ನವದೆಹಲಿ: ಸಾಕಷ್ಟು ಭಾರತೀಯರು ನಿತ್ಯ ಶಂಖ ಊದುವ ಅಭ್ಯಾಸ ರೂಢಿಸಿಕೊಂಡಿದ್ದಾರೆ. ಅದೇ ರೀತಿ ನಿತ್ಯ 15 ನಿಮಿಷಗಳ ಕಾಲ ಶಂಖ ಊದುವ ಅಭ್ಯಾಸ ಮಾಡಿಕೊಂಡರೆ, ನಿದ್ರೆಯ ಸಮಯದಲ್ಲಿ ಮೂಗಿನ ಮೂಲಕ ಉಸಿರಾಟಕ್ಕೆ ತೊಂದರೆಯಾಗಿ ಗೊರಕೆ ಹೊಡೆಯುವ ಸಮಸ್ಯೆ ಸ್ವಲ್ಪ ಸಮಯದಲ್ಲೇ ನಿವಾರಣೆಯಾಗಲಿದೆ ಎನ್ನುತ್ತದೆ ಅಧ್ಯಯನ.

ಜೈಪುರದ ವೈದ್ಯರು ನಡೆಸಿರುವ ಅಧ್ಯಯನವು, ನಿಯಮಿತವಾಗಿ ಆರು ತಿಂಗಳ ಕಾಲ ಶಂಖ ಊದುವುದನ್ನು ಅಭ್ಯಾಸ ಮಾಡಿಕೊಂಡವರಲ್ಲಿ ನಿದ್ರೆಯ ವೇಳೆ ಉಸಿರುಗಟ್ಟಿಸುವಿಕೆ (OSA) ಸಮಸ್ಯೆ ಕಡಿಮೆಯಾಗಿರುವುದನ್ನು ಬಹಿರಂಗಪಡಿಸಿದೆ.

ಗೊರಕೆಯ ಅಪಾಯಗಳೇನು?

OSA ಸಾಮಾನ್ಯ ಸಮಸ್ಯೆಯಾಗಿದ್ದು, ರಾತ್ರಿಯ ವೇಳೆ ವಾಯುನಾಳಗಳು ಮುಚ್ಚಿಕೊಂಡು ಉಸಿರಾಟಕ್ಕೆ ಅಡಚಣೆಯಾಗುತ್ತದೆ. ಇದು, ಗೊರಕೆ ಹೊಡೆಯುವಿಕೆ, ನಿದ್ರಾಭಂಗ ಹಾಗೂ ಹಗಲಿನಲ್ಲೂ ನಿದ್ರೆಯ ಮಂಪರಿನಂತಹ ಸಮಸ್ಯೆಗಳಿಗೆ ಕಾರಣವಾಗುತ್ತದೆ. ದೀರ್ಘಾವಧಿಯಿಂದ ಅಧಿಕ ರಕ್ತದೊತ್ತಡ, ಹೃದಯ ಸಂಬಂಧಿ ಸಮಸ್ಯೆಗಳು ಹಾಗೇ ಪಾರ್ಶ್ವವಾಯುವಿನಿಂದ ಅಪಾಯಗಳನ್ನೂ ತಂದೊಡ್ಡಬಹುದು.

ಜೈಪುರದಲ್ಲಿ Eternal Heart Care Centre and Research Institute ಹೊಂದಿರುವ ವೈದ್ಯ ಕೃಷ್ಣ ಶರ್ಮಾ ಅವರು, ತಮ್ಮಲ್ಲಿಗೆ ಬರುವ ಹಲವು ರೋಗಿಗಳ ಪೈಕಿ ಶಂಖ ಊದುವ ಅಭ್ಯಾಸ ಮಾಡಿಕೊಂಡಿರುವವರಲ್ಲಿ ಸಮಸ್ಯೆಯ ತೀವ್ರತೆ ಕಡಿಮೆಯಾಗಿರುವುದನ್ನು ಕಂಡುಕೊಂಡಿದ್ದಾರೆ.

