ಶುಕ್ರವಾರ, ಏಪ್ರಿಲ್ 3, 2020
19 °C

ಸ್ವೀಟ್ಸ್‌ಗೊಂದಿಷ್ಟು ಟಿಪ್ಸ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದೀಪಾವಳಿ ಕೇವಲ ಬೆಳಕಿನ ಹಬ್ಬ ಮಾತ್ರವಲ್ಲ, ಸಿಹಿ ಮತ್ತು ಖಾರದ ಖಾದ್ಯಗಳ ಸವಿಯದ್ದು ಕೂಡ. ಅದು ಹಬ್ಬಗಳ ಅತ್ಯಂತ ಪ್ರಮುಖ ಭಾಗ. ಸಿಹಿ ಎಂದಾಗ ಆರೋಗ್ಯದ ಮಾತು ಬಂದೇ ಬಿಡುತ್ತದೆ. ಆರೋಗ್ಯ ಮತ್ತು ರುಚಿಯ ನಡುವಿನ ಅಂತರ ಕಡಿಮೆ ಮಾಡುವುದು ಹೇಗೆ? ರುಚಿಯಲ್ಲಿ ರಾಜಿ ಮಾಡಿಕೊಳ್ಳದೇ ಆರೋಗ್ಯ ಮತ್ತು ಡಯಟ್ ಅನ್ನು ಹೇಗೆ ಅನುಸರಿಸಬೇಕೆಂಬುದರ ಬಗ್ಗೆ ಶೆಫ್ ರಣವೀರ್ ಬ್ರಾರ್ ಇಲ್ಲಿ ಕೆಲವು ಟಿಪ್ಸ್ ನೀಡಿದ್ದಾರೆ.

ತುಪ್ಪ

‘ಮಾ ಕಾ ಸುನೆಹರಾ ಪ್ಯಾರ್’ ಅಂದರೆ ಮಾತೃವಾತ್ಸಲ್ಯದ ಹೆಚ್ಚುವರಿ ಡೋಸ್ ನೀಡುತ್ತದೆ. ಇದು ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ ಮತ್ತು ಆರೋಗ್ಯಕರವಾದ ಜೀರ್ಣ ವ್ಯವಸ್ಥೆಗೆ ನೆರವಾಗುತ್ತದೆ. ಶುದ್ಧ ತುಪ್ಪವು ಆಹಾರ ಪದಾರ್ಥಗಳನ್ನು ರುಚಿಕಟ್ಟಾಗಿ ಮಾಡುವುದಷ್ಟೇ ಅಲ್ಲ, ಹಾರ್ಟ್‌ಬರ್ನ್‌ ಕಡಿಮೆ ಮಾಡುತ್ತದೆ. ಗ್ಯಾಸ್ಟ್ರಿಕ್‍ನಂತಹ ಸಮಸ್ಯೆಗಳ ನಿವಾರಣೆಗೆ ಸಹಕಾರಿಯಾಗುತ್ತದೆ. ಈ ಹಿನ್ನೆಲೆಯಲ್ಲಿ ನನ್ನ ನೆಚ್ಚಿನ ತುಪ್ಪವೆಂದರೆ ಗೋವರ್ಧನ್ ತುಪ್ಪ. ಏಕೆಂದರೆ, ಈ ತುಪ್ಪ ಶುದ್ಧ ಹಸುವಿನ ಹಾಲಿನಿಂದ ತಯಾರಿಸಿದ್ದಾಗಿದೆ. ಇದು ಅತ್ಯಂತ ರುಚಿ ಮತ್ತು ಘಮಘಮ.

ಸ್ವಲ್ಪ ಪ್ರೋಟಿನ್‌ ಸೇರಿಸಿ

ಈ ಹಬ್ಬದ ವಿಶೇಷವೆಂದರೆ ಸಿಹಿ ಮತ್ತು ಮಿಠಾಯಿಗಳ ಪ್ರಮುಖ ಆಕರ್ಷಣೆ. ಇವುಗಳಿಗೆ ಸಕ್ಕರೆ ಬದಲು ಸ್ವಲ್ಪ ಮಟ್ಟಿಗೆ ಪ್ರೊಟೀನ್ ಪೌಡರ್ ಸೇರಿಸುವ ಮೂಲಕ ರುಚಿ ಹೆಚ್ಚಿಸಿಕೊಳ್ಳಿ. ಅವತಾರ್ ಶುದ್ಧ ಹಸುವಿನ ಹಾಲಿನಿಂದ ತಯಾರಿಸಿದ್ದಾಗಿದೆ. ಇದನ್ನು ರಬ್ಡಿ, ಬಾಸುಂಡಿ, ಫಿರ್ನಿ ಮತ್ತು ಇತರೆ ಹಾಲು ಆಧಾರಿತ ಸೆಮಿ-ಸಾಲಿಡ್ ಲಿಕ್ವಿಡ್ ಸಿಹಿ ಖಾದ್ಯಗಳನ್ನು ತಯಾರಿಸಲು ಬಳಸಲಾಗುತ್ತದೆ. ಇಂತಹ ಪದಾರ್ಥಗಳನ್ನು ತಿನ್ನುವಾಗ ಮತ್ತು ಇತರರಿಗೆ ಬಡಿಸುವಾಗ ತಪ್ಪಿತಸ್ಥ ಭಾವನೆ ಬರದಂತಿರಬೇಕು.

ಕ್ವಿಕ್ ಸ್ನ್ಯಾಕ್ಸ್

ಮನೆಗೆ ಅನಿರೀಕ್ಷಿತ ಅತಿಥಿಗಳು ಬಂದಾಗ, ಯಾವುದನ್ನೂ ಹೇಳದೆ ಅವರಿಗೆ ಸ್ನ್ಯಾಕ್ಸ್ ನೀಡುವ ಮೂಲಕ ಆತಿಥ್ಯ ನೀಡಬೇಕು. ಇದಕ್ಕಾಗಿ ಕೆಲವು ಕ್ವಿಕ್ ಡಿಶಸ್ ತಯಾರು ಮಾಡಬೇಕು. ವಿವಿಧ ಬಗೆಯ ಚೀಸ್‍ಗಳನ್ನು ಬಳಸಿ ಈ ಡಿಶಸ್ ತಯಾರಿಸಬಹುದು. ‘ಗೋ’ ನ ಚೀಸ್‍ನಿಂದ ಪೆಪ್ಪರ್, ಟೊಮ್ಯಾಟೋ ಮತ್ತು ಪೆರಿ ಪೆರಿಯನ್ನು ತಯಾರಿಸಿದರೆ ಮಕ್ಕಳು, ವಯಸ್ಕರ ನೆಚ್ಚಿನ ಖಾದ್ಯಗಳಾಗುತ್ತವೆ. ‘ಗೋ’ ನ ಚಟ್ನಿ ಅಥವಾ ಶೆಝ್ವಾನ್ ಚೀಸ್ ಅನ್ನು ಮೆಲ್ಟ್ ಮಾಡಿ ಆರೋಗ್ಯಕರವಾದ ಖಾರೀಗಳನ್ನು ಅದ್ದಿ ತಿಂದರೆ ಅದರ ಮಜವೇ ಬೇರೆ. ಇದನ್ನು ಬೇಗ, ಸುಲಭವಾಗಿ ಅತಿಥಿಗಳಿಗೆ ತಯಾರು ಮಾಡಿಕೊಡಬಹುದು. ಈ ಸಲದ ದೀಪಾವಳಿಯನ್ನು ಸಂತಸ ಮತ್ತು ಆರೋಗ್ಯಕರವಾಗಿ ಆಚರಿಸಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು