ಪಿತ್ತನಾಶಕ್ಕೆ ಗುಳಿಗೆ
ಬೇಕಾಗುವ ಪದಾರ್ಥಗಳು: 100 ಗ್ರಾಂ ಅಮ್ಸೋಲೆ ನೆನೆಸಿದ್ದು, 2 ಚಮಚ ಗಸಗಸೆ ಪುಡಿ, 1 ಚಮಚ ಒಣಶುಂಠಿ, 1 ಚಮಚ ಕಲ್ಲುಸಕ್ಕರೆ ಪುಡಿ, 2 ಚಮಚ ಏಲಕ್ಕಿ ಪುಡಿ, 2 ಚಮಚ ಬಡೇಸೋಂಪಿನ ಪುಡಿ, 2 ಚಮಚ ಜೇಷ್ಠಮಧುವಿನ ಪುಡಿ.
ಮಾಡುವ ವಿಧಾನ: ನೆನೆಸಿಟ್ಟ ಅಮ್ಸೋಲನ್ನು ರುಬ್ಬಿ, ನುಣ್ಣಗೆ ಪೇಸ್ಟ್ ಮಾಡಿ, ಬಾಂಡ್ಲೆಗೆ ಹಾಕಿ ಮಗುಚಬೇಕು. ಸ್ವಲ್ಪ ನೀರು ಇಂಗಿದ ನಂತರ ಗಸಗಸೆ, ಒಣಶುಂಟಿ, ಕಲ್ಲುಸಕ್ಕರೆ, ಏಲಕ್ಕಿ ಬಡೇಸೊಂಪು, ಜೇಷ್ಠಮಧುವಿನ ಪುಡಿಗಳನ್ನು ಹಾಕಿ ಮಗುಚಬೇಕು (ಕೈಯಾಡಿಸಿ) ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿ ಗಾಜಿನ ಬಾಟ್ಲಿಗೆ ಹಾಕಿಡಿ. ಕೆಮ್ಮು, ನೆಗಡಿಗೆ, ಪ್ರಯಾಣದ ತೊಂದರೆಗಳಿಗೆಲ್ಲಾ ಒಳ್ಳೆಯದು.