ಫ್ಲ್ಯಾಟ್‌ಗೆ ನುಗ್ಗಿ ಅರ್ಧ ಕೆ.ಜಿ ಚಿನ್ನ ಲೂಟಿ

7

ಫ್ಲ್ಯಾಟ್‌ಗೆ ನುಗ್ಗಿ ಅರ್ಧ ಕೆ.ಜಿ ಚಿನ್ನ ಲೂಟಿ

Published:
Updated:

ಬೆಂಗಳೂರು: ಮಲ್ಲೇಶ್ವರ 13ನೇ ಅಡ್ಡರಸ್ತೆಯಲ್ಲಿರುವ ‘ಸಂಪೂರ್ಣ’ ಅಪಾರ್ಟ್‌ಮೆಂಟ್‌ ಸಮುಚ್ಚಯದ ಫ್ಲ್ಯಾಟ್‌ಗೆ ನುಗ್ಗಿದ ಕಳ್ಳರು, ಅರ್ಧ ಕೆ.ಜಿ.ಚಿನ್ನಾಭರಣ ದೋಚಿದ್ದಾರೆ.

ಈ ಸಂಬಂಧ ಫ್ಲ್ಯಾಟ್ ಮಾಲೀಕ ಸುಧಾಕರ್, ಮಲ್ಲೇಶ್ವರ ಠಾಣೆಗೆ ದೂರು ಕೊಟ್ಟಿದ್ದಾರೆ. ಅವರು ಪತ್ನಿ–ಮಗನ ಜತೆ 10 ವರ್ಷಗಳಿಂದ ಇದೇ ಫ್ಲ್ಯಾಟ್‌ನಲ್ಲಿ ನೆಲೆಸಿದ್ದಾರೆ.

ಸುಧಾಕರ್ ಖಾಸಗಿ ಕಂಪನಿ ಉದ್ಯೋಗಿಯಾಗಿದ್ದು, ಪತ್ನಿ ನಗರದ ಕಾಲೇಜುವೊಂದರಲ್ಲಿ ಉಪನ್ಯಾಸಕಿಯಾಗಿದ್ದಾರೆ. ದಂಪತಿ ಎಂದಿನಂತೆ ಮಂಗಳವಾರ ಬೆಳಿಗ್ಗೆ 9 ಗಂಟೆಗೆ ಕೆಲಸಕ್ಕೆ ತೆರಳಿದ್ದರು. ಮಗ ಕೂಡ ಕಾಲೇಜಿಗೆ ಹೋಗಿದ್ದ. ಆ ನಂತರ ಬಾಗಿಲು ಮೀಟಿ ಒಳನುಗ್ಗಿರುವ ಕಳ್ಳರು, ಅಲ್ಮೆರಾದಲ್ಲಿದ್ದ 12 ಚಿನ್ನದ ಬಳೆಗಳು ಹಾಗೂ 4 ಸರಗಳನ್ನು ತೆಗೆದುಕೊಂಡು ಹೋಗಿದ್ದಾರೆ. ಸಂಜೆ 4 ಗಂಟೆಗೆ ಮಗ ಮನೆಗೆ ಮರಳಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಅಪಾರ್ಟ್‌ಮೆಂಟ್‌ ಸಮುಚ್ಚಯದ ಆವರಣದಲ್ಲಿ ಒಂದೇ ಒಂದು ಸಿ.ಸಿ ಟಿ.ವಿ ಕ್ಯಾಮೆರಾ ಅಳವಡಿಸಿಲ್ಲ. ಸೆಕ್ಯುರಿಟಿ ಗಾರ್ಡ್‌ ಕೂಡ ಸದಾ ಸೆಲ್ಲಾರ್‌ನಲ್ಲೇ ಕೂತಿರುತ್ತಾರೆ. ಹೀಗಾಗಿ, ಕಳ್ಳರು ಕಾಂಪೌಂಡ್ ಜಿಗಿದು ಒಳಬಂದಿರುವುದು ಅವರ ಗಮನಕ್ಕೆ ಬಂದಿಲ್ಲ ಎಂದು ಮಲ್ಲೇಶ್ವರ ಪೊಲೀಸರು ಹೇಳಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !