ಶಿಲ್ಲಾಂಗ್: ಕೇಂದ್ರವು 39ನೇ ರಾಷ್ಟ್ರೀಯ ಕ್ರೀಡೆಗಳಿಗೆ ವಿಭಿನ್ನ ಮಾದರಿಯನ್ನು ರೂಪಿಸಲು ಮುಂದಾಗಿದ್ದು, ಈಶಾನ್ಯದ ಎಂಟು ರಾಜ್ಯಗಳಿಗೆ ಮುಂದಿನ ರಾಷ್ಟ್ರೀಯ ಕ್ರೀಡೆಗಳ ಆತಿಥ್ಯ ವಹಿಸುವಂತೆ ಕೇಳಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಶಿಲ್ಲಾಂಗ್ನಲ್ಲಿ ಶನಿವಾರ ನಡೆದ ರಾಜ್ಯಗಳ ಕ್ರೀಡಾ ಸಚಿವರು, ಕಾರ್ಯದರ್ಶಿಗಳು ಮತ್ತು ಒಲಿಂಪಿಕ್ ಸಂಸ್ಥೆಯ ಪದಾಧಿಕಾರಿಗಳ ಮೊದಲ ಪ್ರಾದೇಶಿಕ ಸಭೆಯಲ್ಲಿ ಈ ಪ್ರಸ್ತಾವಕ್ಕೆ ಸರ್ವಾನುಮತದ ಬೆಂಬಲ ದೊರಕಿದೆ ಎಂದು ಅವರು ತಿಳಿಸಿದ್ದಾರೆ.

ಈ ಗೌಪ್ಯ ಸಭೆಯ ಅಧ್ಯಕ್ಷತೆಯನ್ನು ಮೇಘಾಲಯದ ಕ್ರೀಡಾ ಸಚಿವ ಶಕ್ಲಿಯಾರ್ ವಾರ್ಜ್ರಿ ಮತ್ತು ಸಹ ಅಧ್ಯಕ್ಷತೆಯನ್ನು ಅರುಣಾಲ ಪ್ರದೇಶದ ಕ್ರೀಡಾ ಸಚಿವ ಕೆಂಟೊ ಜಿನಿ ವಹಿಸಿದ್ದರು.

ಈ ಭಾಗದಲ್ಲಿ 1999ರಲ್ಲಿ ಮೊದಲ ಬಾರಿ ಮಣಿಪುರದ ಆತಿಥ್ಯದಲ್ಲಿ ರಾಷ್ಟ್ರೀಯ ಕ್ರೀಡೆಗಳು ನಡೆದಿದ್ದವು. 2007ರಲ್ಲಿ ಅಸ್ಸಾಂ ಆತಿಥ್ಯ ವಹಿಸಿದ್ದು ಗುವಾಹಟಿಯಲ್ಲಿ ಕ್ರೀಡೆಗಳು ನಡೆದಿದ್ದವು.

‘ಶನಿವಾರದ ಸಭೆಯಲ್ಲಿ ಅರುಣಾಚಲ ಪ್ರದೇಶ, ಅಸ್ಸಾಂ, ಮಣಿಪುರ, ಮಿಜೋರಾಮ್, ಮೇಘಾಲಯ, ನಾಗಾಲ್ಯಾಂಡ್, ಸಿಕ್ಕಿಂ ಮತ್ತು ತ್ರಿಪುರಾದ ಪ್ರತಿನಿಧಿಗಳು ಭಾಗವಹಿಸಿದ್ದು ತಮ್ಮ ಅಭಿಪ್ರಾಯ ಮತ್ತು ಸಲಹೆಗಳನ್ನು ಹಂಚಿಕೊಂಡರು ಎಂದು ಮೇಘಾಲಯ ರಾಜ್ಯ ಒಲಿಂಪಿಕ್ ಸಂಸ್ಥೆಯ ಕಾರ್ಯಾಧ್ಯಕ್ಷ ಜಾನ್.ಎಫ್.ಖಾರ್ಷಿಂಗ್ ತಿಳಿಸಿದರು.

39ನೇ ಆವೃತ್ತಿಯ ಕ್ರೀಡೆಗಳು 2027ರಲ್ಲಿ ನಡೆಯಬೇಕಿದೆ. ನಿಗದಿಯಂತೆ ಇದು ಮೇಘಾಲಯದಲ್ಲಿ ನಡೆಯಬೇಕಿತ್ತು. ‘ಮೇಘಾಲಯವೊಂದೇ ಏಕೆ ಆತಿಥ್ಯ ವಹಿಸುತ್ತಿಲ್ಲ’ ಎಂಬ ಪ್ರಶ್ನೆಗೆ ಉತ್ತರಿಸಿದ ಖಾರ್ಸಿಂಗ್, ‘ಸಂಯುಕ್ತವಾಗಿ ನಡೆಸುವ ಪ್ರಸ್ತಾವ ಗೃಹ ಸಚಿವಾಲಯದಿಂದ ಬಂದಿತ್ತು. ಪ್ರಾದೇಶಿಕ ಸಹಕಾರ ಉತ್ತೇಜಿಸುವ ಕಾರಣದಿಂದ ಮೇಘಾಲಯ ಸರ್ಕಾರ ಒಪ್ಪಿಕೊಂಡಿತು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.