ಮೋದಿ ತಾಯಿ ಹೀರಾಬೆನ್ ಅವರು ಪ್ರಮಾಣ ವಚನ ಸಮಾರಂಭವನ್ನು ಗಾಂಧಿ ನಗರದಲ್ಲಿ ಕುಟುಂಬ ಸಮೇತ ಟಿ.ವಿಯಲ್ಲಿ ವೀಕ್ಷಿಸಿದರು
ADVERTISEMENT
ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ಮೋದಿ ಹಾಗೂ ಅವರ ಸಂಪುಟದ 45 ಸದಸ್ಯರಿಗೆ ಗೋಪ್ಯತೆಯ ಪ್ರಮಾಣವಚನ ಬೋಧಿಸಿದರು.
ದೇಶದ 15ನೇ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ನರೇಂದ್ರ ಮೋದಿ ಅವರು ಹಸ್ತಾಕ್ಷರ ಹಾಕಿದರು.
ರಾಷ್ಟ್ರಪತಿ ಭವನದಲ್ಲಿ ಸೋಮವಾರ ನೂತನ ಪ್ರಧಾನಿ ನರೇಂದ್ರ ಮೋದಿ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಬಳಿಕ ರಾಷ್ಟ್ರಪತಿ ಪ್ರಣವ್ ಮುಖರ್ಜಿ, ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಹಾಗೂ ಸಂಪುಟ ಸಚಿವರು ಕ್ಯಾಮರಾ ಕಣ್ಣಲ್ಲಿ ಸೆರೆಯಾದ ಕ್ಷಣ – ಪಿಟಿಐ ಚಿತ್ರ.
ದೇಶದ 15ನೇ ಪ್ರಧಾನಿಯಾಗಿ ಸೋಮವಾರ ಅಧಿಕಾರ ಸ್ವೀಕರಿಸಿದ ನರೇಂದ್ರ ಮೋದಿ ಅವರನ್ನು ರಾಷ್ಟ್ರಪತಿ ಪ್ರಣವ್ ಮುಖರ್ಜಿ ಹಸ್ತಲಾಘವ ಮಾಡಿ ಶುಭ ಕೋರಿದರು – ಪಿಟಿಐ ಚಿತ್ರ
ನೂತನ ಪ್ರಧಾನಿಯಾಗಿ ಸೋಮವಾರ ಅಧಿಕಾರ ಸ್ವೀಕರಿಸಿದ ನರೇಂದ್ರ ಮೋದಿ ಅವರಿಗೆ ಪಾಕಿಸ್ತಾನದ ಪ್ರಧಾನಿ ಷರೀಫ್ ಶುಭ ಕೋರಿದರು.
ಮೋದಿ ಪ್ರಮಾಣ ಸಮಾರಂಭಕ್ಕೆ ಸೋಮವಾರ ಶ್ರೀಲಂಕಾ ಅಧ್ಯಕ್ಷ ಮಹೇಂದ್ರ ರಾಜಪಕ್ಷೆ ರಾಷ್ಟ್ರಪತಿ ಭವನದತ್ತ ಆಗಮಿಸಿದರು. – ಪಿಟಿಐ ಚಿತ್ರ.
ನರೇಂದ್ರ ಮೋದಿ ಅವರ ಪ್ರಮಾಣ ವಚನ ಸಮಾರಂಭಕ್ಕೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಮತ್ತು ಉಪಾಧ್ಯಕ್ಷ ರಾಹುಲ್ ರಾಷ್ಟ್ರಪತಿ ಭವನದತ್ತ ಹೆಜ್ಜೆ ಹಾಕಿದ ಕ್ಷಣ – ಪಿಟಿಐ ಚಿತ್ರ