ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರುಚಿ ಬೆಂಬತ್ತಿ ಅನಾರೋಗ್ಯಕ್ಕೆ ತುತ್ತಾಗದಿರಿ: ಕೋಲ್ಡ್ ಕಟ್ಸ್ ಬಳಸುವ ಮುನ್ನ ಎಚ್ಚರ

Last Updated 5 ಡಿಸೆಂಬರ್ 2022, 14:33 IST
ಅಕ್ಷರ ಗಾತ್ರ

ಬದಲಾದ ಜೀವನಶೈಲಿ, ಆಧುನಿಕತೆ, ವಿವಿಧ ದೇಶ ಹಾಗೂ ಸಂಸ್ಕೃತಿಗಳ ಆಹಾರಾಭ್ಯಾಸಗಳ ಪ್ರಭಾವ, ಪಾಶ್ಚಾತೀಕರಣ ನಮ್ಮ ಸಂಸ್ಕೃತಿ ಹಾಗೂ ಆಹಾರಾಭ್ಯಾಸಗಳ ಮೇಲೆ ಅಗಾದ ಪ್ರಭಾವವನ್ನು ಬೀರಿದೆ. ಮಕ್ಕಳು ಹಾಗೂ ಹದಿಹರೆಯದವರು ಬರ್ಗರ್, ಪಿಜ್ಜಾ, ಪಾಸ್ತ ಮುಂತಾದ ಆಹಾರಗಳನ್ನು ದೈನಂದಿನ ಆಹಾರಾಭ್ಯಾಸಗಳಲ್ಲಿ ಅಳವಡಿಸಿಕೊಂಡಿರುವುದು ಸಾಮಾನ್ಯವಾಗಿದೆ.

ಬರ್ಗರ್ ಮುಂತಾದ ಆಹಾರವನ್ನು ತಯಾರು ಮಾಡುವಾಗ ಪ್ರಮುಖವಾಗಿ ಬಳಸುವಂತಹ ಮಾಂಸಾಹಾರವೆಂದರೆ ಕೋಲ್ಡ್ ಕಟ್ಸ್ಗಳು. ಅದು ಪೋರ್ಕ್, ಪೌಲ್ಟ್ರಿ, ಆಡು, ಕುರಿ ಮುಂತಾದ ಮಾಂಸಗಳಿಗೆ ಉಪ್ಪು ಸೇರಿಸಿ ಅಂದರೆ ಸಾಲ್ಟೆಡ್ , ಸ್ಮೋಕ್ಡ್, ಹುದುಗಿಸಿ, ಸಂಸ್ಕರಿಸಿ ಮಾಡಿ ಅದರ ಬಣ್ಣ, ರುಚಿ, ಘಮವನ್ನು ಹೆಚ್ಚು ಮಾಡಲಾಗುತ್ತದೆ. ಇದರಲ್ಲಿ ಹಾಟ್ ಡಾಗ್ಸ್, ಹ್ಯಾಮ್, ಬೇಕನ್, ಟರ್ಕಿ ಬೇಕನ್, ಕಾರ್ನ್ಡ್ ಬೀಫ್ , ಪೆಪ್ಪರೋನಿ, ಸಲಾಮಿ, ಬೋಲೋಗ್ನ, ಲಂಚಿಯಾನ್, ಡೈಲಿ ಮೀಟ್, ಸಾಸೇಜಸ್, ಕ್ಯಾನ್ಡ್ ಮೀಟ್ ಮುಂತಾದ ರೂಪದಲ್ಲಿ ಬಳಸಲಾಗುತ್ತದೆ.

ಇದರ ಸಂಸ್ಕರಣೆಯ ಸಮಯದಲ್ಲಿ ಸೋಡಿಯಮ್ ನೈಟ್ರೈಟ್ ಅನ್ನು ಬಳಸಲಾಗುವುದರಿಂದ ಅದು ಮಾಂಸದ ಬಣ್ಣವನ್ನು ಇನ್ನೂ ಕೆಂಪು ಮಾಡಿ,ರುಚಿಯನ್ನು ಸಹ ಹೆಚ್ಚಿಸುತ್ತದೆ.ಲ್ಯಾಕ್ಟಿಕ್ ಆಮ್ಲವನ್ನು ಬಳಸುವುದರಿಂದ ಹುಳಿಯಾದ ರುಚಿಯನ್ನು ಆಹಾರಕ್ಕೆ ಸೇರಿಸಲು ಸಹಾಯವಾಗುತ್ತದೆ. ಅಲ್ಲದೆ ನೈಟ್ರೇಟ್ ಹಾಗೂ ನೈಟ್ರೈಟ್ಗಳ ಬಳಕೆ ಬಾಟುಲಿಸಂ ಎಂಬ ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ದೀರ್ಘಕಾಲ ಶೇಖರಿಸಿದ ಮಾಂಸಾಹಾರಗಳಲ್ಲಿ ಕಡಿಮೆಮಾಡಬಹುದಾಗಿದೆ. ಆದರೆ ಇದರ ಬಳಕೆ ಕ್ಯಾನ್ಸರ್ ಕಾರಕವೆಂದು ಅಧ್ಯಯನಗಳು ತಿಳಿಸುತ್ತವೆ.

ಕೋಲ್ಡ್‌ ಕಟ್ ಮಾಂಸದ ವಿಧಗಳು

ಇಡಿಯಾಗಿ ಮಾಂಸವನ್ನು ಬೇಯಿಸಿ, ನಂತರ ಅದನ್ನು ಸಣ್ಣ ಸಣ್ಣ ತುಂಡುಗಳನ್ನಾಗಿ ಕತ್ತರಿಸಲಾಗುತ್ತದೆ.ನಂತರ ಅದಕ್ಕೆ ಉಪ್ಪು, ಮಸಾಲೆ ಪದಾರ್ಥಗಳು ಅಥವಾ ಸಕ್ಕರೆಯನ್ನು ಸೇರಿಸಲಾಗುತ್ತದೆ. ಇನ್ನೊಂದುಬಗೆಯೆಂದರೆ ಮಾಂಸದ ತುಂಡುಗಳನ್ನು ಸೇರಿಸಿ ಬೇಕಾದ ಆಕಾರಕ್ಕೆ ತರಲಾಗುತ್ತದೆ. ಮಾಂಸದ ತುಂಡುಗಳನ್ನು ಜೋಡಣೆ ಮಾಡಲು ಮಾಂಸದ ಎಮಲ್ಷನ್ಗಳು, ಮಯೋಫೈಬ್ರಿಲ್ಸಾರ್ ಗಳನ್ನು ಬಳಸಲಾಗುತ್ತದೆ.

ಮಾಂಸದ ಸ್ಥಿರತೆಯನ್ನು ಗಟ್ಟಿಗೊಳಿಸಲು ಕೆಂಪು ಸೀವೀಡ್ಗಳನ್ನು ಬಳಸಲಾಗುತ್ತದೆ. ಇದಲ್ಲದೆ ಸಾಮಾನ್ಯವಾಗಿ ಬಳಸುವ ಕೋಲ್ಡ್ ಕಟ್ ಮಾಂಸವೆಂದರೆ ಅದು ಸಾಸೇಚ್‌ಗಳು ಅಂದರೆ ಯಾವುದೇ ಮಾಂಸ ಅಥವ ಪೋರ್ಕ್ ಕೋಳಿ ಮಾಂಸವನ್ನು ಚಿಕ್ಕದಾಗಿ ತುಂಡರಿಸಿ, ಸೀಸನಿಂಗ್ ಮಾಡಿ, ಬೇಕಾದ ಆಕಾರಕ್ಕೆ ತರುವುದಾಗಿದೆ.

ಡೈಲಿ ಮೀಟ್/ ಕೋಲ್ಡ್ ಕಟ್‌ಗಳ ಮಿತ ಬಳಕೆ ಆರೋಗ್ಯಕ್ಕೆ ಪೂರಕ

ಈ ಮಾಂಸಗಳಲ್ಲಿ ಸೋಡಿಯಂ ಅಂಶವು ಹೆಚ್ಚಿದ್ದು ಅವಶ್ಯಕತೆಗಿಂತ ಹೆಚ್ಚು ಸೋಡಿಯಂನ್ನು ಶರೀರಕ್ಕೆ ಒದಗಿಸುವುದರಿಂದ ಶರೀರದಲ್ಲಿ ನೀರಿನಾಂಶವು ಹೆಚ್ಚಾಗಿ ಅಧಿಕ ರಕ್ತದೊತ್ತಡ ಹಾಗೂ ಹೃದಯ ಸಂಬಂಧಿ ಕಾಯಿಲೆಗಳಿಗೆ ಕಾರಣವಾಗಬಹುದಾಗಿದೆ. ಈ ಮಾಂಸಗಳಲ್ಲಿ ಹೆಚ್ಚು ಸಂರಕ್ಷಕಗಳನ್ನು ಬಳಸಲಾಗಿದ್ದು ನೈಟ್ರೇಟ್ ಹಾಗೂ ನೈಟ್ರೈಟ್ ಗಳನ್ನು ಹೊಂದಿದ್ದು ಕ್ಯಾನ್ಸರ್ಕಾರಕ ಎಂದು ಅಧ್ಯಯನಗಳು ತಿಳಿಸುತ್ತವೆ. ದಿನದಲ್ಲಿ ಒಂದು ಬಾರಿ ಈ ತರಹದ ಮಾಂಸವನ್ನು ಬಳಸುವುದರಿಂದ 18% ಕರುಳು ಸಂಬಂಧಿ ಕ್ಯಾನ್ಸರ್ ಗೆ ತುತ್ತಾಗುವ ಸಂಭವ ಹೆಚ್ಚಾಗಬಹುದಾಗಿದೆ.ಈ ಮಾಂಸದ ಬಳಕೆಮಿದುಳಿನ ಬೆಳವಣಿಗೆಗ ಮಾರಕವಾಗಬಹುದಾಗಿದ್ದು, ಡಿಮೆನ್ಸಿಯಾ ಮುಂತಾದ ಮಿದುಳಿನ ಕಾಯಿಲೆಗಳಿಗೆ ತುತ್ತಾಗುವ ಸಾಧ್ಯತೆಯೂ ಇದೆ.ಈ ಮಾಂಸಗಳಲ್ಲಿ ಹೆಚ್ಚಿನ ಸ್ಯಾಚುರೇಟೆಡ್ ಕೊಬ್ಬಿನ ಅಂಶ ಇದ್ದು, ಇವುಹೃದಯ ಸಂಬಂಧಿ ಕಾಯಿಲೆಗಳಿಗೆ ಕಾರಣವಾಗಬಹುದಾಗಿದೆ.

ಡೈಲಿ ಮೀಟ್ / ಕೊಲ್ಡ್ ಕಟ್ ಮಾಂಸವನ್ನು ಬಳಸುವ ಸಮಯದಲ್ಲಿ ತೆಗೆದುಕೊಳ್ಳಬೇಕಾದ ಮುಂಜಾಗ್ರತೆಗಳು

– ಮಾರುಕಟ್ಟೆಯಿಂದ ಖರೀದಿಸುವಾಗ ಅದರಲ್ಲಿನ ಸೋಡಿಯಂ ಅಂಶದ ಬಗ್ಗೆ ನಿಗಾವಹಿಸಿ.
– ಹಾನಿಕಾರಕ ಸಂರಕ್ಷಕಗಳ ಬಳಕೆಯ ಬಗ್ಗೆ ಗಮನಹರಿಸಿ.
– ಸ್ಯಾಚುರೇಟೆಡ್ ಕೊಬ್ಬಿನಾಂಶ ಕಡಿಮೆಯಿರುವ ಟರ್ಕಿ, ಚಿಕನ್ ಕೋಲ್ಡ್ ಕಟ್ಸ್ ಬಳಸುವುದು ಪೋರ್ಕ್ ಸಲಾಮಿಗಳಿಗಿಂತ ಉತ್ತಮ.

ಡೈಲಿಮೀಟ್ ಬದಲಾಗಿ ಬಳಸಬಹುದಾದಂತಹ ಆಹಾರಗಳು

ಮಕ್ಕಳು, ಹದಿಹರೆಯದವರು,ಬರ್ಗರ್ ಮುಂತಾದ ಆಹಾರಾಭ್ಯಾಸವುಳ್ಳವರು ಡೈಲಿಮೀಟ್ ಬದಲಿಗೆ ಇವುಗಳನ್ನು ಬಳಸಬಹುದಾಗಿದೆ.

–ಕ್ಯಾನ್ಡ್ ಮೀನು, ಟ್ಯೂನ/ಸಾರ್ ಡೈನ್ಸ್ ಗಳಲ್ಲಿ ಯಥೇಚ್ಛವಾಗಿದ್ದು,ವಿಟಮಿನ್ ಬಿ 12, ಒಮೇಗ -3 ಕೊಬ್ಬನ್ನು ಹೊಂದಿರುವುದರಿಂದ ಆರೋಗ್ಯಕರ ಎನ್ನಬಹುದಾಗಿದೆ.
– ಬೇಯಿಸಿದ ಮೊಟ್ಟೆ ಪ್ರೋಟೀನ್ ಗಳಲ್ಲಿ, ಕೋಲಿನ್ ಹಾಗೂ ಇತರೆ ಪೌಷ್ಠಿಕಾಂಶವನ್ನು ಹೊಂದಿದ್ದು ಆರೋಗ್ಯಕರ.
– ಪೀನಟ್ ಬಟರ್, ತಾಜಾ ಹಣ್ಣುಗಳು, ಒಣಹಣ್ಣುಗಳು, ಜೇನುತುಪ್ಪ ಮುಂತಾದವುಗಳು ಆರೋಗ್ಯಕರ ಹಾಗೂ ರುಚಿಕರ.
– ಮಾರುಕಟ್ಟೆಯಲ್ಲಿ ಲಭ್ಯವಿರುವ ತಾಜಾ ಮಾಂಸಾಹಾರಗಳನ್ನು ಉಪಯೋಗಿಸಬಹುದಾಗಿದೆ.‌

ಕೇವಲ ರುಚಿಯ ಬೆನ್ನು ಹತ್ತಿ ಅನಾರೋಗ್ಯಕರ ಆಹಾರಾಭ್ಯಾಸಗಳಿಗೆ ಮಾರುಹೋಗುವುದಕ್ಕಿಂತ ನಾವು ಸೇವಿಸುವ ಆಹಾರದ ಪೌಷ್ಠಿಕಾಂಶದ ಬಗ್ಗೆ ಗಮನಹರಿಸುವುದು ಆರೋಗ್ಯಕ್ಕೆ ಪೂರಕ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT