ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕವಾಟವಿರುವ ಎನ್‌–95 ಮಾಸ್ಕ್ ಅಸಮರ್ಥ: ಎಚ್ಚರ ಅಗತ್ಯ ಎಂದ ಸರ್ಕಾರ

N-95
Last Updated 21 ಜುಲೈ 2020, 11:50 IST
ಅಕ್ಷರ ಗಾತ್ರ

ನವದೆಹಲಿ: ಕೊರೊನಾ ವೈರಸ್‌ ಹರಡುವುದನ್ನು ತಡೆಯಲು ಕವಾಟವಿರುವ ರೆಸ್ಪಿರೇಟರ್‌ ಎನ್‌–95 ಮಾಸ್ಕ್‌ಗಳು ಅಸಮರ್ಥವಾಗಿದ್ದು, ಅವುಗಳನ್ನು ಬಳಸುವಾಗ ಎಚ್ಚರಿಕೆ ವಹಿಸಬೇಕು ಎಂದುಕೇಂದ್ರ ಸರ್ಕಾರ ಹೇಳಿದೆ.

ಮನೆಯಲ್ಲಿ ತಯಾರಿಸಿದ ಮಾಸ್ಕ್‌ಗಳೇ ವೈರಸ್‌ ಹರಡುವುದನ್ನು ತಡೆಗಟ್ಟಿವೆ ಎಂದು ಆರೋಗ್ಯ ಸೇವೆಗಳ ಮಹಾನಿರ್ದೇಶಕ ರಾಜೀವ್‌ ಗಾರ್ಗ್‌ ರಾಜ್ಯ ಸರ್ಕಾರಗಳಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ವೈರಸ್‌ಗಳು ತಪ‍್ಪಿಸಿಕೊಳ್ಳದಂತೆ ಮಾಸ್ಕ್‌ ತಡೆಯಬೇಕಿತ್ತು. ಆದರೆ, ವೈರಾಣುಗಳು ತಪ್ಪಿಸಿಕೊಳ್ಳುತ್ತಿವೆ. ಎನ್‌–95 ಮಾಸ್ಕ್‌ಗಳ ಬದಲಾಗಿ ಮುಖವನ್ನು ಮುಚ್ಚಿಕೊಳ್ಳಲು ಮನೆಯಲ್ಲಿಯೇ ತಯಾರಿಸಿದ ಮುಖಗವಸು ಬಳಸುವುದು ಒಳಿತು ಎಂದು ಸಲಹೆ ನೀಡಿದ್ದಾರೆ.

ಕೊರೊನಾ ವೈರಸ್‌ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಮಾರ್ಗಸೂಚಿಗಳನ್ನು ಎನ್‌–95 ಮಾಸ್ಕ್‌ ತಯಾರಿಕೆಯಲ್ಲಿ ಪಾಲಿಸಿಲ್ಲ. ನಾನು ಮೂರು ಪದರಗಳುಳ್ಳ ಹತ್ತಿಯಿಂದ ಮಾಡಿರುವ ಮಾಸ್ಕ್‌ ಅನ್ನು ಬಳಸುತ್ತಿದ್ದೇನೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷ ವರ್ಧನ್‌ ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT