ಸತ್ಪ್ರಜೆಗಳಾಗಿ ಪ್ರಾಮಾಣಿಕ ಜೀವನ ನಡೆಸಿ

7

ಸತ್ಪ್ರಜೆಗಳಾಗಿ ಪ್ರಾಮಾಣಿಕ ಜೀವನ ನಡೆಸಿ

Published:
Updated:

ವಿಜಯಪುರ: ನಗರದ ವಿದ್ಯಾವರ್ಧಕ ಸಂಘದ ವಿ.ಭ.ದರಬಾರ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಈಚೆಗೆ 2018–19ನೇ ಸಾಲಿನ ವಾರ್ಷಿಕ ಸಮ್ಮೇಳನ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ನಡೆಯಿತು.

ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಸ್.ವೈ.ಅಮಾತೆ ಮಾತನಾಡಿ, ‘ವಿದ್ಯಾರ್ಥಿಗಳು ಶ್ರದ್ಧೆಯಿಂದ ಸತತ ಅಧ್ಯಯನ ನಡೆಸಿ ಉತ್ತಮ ಫಲಿತಾಂಶ ಪಡೆದು ಸತ್ಪ್ರಜೆಗಳಾಗಿ, ಪ್ರಾಮಾಣಿಕ ಜೀವನ ನಡೆಸಬೇಕು’ ಎಂದು ಕಿವಿಮಾತು ಹೇಳಿದರು.

ಶಾಸಕ ಸೋಮನಗೌಡ ಪಾಟೀಲ ಸಾಸನೂರ ಮಾತನಾಡಿ, ‘ಸಮಯ ಸದ್ಬಳಕೆ ಮಾಡಿಕೊಂಡು ಅಭ್ಯಾಸ ಮಾಡಿ, ವಿದ್ಯಾರ್ಥಿಗಳು ಉನ್ನತ ಸಾಧನೆ ಮಾಡಬೇಕು’ ಎಂದು ಹೇಳಿದರು.

ಸಂಘದ ಅಧ್ಯಕ್ಷ ರಾಜೇಶ ದರಬಾರ ಅಧ್ಯಕ್ಷತೆ ವಹಿಸಿದ್ದರು. ಸಂಘದ ಸಮನ್ವಯಾಧಿಕಾರಿ ಡಾ.ವಿ.ಬಿ.ಗ್ರಾಮಪುರೋಹಿತ ಮಾತನಾಡಿದರು. ವಿಶ್ವ ಮಾನವ ದಿನಾಚರಣೆ ಅಂಗವಾಗಿ ನಡೆದ ಭಾಷಣ ಸ್ಪರ್ಧೆ ವಿಜೇತರಿಗೆ, ಕ್ರೀಡಾ ಸಾಧಕ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ವಿದ್ಯಾರ್ಥಿಗಳು ಸ್ವಾಗತಿಸಿದರು. ಪ್ರಾಚಾರ್ಯ ಟಿ.ಆರ್.ಕುಲಕರ್ಣಿ ಸ್ವಾಗತಿಸಿದರು. ಉಪನ್ಯಾಸಕ ಎ.ನಾಗರಾಜ, ಸಿ.ಎಸ್.ಸಜ್ಜನ ಪರಿಚಯಿಸಿದರು. ಎ.ಎಸ್.ಕುಲಕರ್ಣಿ ವಾರ್ಷಿಕ ವರದಿ ವಾಚಿಸಿದರು. ಎ.ಕೆ.ಸಣ್ಣಿಂಗಮ್ಮನವರ ವಂದಿಸಿದರು. ಬಿ.ಎಚ್.ಕುಲಕರ್ಣಿ ನಿರೂಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !