ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಗರ್ಭಿಣಿಯರಲ್ಲಿ ಡೆಂಗಿ: ಪರಿಣಾಮಗಳೇನು? ಮುನ್ನೆಚ್ಚರಿಕೆ ಕ್ರಮಗಳೇನು?

ಗರ್ಭಿಣಿಯರಲ್ಲಿ ಡೆಂಗಿ: ಮುನ್ನೆಚ್ಚರಿಕೆ ಕ್ರಮಗಳೇನು?
ಡಾ. ವನಿತಾ ವೈಷ್ಣವ್‌, ಅಪೋಲೊ ಕ್ರೇಡಲ್ ಎಂಡ್ ಚೈಲ್ಡ್ರೆನ್ಸ್ ಹಾಸ್ಪಿಟಲ್.
Published 30 ಆಗಸ್ಟ್ 2024, 19:59 IST
Last Updated 30 ಆಗಸ್ಟ್ 2024, 19:59 IST
ಅಕ್ಷರ ಗಾತ್ರ

ಈಡೀಸ್‌ ಈಜಿಪ್ಟಿ ಪ್ರಭೇದದ ಸೊಳ್ಳೆ ಕಚ್ಚುವುದರಿಂದ ಡೆಂಗಿ ಬರುತ್ತದೆ. ಉಷ್ಣ ಮತ್ತು ಉಪೋಷ್ಣ ವಲಯಗಳಲ್ಲದೇ ಜಾಗತಿಕವಾಗಿ ಸದ್ದು ಮಾಡುತ್ತಿರುವ ಸೋಂಕುಗಳಲ್ಲಿ ಇದೂ ಒಂದಾಗಿದೆ. ಉನ್ನತ ಜ್ವರ, ತೀವ್ರ ತಲೆನೋವು, ಮಾಂಸಖಂಡ ಮತ್ತು ಕೀಲುಗಳಲ್ಲಿ ನೋವು ಮತ್ತು ದದ್ದು ಇವೆಲ್ಲವೂ ಡೆಂಗಿ ಜ್ವರದ ಲಕ್ಷಣಗಳು. ಗರ್ಭಿಣಿಯರಿಗೆ ಡೆಂಗಿ ಜ್ವರ ಬಂದರೆ ತಾಯಿ ಮತ್ತು ಮಗುವಿಗೆ ತೊಂದರೆ ಹೆಚ್ಚು. ಹಾಗಾಗಿ ಹೆಚ್ಚು ಜಾಗ್ರತೆ ವಹಿಸಬೇಕು. 

ಮುನ್ನೆಚ್ಚರಿಕೆ ಕ್ರಮಗಳು

ಸೊಳ್ಳೆ ಕಡಿತ ತಪ್ಪಿಸಿ: ಸಾಧ್ಯವಾದಷ್ಟು ಸೊಳ್ಳೆ ನಿರೋಧಕಗಳನ್ನು ಬಳಸಿ. ಸಂರಕ್ಷಣಾತ್ಮಕ ಉಡುಪುಗಳನ್ನು ಧರಿಸಿ. ಅಗತ್ಯವಿದ್ದರೆ ಸೊಳ್ಳೆಪರದೆ ಬಳಸಿ. 

ಪರಿಸರ ಸ್ವಚ್ಛವಾಗಿರಲಿ:  ನಿಂತ ನೀರಿನ ಸಂಪರ್ಕದಿಂದ ದೂರ ಉಳಿಯಿರಿ. ಮುಚ್ಚಳವಿಲ್ಲದ ಪಾತ್ರೆಗಳಲ್ಲಿ ಉಳಿದ ನೀರು, ಕೊಳಚೆ ನೀರು ಸೊಳ್ಳೆಗಳ ಉತ್ಪಾದನಾ ಸ್ಥಳಗಳಾಗಿರುತ್ತವೆ. ಸುರಕ್ಷಿತವಾಗಿರಲು ಇಂಥ ಸ್ಥಳಗಳಿಂದ ದೂರವಿರಿ. ವೈಯಕ್ತಿಕ ಸ್ವಚ್ಛತೆಗೂ ಗಮನ ಕೊಡಿ. 

ಡೆಂಗಿ ಹೆಚ್ಚಿರುವ ಸ್ಥಳಗಳಲ್ಲಿ ವಾಸಿಸುತ್ತಿರುವ ಗರ್ಭಿಣಿಯರು ಅಗತ್ಯವಾಗಿ ನಿಯಮಿತ ತಪಾಸಣೆ ಮಾಡಿಕೊಳ್ಳಿ. ಔಷಧಗಳ ಸೇವನೆಗಳ ಬಗ್ಗೆ ವೈದ್ಯರ ಸಲಹೆ ಪಡೆಯಿರಿ. 

ಸಾಕಷ್ಟು ನೀರು ಕುಡಿಯಿರಿ: ಗರ್ಭಿಣಿಯರು ದೇಹದಲ್ಲಿ ನೀರಿನಂಶವನ್ನು ಉಳಿಸಿಕೊಳ್ಳುವುದು ಮುಖ್ಯ. ಡೆಂಗಿ ಜ್ವರ ಬಂದಾಗ ವಾಂತಿಯಾದರೆ, ನಿರ್ಜಲೀಕರಣ ಉಂಟಾಗಬಹುದು. ಇಂಥ ಸಮಯದಲ್ಲಿ ದೇಹದಲ್ಲಿ ಪ್ಲೇಟ್‌ಲೆಟ್‌ಗಳ ಸಂಖ್ಯೆ ಕಡಿಮೆಯಾಗುತ್ತ.

ಬಹಳ ಸುಸ್ತಾಗುತ್ತದೆ. ಹಾಗಾಗಿ ಆಗಾಗ್ಗೆ ನೀರು ಕುಡಿಯುತ್ತಿರಿ. 

ಆರೋಗ್ಯಕರ ಆಹಾರಕ್ರಮ: ಶುದ್ಧ ನೀರು ಅಥವಾ ಕುದಿಸಿ ಆರಿಸಿದ ನೀರನ್ನು ಕುಡಿಯಬೇಕು. ರೋಗನಿರೋಧಕ ಶಕ್ತಿಯ ಹೆಚ್ಚಳಕ್ಕೆ ಪೋಷಕಾಂಶಯುಕ್ತ ಅಹಾರ ಸೇವಿಸಬೇಕು. ಎಂಟು ತಾಸು ಚೆನ್ನಾಗಿ ನಿದ್ರೆ ಮಾಡಿ. 

ಆಗುವ ಪರಿಣಾಮಗಳು

ಸೋಂಕಿನ ತೀವ್ರತೆಯನ್ನು ಅವಲಂಬಿಸಿ, ಅದರ ಫಲಿತಾಂಶ ಇರುತ್ತದೆ. 

ಗರ್ಭಪಾತ: ತೀವ್ರ ರಕ್ತಸ್ರಾವ ಉಂಟಾಗುವು ದರಿಂದ ಗರ್ಭಪಾತ ಉಂಟಾಗುವ ಸಾಧ್ಯತೆ ಹೆಚ್ಚು.  ಅವಧಿಗೆ ಮುನ್ನ ಹೆರಿಗೆಯಾಗಬಹುದು. ಜತೆಗೆ ಶಿಶು ಅವಧಿಗೆ ಮುನ್ನ ಜನಿಸುವುದರಿಂದ ಅದಕ್ಕೆ ಸಂಬಂಧಪಟ್ಟ ಅಪಾಯ ಹೆಚ್ಚು. 

ಕಡಿಮೆ ತೂಕವಿರುವ ಶಿಶು: ಸೋಂಕಿನಿಂದಾಗಿ ರೋಗನಿರೋಧಕ ಶಕ್ತಿ ಸಮರ್ಪಕವಾಗಿ ಇಲ್ಲದೇ ಇರುವುದರಿಂದ ಶಿಶುವಿಗೆ ಕಡಿಮೆ ತೂಕ ಇರಬಹುದು. 

ಡೆಂಗಿ ಜ್ವರದಿಂದ ಗರ್ಭಿಣಿ ತೀವ್ರ ಸುಸ್ತಿನಿಂದ ಬಳಲಬಹುದು. ರಕ್ತದ ಒತ್ತಡ, ಸಕ್ಕರೆ ಪ್ರಮಾಣ, ಉಸಿರಾಟದಲ್ಲಿ ಏರುಪೇರು ಉಂಟಾಗಬಹುದು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT