ಲಾಕ್ಡೌನ್ನ ಈ ಸಮಯದಲ್ಲಿ ಉದ್ಯೋಗಿಗಳು, ಮುಖ್ಯವಾಗಿ ಐಟಿ ಉದ್ಯೋಗಿಗಳು ಮಾನಸಿಕವಾಗಿ ಮತ್ತು ದೈಹಿಕವಾಗಿ ಹೆಚ್ಚಿನ ಪ್ರಮಾಣದಲ್ಲಿ ತೊಂದರೆಗೊಳಗಾಗಿದ್ದಾರೆ.

ಬಹುತೇಕ ಐಟಿ ಕಂಪನಿಗಳು ಮನೆಯಿಂದಲೇ ಕೆಲಸ ಮಾಡುವ ಸೌಲಭ್ಯವನ್ನು ನೀಡಿವೆ. ಈ ಹಂತದಲ್ಲಿ ಉದ್ಯೋಗಿಗಳು ಕೋವಿಡ್ನಿಂದ ತಮ್ಮನ್ನು ರಕ್ಷಿಸಿಕೊಳ್ಳಬೇಕು, ಮನೆಯಲ್ಲಿ ದೀರ್ಘ ಕೆಲಸದ ಸಮಯಕ್ಕೆ ಹೊಂದಿಕೊಳ್ಳಬೇಕು, ಕುಟುಂಬದ ಸದಸ್ಯರ ಅವಶ್ಯಕತೆಗಳನ್ನು ಪೂರೈಸಬೇಕು. ಇಂತಹ ಜವಾಬ್ದಾರಿ ಹೆಚ್ಚಿದಾಗ ಒತ್ತಡವೂ ಹೆಚ್ಚುತ್ತದೆ. ಈ ಒತ್ತಡಗಳೆಂದರೆ, ಆರೋಗ್ಯದ ಬಗ್ಗೆ ಭಯ ಮತ್ತು ಚಿಂತೆ,ನಿದ್ರೆ ಅಥವಾ ಆಹಾರ ಸೇವನೆಯಲ್ಲಿ ಬದಲಾವಣೆ,ಏಕಾಗ್ರತೆ ಇಲ್ಲದಿರುವುದು, ಮದ್ಯಪಾನ ಅಥವಾ ತಂಬಾಕು ಬಳಕೆ ಹೆಚ್ಚಳ, ಉದ್ಯೋಗ ಮತ್ತು ಆರ್ಥಿಕ ಸ್ಥಿತಿಯಲ್ಲಿ ಏರುಪೇರು.

ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಸಲಹೆಗಳು:

* ಹೆಚ್ಚಿನವರು ಕಂಪ್ಯೂಟರ್ ಮತ್ತು ಲ್ಯಾಪ್ಟಾಪ್ನೊಂದಿಗೆ ಕೆಲಸ ಮಾಡಬೇಕಾಗಿರುವುದರಿಂದ, ಅವುಗಳನ್ನು ದಿನಕ್ಕೆ ಎರಡು ಬಾರಿ ಶುಚಿಗೊಳಿಸಿ.ಸೋಂಕು ನಿವಾರಕದಿಂದ ಕೈಗಳನ್ನು ಆಗಾಗ ತೊಳೆಯಿರಿ.

* ಒತ್ತಡ ಕಳೆಯಲು ನಿತ್ಯದ ಕೆಲಸದಿಂದ ಸ್ವಲ್ಪ ವಿರಾಮ ತೆಗೆದುಕೊಳ್ಳಿ. ಕುಟುಂಬದೊಂದಿಗೆ ಸಮಯ ಕಳೆಯಿರಿ, ಸಿನಿಮಾ ವೀಕ್ಷಿಸಿ, ಸಂಗೀತ ಆಲಿಸಿ, ಮಕ್ಕಳೊಂದಿಗೆ ಆಟವಾಡಿ.

* ಮಧುಮೇಹ, ರಕ್ತದೊತ್ತಡ, ಹೃದ್ರೋಗದಿಂದ ಬಳಲುತ್ತಿದ್ದರೆ, ವೈದ್ಯರೊಂದಿಗೆಸಮಾಲೋಚಿಸಿ, ನಿಯಮಿತವಾಗಿ ಔಷಧಿ ತೆಗೆದುಕೊಳ್ಳಿ.

* ಮದ್ಯಪಾನ, ಗುಟ್ಕಾ ಮತ್ತುಸಿಗರೇಟ್ನಂತಹ ತಂಬಾಕು ಉತ್ಪನ್ನಗಳ ಸೇವನೆ ನಿಲ್ಲಿಸಿ. ಇವುಗಳ ಸೇವನೆ ಕೋವಿಡ್–19 ಮತ್ತು ಶ್ವಾಸಕೋಶದ ಕಾಯಿಲೆಯ ಅಪಾಯವನ್ನು ಹೆಚ್ಚಿಸುತ್ತದೆ (ತಂಬಾಕನ್ನು ನಿಲ್ಲಿಸಲು ಉಚಿತ ಆಪ್ತ ಸಮಾಲೋಚನೆಗಾಗಿ 1800-11-2356)

* ಮನೋಸಾಮಾಜಿಕ ಸಮಸ್ಯೆ ಪರಿಹಾರಕ್ಕೆ 080-46110007ಗೆ ಕರೆ ಮಾಡಿ.

ಲೇಖಕ: ಸಹಾಯಕ ಪ್ರಾಧ್ಯಾಪಕರು,ಮನೋವೈದ್ಯಕೀಯ ಸಮಾಜಶಾಸ್ತ್ರ ವಿಭಾಗ, ನಿಮ್ಹಾನ್ಸ್, ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.