ಈ ಸಾಂಪ್ರದಾಯಿಕ ಅಭ್ಯಾಸವನ್ನು ವೈಜ್ಞಾನಿಕವಾಗಿ ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಶರ್ಮಾ ಅವರು, ಇನ್ನೂ ಕೆಲವು ಸಂಶೋಧಕರೊಂದಿಗೆ ಕೈಜೋಡಿಸಿ ಸಂಶೋಧನೆ ನಡೆಸಿದ್ದಾರೆ. OSA ಸಮಸ್ಯೆ ಎದುರಿಸುತ್ತಿದ್ದ 19ರಿಂದ 65 ವರ್ಷ ವಯಸ್ಸಿನ ಸುಮಾರು 30 ರೋಗಿಗಳ ಮೇಲೆ 2022ರ ಮೇ – 2024ರ ಜನವರಿ ಅವಧಿಯಲ್ಲಿ ಅಧ್ಯಯನ ನಡೆಸಿದ್ದಾರೆ. ಆ ಎಲ್ಲ ರೋಗಿಗಳು ನಿದ್ರಿಸುವಾಗ ಇಡೀ ರಾತ್ರಿ ಮೇಲ್ವಿಚಾರಣೆ ನಡೆಸಲಾಗಿದೆ. ನಿದ್ರೆಯ ಗುಣಮಟ್ಟ ಹಾಗೂ ಅವರೆಲ್ಲರಿಗೂ ಹಗಲಿನಲ್ಲಿ ನಿದ್ರೆ ಬರುತ್ತದೆಯೇ ಎಂಬ ಪ್ರಶ್ನೆಯನ್ನು ಕೇಳಲಾಗಿತ್ತು.

ಅದಾದ ನಂತರ, ಶಂಖ ಊದುವ ಅಭ್ಯಾಸ ಮಾಡುವಂತೆ 16 ಮಂದಿಗೆ ಮತ್ತು ಉಳಿದ 14 ಜನರಿಗೆ ದೀರ್ಘ ಉಸಿರಾಟದ ಅಭ್ಯಾಸ ನಡೆಸುವಂತೆ ಸೂಚಿಸಲಾಗಿತ್ತು. ಆರು ತಿಂಗಳು ಸತತವಾಗಿ ಕನಿಷ್ಠ 15 ನಿಮಿಷ ಅಭ್ಯಾಸ ನಡೆಸಿದ ಬಳಿಕ ಅವರನ್ನೆಲ್ಲ ಮೌಲ್ಯಮಾಪನಕ್ಕೆ ಒಳಪಡಿಸಲಾಗಿತ್ತು.

ಶಂಖ ಊದುವುದು or ದೀರ್ಘ ಉಸಿರಾಟ: ಯಾವುದು ಉತ್ತಮ?

ದೀರ್ಘ ಉಸಿರಾಟದ ವ್ಯಾಯಾಮ ನಡೆಸಿದವರಿಗೆ ಹೋಲಿಸಿದರೆ, ಶಂಖ ಊದಿದವರಲ್ಲಿ ಹಗಲಿನ ನಿದ್ರೆ ಪ್ರಮಾಣ ಶೇ 34 ರಷ್ಟು ಕಡಿಮೆಯಾಗಿತ್ತು. ರಾತ್ರಿ ಹೊತ್ತಿನಲ್ಲಿ ಮಲಗಿದ್ದಾಗ ಉಸಿರಾಟದ ಅಡಚಣೆಯೂ ಕಡಿಮೆಯಾಗಿತ್ತು. ಅಷ್ಟಲ್ಲದೆ ಶಂಖ ಊದಿದವರ ರಕ್ತದಲ್ಲಿ ಆಮ್ಲಜನಕದ ಪ್ರಮಾಣವೂ ವೃದ್ಧಿಸಿತ್ತು ಎಂಬುದನ್ನು ಈ ಅಧ್ಯಯನ ದಾಖಲಿಸಿದೆ.
.PCOS ಪತ್ತೆ ಮಾಡುವುದು ಹೇಗೆ? ನಿರ್ವಹಣೆ ವಿಧಾನಗಳ ಬಗ್ಗೆ ಇಲ್ಲಿದೆ ಮಾಹಿತಿ....World Organ Donation Day | ಯಾರೆಲ್ಲ ಅಂಗಾಂಗ ದಾನ ಮಾಡಬಹುದು? ಇಲ್ಲಿದೆ ಮಾಹಿತಿ.
ಈ ಕುರಿತು 'ಡೆಕ್ಕನ್ ಹೆರಾಲ್ಡ್' ಜೊತೆ ಮಾತನಾಡಿರುವ ಶರ್ಮಾ, 'ಇದು ಪರಿಕಲ್ಪನೆಗೆ ಪೂರಕವಾಗಿ ನಡೆಸಿದ ಸರಳ ಅಧ್ಯಯನವಷ್ಟೇ. ರಾಜಸ್ಥಾನದಲ್ಲಿ ಐದು ಆಸ್ಪತ್ರೆಗಳನ್ನು ಒಳಗೊಂಡಂತೆ ದೊಡ್ಡ ಮಟ್ಟದ ಸಂಶೋಧನೆ ನಡೆಸಲಿದ್ದೇವೆ. ಅದಕ್ಕಾಗಿ ಅನುಮೋದನೆ ಪಡೆದುಕೊಂಡಿದ್ದೇವೆ. ಮೂರು ತಿಂಗಳಲ್ಲಿ ಗೊರಕೆ ಸಮಸ್ಯೆ ಇರುವವರನ್ನು ಆಯ್ಕೆ ಮಾಡಿಕೊಳ್ಳಲಾಗುವುದು' ಎಂದು ತಿಳಿಸಿದ್ದಾರೆ.

ಶಂಖವನ್ನು ಊದುವ ವಿಧಾನವು ವಿಶಿಷ್ಟವಾದದ್ದು ಎನ್ನುವ ಶರ್ಮಾ, ದೀರ್ಘವಾಗಿ ಸಾಕಷ್ಟು ಉಸಿರನ್ನು ಒಳಗೆಳೆದುಕೊಂಡು, ನಂತರ ಅದೆಲ್ಲವನ್ನೂ ಶಂಖದ ಸಣ್ಣ ಬಾಯಿಯ ಮೂಲಕ ಬಲವಂತವಾಗಿ ಊದಿ ಹೊರಹಾಕಬೇಕಾಗುತ್ತದೆ ಎಂದು ವಿವರಿಸುತ್ತಾರೆ.

ಶಂಖ ಊದುವುದರಿಂದ ಪ್ರಯೋಜನವೇನು?

'ಒಎಸ್ಎ ಸಮಸ್ಯೆ ಇರುವವರಿಗೆ ಗಂಟಲಿನ ಮೇಲ್ಭಾಗ ಹಾಗೂ ಅಂಗುಳ ಸಾಮಾನ್ಯವಾಗಿ ಬಾಗಿರುತ್ತದೆ. ಇದರಿಂದ ನಿದ್ರೆಯಲ್ಲಿ ಉಸಿರಾಟ ಸಮಸ್ಯೆ ಹಾಗೂ ಗೊರಕೆ ಉಂಟಾಗುತ್ತದೆ. ಆದರೆ ಶಂಖ ಊದುವುದರಿಂದ ಉಂಟಾಗುವ ಕಂಪನವು ಮತ್ತು ಬಲವಾಗಿ ಗಾಳಿ ಊದುವುದರಿಂದ ಗಂಟಲಿನ ಮೇಲ್ಭಾಗದ ಮಾಂಸಖಂಡಗಳು ಬಲಗೊಳ್ಳುತ್ತವೆ. ಇದು ಉಸಿರಾಟ ಸರಾಗವಾಗಿರುವಂತೆ ನೋಡಿಕೊಳ್ಳುತ್ತದೆ' ಎಂದು ವಿಶ್ಲೇಷಿಸುತ್ತಾರೆ.

ಶಂಖದ ವಿಶಿಷ್ಟ ಸುರುಳಿಯಾಕಾರವು, ನಿರ್ದಿಷ್ಟ ಧ್ವನಿ ಹೊರಡಿಸಲು ಹಾಗೂ ಯಾಂತ್ರಿಕ ಪ್ರಯತ್ನಗಳನ್ನು ಮಾಡಲು ಸ್ನಾಯುಗಳಿಗೆ ಮತ್ತಷ್ಟು ಉತ್ತೇಜನ ನೀಡಲಿದೆ ಎಂಬುದು ಅವರ ಪ್ರತಿಪಾದನೆ.

ಕಹಳೆ ಊದುವುದೂ ಸಹ ಪ್ರಯೋಜನಕಾರಿಯಾಗಬಹುದು. ಆದರೆ, ಅದನ್ನು ವೈಜ್ಞಾನಿಕವಾಗಿ ಸಮರ್ಥಿಸುವಂತಹ ಯಾವುದೇ ಅಧ್ಯಯನಗಳು ನಡೆದಿಲ್ಲ. ಆದಾಗ್ಯೂ, Didgeridoo ಸಾಧನ ಬಳಸುವುದರಿಂದಲೂ ನಿದ್ರೆಯ ಸಮಯದ ಉಸಿರಾಟದ ಸಮಸ್ಯೆಯಯನ್ನು ಸುಧಾರಿಸಬಹುದು ಎಂದು ಹೇಳುತ್ತಾರೆ ಅವರು.

'ಶಂಖ ಚಿಕಿತ್ಸೆ' ಸಂಬಂಧ ಈವರೆಗೆ ನಡೆಸಿರುವ ಅಧ್ಯಯನದಲ್ಲಿ ಭಾಗಿಯಾಗಿರುವ ಗ್ರೀಸ್ನ ಕ್ರೀಟ್ ವಿಶ್ವವಿದ್ಯಾಲಯದ ಸಂಶೋಧಕಿ ಸೋಫಿಯಾ ಶಿಜಾ ಎಂಬವರು ಉದ್ದೇಶಿತ ಅಧ್ಯಯನದ ಕುರಿತು, 'ಶಂಖ ಊದುವ ಪ್ರಾಚೀನ ರೂಢಿಯು, ಸ್ನಾಯು ತರಬೇತಿಯನ್ನು ಗುರಿಯಾಗಿಸಿಕೊಂಡು ಆಯ್ದ (ಮಲಗಿದ್ದಾಗ ಉಸಿರಾಟದ ಸಮಸ್ಯೆ ಎದುರಿಸುತ್ತಿರುವ) ರೋಗಿಗಳಿಗೆ ಚಿಕಿತ್ಸೆ ನೀಡುವ ಸಾಮರ್ಥ್ಯ ಹೊಂದಿದೆ ಎಂಬುದನ್ನು ಸಾಬೀತು ಮಾಡುವ ಕುತೂಹಕಲಾರಿ ಅಧ್ಯಯನ' ಎಂದು ಹೇಳಿಕೊಂಡಿದ್ದಾರೆ.

'ಸದ್ಯದ ಪ್ರತಿಪಾದನೆಗೆ ಹೆಚ್ಚಿನ ಪುರಾವೆಗಳನ್ನು ಒದಗಿಸಲು ದೊಡ್ಡ ಮಟ್ಟದ ಅಧ್ಯಯನವು ನೆರವಾಗಲಿದೆ. ಅದರಿಂದ ದೊರೆಯುವ ಫಲಿತಾಂಶವು, ಮಲಗಿದ್ದಾಗ ಉಸಿರಾಟದ ಸಮಸ್ಯೆ ಎದುರಿಸುತ್ತಿರುವವರು ಹಾಗೂ ಇತರ ರೋಗಿಗಳ ಚಿಕಿತ್ಸೆಗೆ ಪರಿಣಾಮಕಾರಿ ಸಂಯೋಜನೆಯಾಗಬಹುದು' ಎಂದೂ ಅಭಿಪ್ರಾಯಪಟ್ಟಿದ್ದಾರೆ.

Eternal Heart Care Centre and Research Instituteನ ವೈದ್ಯರಷ್ಟೇ ಅಲ್ಲದೆ, ರಾಜಸ್ಥಾನ ವಿಶ್ವವಿದ್ಯಾಲಯ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಔಷಧ ವಿಜ್ಞಾನಗಳ ವಿದ್ಯಾಲಯದ ಸಂಶೋಧಕರೂ ಈ ಅಧ್ಯಯನದಲ್ಲಿ ಭಾಗಿಯಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.