ಬುಧವಾರ, ಮಾರ್ಚ್ 3, 2021
30 °C
ವಿಜಯಪುರ ಮಹಾನಗರ ಪಾಲಿಕೆ ಆಯುಕ್ತ ಡಾ.ಔದ್ರಾಮ್‌ ಸ್ಪಂದನೆಗೆ ಶ್ಲಾಘನೆ

ಗೋವಿನ ನರಳಾಟಕ್ಕೆ ಸ್ಪಂದಿಸಿದ ಆಡಳಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಸಾರ್ವಜನಿಕರೊಬ್ಬರು ಕಳುಹಿಸಿದ ವಾಟ್ಸ್‌ಆ್ಯಪ್‌ ವಿಡಿಯೊ ಕ್ಲಿಪ್ಪಿಂಗ್‌ಗೆ ತಕ್ಷಣವೇ ಪ್ರತಿಕ್ರಿಯಿಸಿದ ವಿಜಯಪುರ ಮಹಾನಗರ ಪಾಲಿಕೆ ಆಯುಕ್ತ ಡಾ.ಔದ್ರಾಮ, ಸಾವಿನ ನರಳಾಟದಲ್ಲಿದ್ದ ಗೋವಿನ ಚಿಕಿತ್ಸೆಗಾಗಿ ಪಶು ವೈದ್ಯರ ತಂಡವನ್ನು ಕಳುಹಿಸಿದ್ದು, ಶ್ಲಾಘನೆಗೆ ಪಾತ್ರವಾಗಿದೆ.

ವಿಜಯಪುರದ ಡಾ.ಬಿ.ಆರ್‌.ಅಂಬೇಡ್ಕರ್‌ ವೃತ್ತದ ಬಳಿ ಬುಧವಾರ, ನೆಲದ ಮೇಲೆ ಬಿದ್ದು ನರಳಾಡುತ್ತಿದ್ದ ಗೋವನ್ನು ಕಂಡ, ಗಣೇಶ ನಗರ ನಿವಾಸಿ ಸಿದ್ದನಗೌಡ ಬಿರಾದಾರ ತಕ್ಷಣವೇ ತಮ್ಮ ಮೊಬೈಲ್‌ನಲ್ಲಿ ಅದನ್ನು ಚಿತ್ರೀಕರಿಸಿ, ಪಾಲಿಕೆಯ ಆಯುಕ್ತರಿಗೆ ರವಾನಿಸಿದರು.

ಇದಾದ 15 ನಿಮಿಷದೊಳಗೆ ಪಶುವೈದ್ಯರ ತಂಡ ಸ್ಥಳಕ್ಕೆ ಧಾವಿಸಿ, ಆ ಗೋವಿಗೆ ಚಿಕಿತ್ಸೆ ನೀಡಿತು. ಆದರೂ ಸ್ಪಂದಿಸದ ಆಕಳು ಮೃತಪಟ್ಟಿತು. ಗೋವಿನ ಸಾವು ಒಂದೆಡೆ ನೋವು ತಂದರೆ; ಸಕಾಲಕ್ಕೆ ಸ್ಪಂದಿಸಿದ ಆಯುಕ್ತರ ನಿಲುವಿಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಯ್ತು.

‘ಆಕಳು ಪ್ಲಾಸ್ಟಿಕ್‌ ಮತ್ತು ಹಳಸಿದ ಅನ್ನ ತಿಂದಿದ್ದ ಕಾರಣ ಹೊಟ್ಟೆಯಲ್ಲಿ ಗ್ಯಾಸ್‌ ತುಂಬಿಕೊಂಡು, ಉಸಿರಾಟದ ತೊಂದರೆಗೆ ಸಿಲುಕಿ ಮೃತಪಟ್ಟಿದೆ. ಆಯುಕ್ತರು ತಿಳಿಸಿದ ಕೆಲ ನಿಮಿಷಗಳಲ್ಲೇ ಸ್ಥಳಕ್ಕೆ ಧಾವಿಸಿ, ಗ್ಯಾಸ್‌ ಹೊರ ತೆಗೆಯಲು ಇಂಜೆಕ್ಷನ್‌ ಕೊಟ್ಟೆ. ಬಹಳ ಸಮಯದಿಂದ ತೊಂದರೆಗೀಡಾದ ಗೋವು ಬದುಕುಳಿಯಲಿಲ್ಲ’ ಎಂದು ಪಶು ವೈದ್ಯಾಧಿಕಾರಿ ಡಾ.ಎಸ್‌.ಬಿ.ಕರ್ಜಗಿ ‘ಪ್ರಜಾವಾಣಿ’ಗೆ ತಿಳಿಸಿದರು.

ಮೃತ ಗೋವಿನ ಶರೀರವನ್ನು ಕಗ್ಗೋಡದ ರಾಮನಗೌಡ ಬಾಪುಗೌಡ ಪಾಟೀಲ ಯತ್ನಾಳ ಗೋ ರಕ್ಷಾ ಕೇಂದ್ರದವರು, ತಮ್ಮ ವಾಹನದಲ್ಲಿ ತೆಗೆದುಕೊಂಡು ಹೋಗಿ ಅಂತ್ಯಕ್ರಿಯೆ ನೆರವೇರಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.