ್ಯೂರಿ ತಯಾರಿಸಿಕೊಂಡು ಕೆಳಗಿಸಿ ತಣ್ಣಗಾಗಲು ಬಿಡಿ.

ರಬ್ಡಿಗೆ ಬೇಕಾಗುವ ಸಾಮಗ್ರಿಗಳು: ಹಾಲು – 1ಲೀಟರ್‌, ಬ್ರೌನ್ ಸಕ್ಕರೆ – 30ಗ್ರಾಂ, ಬೆಲ್ಲ – 30 ಗ್ರಾಂ

ತಯಾರಿಸುವ ವಿಧಾನ: ಒಂದು ದೊಡ್ಡ ಕಡಾಯಿಯಲ್ಲಿ ಹಾಲು ಹಾಕಿ ಮಧ್ಯಮ ಉರಿಯಲ್ಲಿ ಕಾಯಿಸಿ. ಹಾಲು ಕಾದು ಅರ್ಧ ಲೀಟರ್‌ಗೆ ಕಡಿಮೆಯಾಗುವಷ್ಟು ಕಾಯಿಸಿ. ನಂತರ ನಿಧಾನ ಉರಿಯಲ್ಲಿರಿಸಿ ಹಾಲಿನ ಕೆನೆಯನ್ನು ಒಂದು ಕಡೆಗೆ ಸರಿಸಿ. ನಂತರ ತಣ್ಣಗಾಗಲು ಬಿಡಿ. ಇನ್ನೊಂದು ಪಾತ್ರೆಗೆ ಸಕ್ಕರೆ ಹಾಗೂ ಬೆಲ್ಲದ ಪಾಕ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಮೊದಲಿನ ಪಾತ್ರೆಗೆ ಹಾಕಿ ಮಿಶ್ರಣ ಮಾಡಿ. ಒಂದು ಬೌಲ್‌ಗೆ ಬ್ಲೂಬೆರ‍್ರಿ ಪ್ಯೂರಿ ಹಾಗೂ ರಬ್ಡಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಫಿಜ್‌ನಲ್ಲಿಡಿ. ತಣ್ಣಗಿರುವಾಗಲೇ ತಿನ್ನಲು ಕೊಡಿ.

****

ಟ್ರಫಲ್‌ ಬಾಲ್ಸ್

ಚಾಕೊಲೇಟ್ ಅಂದರೆ ಯಾರಿಗೆ ಇಷ್ಟ ಹೇಳಿ. ಮನೆಯಲ್ಲಿ ವಿವಿಧ ಬಗೆಯ ಚಾಕೊಲೇಟ್‌ನಿಂದ ಟ್ರಫಲ್ ಬಾಲ್ ತಯಾರಿಸಿ ಸವಿಯಬಹುದು. ಈ ಲಾಕ್‌ಡೌನ್ ಅವಧಿಯಲ್ಲಿ ಮಕ್ಕಳಿಗೂ ಇದು ಹೆಚ್ಚು ಇಷ್ಟವಾಗಬಹುದು. ಬಾಯಿಗೆ ಹಾಯ್ ಎನ್ನಿಸುವ ಟ್ರಫಲ್ ಬಾಲ್ಸ್ ತಯಾರಿಸುವ ವಿಧಾನವನ್ನು ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ ಮೇಘನಾ.

ಬೇಕಾಗುವ ಸಾಮಗ್ರಿಗಳು: ಕ್ರೀಮ್ ಚೀಸ್ – 100 ಗ್ರಾಂ, ವೈಟ್ ಚಾಕೊಲೇಟ್ – 100 ಗ್ರಾಂ (ಕರಗಿಸಿದ್ದು)
ಪಿಸ್ತಾ, ನಿಂಬೆರಸ – 2–3 ಹನಿ, ಡಾರ್ಕ್ ಚಾಕೊಲೇಟ್ – 200 ಗ್ರಾಂ

ತಯಾರಿಸುವ ವಿಧಾನ: ಒಂದು ಬೌಲ್‌ನಲ್ಲಿ ಕ್ರೀಮ್ ಚೀಸ್ ಹಾಕಿ ಚೆನ್ನಾಗಿ ಕಲೆಸಿ. ಮೊದಲೇ ಕರಗಿಸಿಕೊಂಡ ವೈಟ್ ಚಾಕೊಲೇಟ್‌ ಅನ್ನು ಕ್ರೀಮ್ ಚೀಸ್ ಜೊತೆ ಸೇರಿಸಿ ಮಿಶ್ರಣ ಮಾಡಿ. ಅದಕ್ಕೆ ಹೆಚ್ಚಿಕೊಂಡ ಪಿಸ್ತಾ ಸೇರಿಸಿ. 2ರಿಂದ 3 ಹನಿ ನಿಂಬೆರಸ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಪ್ಲಾಸ್ಟಿಕ್ ಹಾಳೆ ಇರಿಸಿರುವ ತಟ್ಟೆ ತೆಗೆದುಕೊಳ್ಳಿ. ಚಮಚದ ಸಹಾಯದಿಂದ ಚಾಕೊಲೇಟ್ ಬಾಲ್ ತಯಾರಿಸಿ ತಟ್ಟೆಯ ಮೇಲೆ ಇಡಿ. ಅದನ್ನು 15ರಿಂದ 20 ನಿಮಷಗಳ ಕಾಲ ಫ್ರಿಜ್‌ನಲ್ಲಿಡಿ. ನಂತರ ಚಾಕೊಲೇಟ್‌ ಅನ್ನು ಹೊರಳಿಸಿ ಸರಿಯಾದ ಉಂಡೆ ಆಕಾರ ನೀಡಿ. ಮತ್ತೆ ಫ್ರಿಜ್‌ನಲ್ಲಿಡಿ. ಈಗ ಡಾರ್ಕ್ ಚಾಕೊಲೇಟ್‌ ಅನ್ನು ಬಿಸಿ ಮಾಡಿ ಕರಗಿಸಿಕೊಳ್ಳಿ. ಈಗ ಫ್ರಿಜ್‌ನಲ್ಲಿ ಇರಿಸಿದ ಚಾಕೊಲೇಟ್ ಬಾಲ್ ತೆಗೆದು ಬಿಸಿ ಡಾರ್ಕ್ ಚಾಕೊಲೇಟ್‌ನಲ್ಲಿ ಅದ್ದಿ. ನಂತರ ಪಿಸ್ತಾ ಹಾಗೂ ವೈಟ್ ಚಾಕೊಲೇಟ್‌ನಿಂದ ಅಲಂಕರಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT